ಟಿವಿ ಚಾನೆಲ್ನವರು ನನ್ನ ಎಲ್ಲ ಭಾಷೆಯ ಸಿನಿಮಾಗಳನ್ನು ಪ್ರಸಾರ ಮಾಡ್ತಿರ್ತಾರೆ. ಈಗ ಲಾಕ್ಡೌನ್ ಟೈಮಲ್ಲಿ ನನ್ನ ಸಿನಿಮಾಗಳನ್ನು ನಾನು ಒಬ್ಳು ಪ್ರೇಕ್ಷಕಿ ಆಗಿ ಆ್ಯಡ್ಸ್ ಮಧ್ಯೆ ನೋಡೋದೇ ಒಂದು ಖುಷಿ. ಕೆಲವೊಂದು ಸೀನ್ ಅಥವಾ ಸಾಂಗ್ ನೋಡಿದಾಗ ಅದಕ್ಕೆ ಸಂಬಂಧಪಟ್ಟ ಘಟನೆಗಳೆಲ್ಲ ನೆನಪಿಗೆ ಬರುತ್ತೆ. ಇತ್ತೀಚೆಗೆ ‘ಬೆಲ್ ಬಾಟಂ’ ಸಿನಿಮಾ ನೋಡುವಾಗ್ಲೂ ಹಾಗೇ ಆಯ್ತು. ಆಗ ನಡೆದ ಒಂದು ಸಂದರ್ಭ ನೆನಪಿಗೆ ಬಂತು 😞

ಆ ದಿನ ನಾವು ಜೋಗ ಜಲಪಾತದ ಹತ್ರ ಸಾಂಗ್ ಶೂಟ್ ಮಾಡ್ತಿದ್ವಿ. ಶೂಟ್ ಎಲ್ಲ ಮುಗಿದು ಪ್ಯಾಕ್ ಅಪ್ ಆಗುವಾಗ, ಅಮ್ಮ ಏನೋ ಒಂಥರ ಅನಿಸ್ತಿದೆ, ಬೇಗ ಹೊರಡೋಣ ಅಂದ್ರು. ತಿಂಡಿ ತಿಂತಿದ್ದ ನಾನು, ಈಗ ಹೋಗೋದು ಹೋಟೆಲ್ಗೇ ಅಲ್ವಾ ಅಮ್ಮ, ಮನೆಗಲ್ಲ ಯಾಕೆ ಅರ್ಜೆಂಟ್? ಆರಾಮಾಗೆ ಹೊರಡೋಣ ಅಂದೆ. ಸ್ವಲ್ಪ ಹೊತ್ತಾದ ಮೇಲೆ, ಬೇಗ ಹೋಗೋಣ, ಉಸಿರು ಕಟ್ಟಿದ್ ಹಾಗಾಗ್ತಿದೆ ಅಂದ್ರು ಅಮ್ಮ. ನಂಗೆ ತುಂಬಾ ಗಾಬರಿ ಆಯ್ತು, ತಡಮಾಡದೆ ಅವ್ರನ್ನು ಆಸ್ಪತ್ರೆಗೆ ಕರ್ಕೊಂಡ್ ಹೋಗೋಕ್ ಕಾರ್ ರೆಡಿ ಮಾಡಿಸ್ದೆ.
ಸಾಗರದಲ್ಲಿರೋ ಕೆಲವು ಆಸ್ಪತ್ರೆಗಳಿಗೆ ಕಾಲ್ ಮಾಡ್ದೆ. ಒಂದ್ ಆಸ್ಪತ್ರೆಯಲ್ಲಿನ ಸ್ಟಾಫ್, ಡಾಕ್ಟರ್ ರಾತ್ರಿ 7.30 ವರೆಗೂ ಆಸ್ಪತ್ರೆಯಲ್ಲಿ ಇರ್ತರೆ ಅಂದ್ರು, ನೀವಿದ್ದಲ್ಲಿಗೆ ರೀಚ್ ಆಗೋಕೆ ಒಂದೆರಡು ಗಂಟೆಗಳು ಬೇಕಾಗುತ್ತೆ ಅಂದ್ರು. ಕಾಯ್ತಾ ಇದ್ರೆ ತಡ ಆಗುತ್ತೆ ಅಂತ ನಾನೇ ಅಮ್ಮನ್ನ ಕಾರಲ್ಲಿ ಕರ್ಕೊಂಡು ಸಾಗರದ ಆ ಹಾಸ್ಪಿಟಲ್ಗೆ ಹೋದ್ರೆ, ಅಲ್ಲಿ ಡಾಕ್ಟ್ರೇ ಇರ್ಲಿಲ್ಲ. ಅವ್ರು ಸುಳ್ಳು ಹೇಳಿದ್ದಕ್ಕೆ ಸಿಕ್ಕಾಪಟ್ಟೆ ಕೋಪ ಬಂದಿತ್ತು, ಚೆನ್ನಾಗಿ ಬೈಬೇಕು ಅನ್ನೋವಷ್ಟರಲ್ಲಿ, ಡಾಕ್ಟ್ರು ಇನ್ನೇನು ಬಂದು ಬಿಡ್ತಾರೆ ಅಂತ ಸಮಾಧಾನ ಮಾಡಿದ್ರು.

ಅಮ್ಮನ ಸಂಕಟ ನೋಡಿ ನಾನು ಚಡಪಡಿಸ್ತಿರೋವಾಗ್ಲೇ ಡಾಕ್ಟರ್ ಬಂದ್ರು. ನಾವು ಚಿಕ್ಕವರಿದ್ದಾಗ ಮನೆ ಕಟ್ಟಿಸೊವಾಗ ಧೂಳಿಂದ ಅಮ್ಮಂಗೆ ಅಸ್ತಮಾ ಬಂದಿತ್ತು, ಅದು ಗುಣ ಆಗಿತ್ತು. ಬಹುಶಃ ಜೋಗದ ಕೋಲ್ಡ್ ವಾತಾವರಣದಿಂದ ಅಸ್ತಮಾ ಲಕ್ಷಣ ಸ್ವಲ್ಪ ಕಾಣಿಸಿರ್ಬೋದು ಅಂತ ಯೋಚ್ನೆ ಮಾಡ್ತಿದ್ದೆ. ಆ ಕಡೆ ಅಮ್ಮಂಗೆ ಡಾಕ್ಟರ್ ನೆಬ್ಯುಲೈಸರ್ ಕೊಟ್ಟು ನಂತರ ಆಕ್ಸಿಜನ್ ಮಾಸ್ಕ್ ಹಾಕಿದ್ರು. ಆದ್ರೂ ಅಮ್ಮನ ಆರೋಗ್ಯ ಸುಧಾರಿಸ್ಲಿಲ್ಲ. ಆಗ ನನ್ನ ಆತಂಕ ಹೆಚ್ಚಾಯ್ತು. ಯಾಕಂದ್ರೆ, ನಂಗೆ ಅಮ್ಮ ಅಂದ್ರೆ ಪ್ರಾಣ, ಅವರೇ ನನ್ ಪ್ರಪಂಚ. ಆ ಕ್ಷಣದಲ್ಲಿ ಅವರ ಸಂಕಟ ನೋಡಿ ನಂಗೂ ಸಂಕಟ ಅನಿಸ್ತಿತ್ತು. ಏನ್ ಮಾಡ್ಬೇಕು ಅಂತ ತೋಚ್ತಿರ್ಲಿಲ್ಲ. ಆಗ ಶಿವಮೊಗ್ಗಕ್ಕೆ ಕರೆದುಕೊಂಡು ಹೋದ್ರೆ ಅಲ್ಲಿನ ಆಸ್ಪತ್ರೆಯಲ್ಲಿ ಹೆಚ್ಚಿನ ಫೆಸಿಲಿಟಿ ಇರುತ್ತೆ ಅಂತ ಆ ಡಾಕ್ಟರ್ ಹೇಳಿದ್ರು. ನಾನು ನಮ್ಮ ಫ್ಯಾಮಿಲಿ ಡಾಕ್ಟರ್ಗೆ ಕಾಲ್ ಮಾಡಿದಾಗಲೂ ಅವರೂ ಅದೇ ಹೇಳಿದ್ರು. ಸರಿ ಎಂದೆ, ಅಲ್ಲಿನ ಡಾಕ್ಟರ್ ಆ್ಯಂಬುಲೆನ್ಸ್ ಅರೇಂಜ್ ಮಾಡಿದ್ರು. ಅಮ್ಮನನ್ನು ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗೋದ್ ನನಗೆ ಇಷ್ಟ ಇರಲಿಲ್ಲ, ಎಲ್ಲಕ್ಕಿಂತ ಹೆಚ್ಚು ನನಗೆ ಅವರು ಆ್ಯಂಬುಲೆನ್ಸ್ನಲ್ಲಿ ಇರೋದನ್ನು ನೋಡೋದಿರಲಿ ಕಲ್ಪಿಸಿಕೊಳ್ಳೋದೂ ಕಷ್ಟ. ಆ್ಯಂಬುಲೆನ್ಸ್ ಅಂದ್ರೇನೇ ನಂಗೊಂಥರ ಸಂಕಟ. ಯಾವಾಗ್ಲೂ ರಸ್ತೆಯಲ್ಲಿ ಹೋಗುವಾಗ ಆ್ಯಂಬುಲೆನ್ಸ್ ಕಾಣಿಸಿದ್ರೆ, ಅದರ ಸೈರನ್ ಕೇಳಿಸಿದ್ರೆ ನಾನು ಅದರ ಒಳಗಿರುವವರಿಗೆ ಒಳ್ಳೇದ್ ಆಗಲಿ ಅಂತ ಪ್ರಾರ್ಥನೆ ಮಾಡ್ಕೋತೀನಿ. ಆದರೆ ಅವತ್ತು ಅಮ್ಮನಿಗೆ ಆ್ಯಂಬುಲೆನ್ಸ್ ಅನಿವಾರ್ಯ ಆಗಿತ್ತು. ಪುಣ್ಯಕ್ಕೆ ಅವತ್ತು ಬಂದಿದ್ದು ಮಾಮೂಲಿ ಆ್ಯಂಬುಲೆನ್ಸ್ ಥರ ಇಲ್ಲದೆ ಕಾರಿನ ಹಾಗೆ ಇದ್ದಿದ್ದು ಸ್ವಲ್ಪ ಸಮಾಧಾನ ಕೊಟ್ಟಿತ್ತು.

ನಾವು ಶಿವಮೊಗ್ಗ ಕಡೆಗೆ ಹೊರಟಿದ್ವಿ. ಅದು ಸುಮಾರು ಎರಡು ಗಂಟೆ ಜರ್ನಿ. ರಾತ್ರಿ ಸಮಯ, ಜೋರಾಗಿ ಮಳೆ ಬರ್ತಿತ್ತು, ಕತ್ತಲೆ, ಜೊತೆಗೆ ಕಾಡುದಾರಿ ಬೇರೆ. ನಾನು ಆ್ಯಂಬುಲೆನ್ಸ್ನಲ್ಲಿ ಅಮ್ಮನ ಜೊತೆಗಿದ್ರೆ ಹಿಂದೆ ನನ್ನ ಕಾರಲ್ಲಿ ನನ್ನ ಸ್ಟಾಫ್ ಫಾಲೋ ಮಾಡ್ತಿದ್ರು. ಹಾಗೆ ಹೋಗ್ತಿರೋವಾಗ ನಾಳೆ ಕಾಸ್ಟ್ಯೂಮ್ ಟ್ರಯಲ್ ಇದೆ ಅಂತ ಸಿನಿಮಾ ಟೀಮ್ನವರು ಕಾಲ್ ಮಾಡಿದ್ರು. ಆಗ ನಾನು ಅಮ್ಮಂಗೆ ಆರಾಮಿಲ್ದಿರೋದು, ಆ್ಯಂಬುಲೆನ್ಸ್ನಲ್ಲಿ ಹೋಗ್ತಿರೋದು ಎಲ್ಲ ಹೇಳ್ದೆ. ಹಾಗಾಗಿ ಆ ವಿಷ್ಯ ನಮ್ ಪ್ರೊಡ್ಯೂಸರ್ಗೂ ಗೊತ್ತಾಯಿತು. ನಾವ್ ಹಾಸ್ಪಿಟಲ್ ತಲುಪೋವಷ್ಟರಲ್ಲಿ ಶಿವಮೊಗ್ಗದಲ್ಲಿರೋ ಅವರ ಫ್ರೆಂಡ್ಸ್ಗೆ ಹೇಳಿ, ಡಾಕ್ಟರ್ಗೆ ಮಾತಾಡಿ ಎಲ್ಲ ವ್ಯವಸ್ಥೆ ಮಾಡಿದ್ರು. ನಾವಲ್ಲಿಗೆ ರೀಚ್ ಆದ ತಕ್ಷಣ ಟ್ರೀಟ್ಮೆಂಟ್ ಶುರು ಮಾಡಿದ್ರು, ಅಮ್ಮ ಸ್ವಲ್ಪ ಸುಧಾರಿಸಿಕೊಂಡ್ರು. ನಂಗೂ ಸ್ವಲ್ಪ ಸಮಾಧಾನ ಆಯ್ತು. ನಂತರ ನಿರ್ಮಾಪಕರು ಸಂತೋಷ್ ಮತ್ತು ಸಂದೀಪ್ ಕೂಡ ಆಸ್ಪತ್ರೆಗೆ ಬಂದ್ರು. ಅಷ್ಟೊತ್ತಲ್ಲಿ, ಆ ಮಳೆಯಲ್ಲಿ, ಅಷ್ಟು ದೂರ ಬಂದಿದ್ದಕ್ಕೆ, ಮಾರಲ್ ಸಪೋರ್ಟ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್. ಅವತ್ತು ಜೊತೆಗಿದ್ದು ಹೆಲ್ಪ್ ಮಾಡಿದ ಅವರೆಲ್ಲರಿಗೂ ತುಂಬಾ ಥ್ಯಾಂಕ್ಸ್ 🙏🏻🙏🏻🙏🏻


ಹಾಸ್ಪಿಟಲ್ಗೆ ಅಡ್ಮಿಟ್ ಆಗಿದ್ದ ಅಮ್ಮನ ಉಸಿರಾಟ ನಾರ್ಮಲ್ಗೆ ಬರೋಕ್ ಶುರು ಆಯ್ತು. ಬೆಂಗಳೂರಿಂದ ಅಣ್ಣನೂ ಆಸ್ಪತ್ರೆಗೆ ಬಂದ. ಮಾರನೇ ದಿನ ಈ ಕಷ್ಟದ ನಡುವೆ ನಾನು ಶೂಟಿಂಗ್ಗೆ ಹೋಗಬೇಕಿತ್ತು. ಅಮ್ಮ ಕೂಡ ಶೂಟಿಂಗ್ಗೆ ಹೋಗು, ಯಾಕಂದ್ರೆ ಶೂಟಿಂಗ್ ಮಿಸ್ ಮಾಡಿದ್ರೆ ಪ್ರೊಡ್ಯೂಸರ್ಗೆ ಎಷ್ಟು ನಷ್ಟ ಆಗುತ್ತೆ ಅಂದ್ರು. ಯಾವತ್ತೂ ಅಮ್ಮನನ್ನು ಬಿಟ್ಟು ಹೋಗದವಳು ಆ ದಿನ ಅಣ್ಣನ ಜೊತೆ ಅವರನ್ನು ಬಿಟ್ಟು ಮನಸಿಲ್ಲದ ಮನಸಿಂದ ಶೂಟಿಂಗ್ಗೆ ಹೊರಟೆ. ರಾತ್ರಿ ಇಡೀ ನಿದ್ರೆ ಬೇರೆ ಇರ್ಲಿಲ್ಲ, ಕಾರ್ನಲ್ಲಿ ಹೋಗ್ತಾ ದಾರಿಯುದ್ದಕ್ಕೂ ಅತ್ತಿದ್ದು ಈಗ್ಲೂ ನೆನಪಿದೆ. ಇಷ್ಟೆಲ್ಲ ಏತಕೆ ಹೇಳ್ತಿದೀನಿ ಅಂತ ನೀವು ಯೋಚ್ನೆ ಮಾಡ್ತಿದ್ರೆ ಅದಕ್ಕೆ ನನ್ ಉತ್ರ ಕೂಡ, ‘ಏತಕೆ..’ ಅಂತನೇ ಇರುತ್ತೆ.

‘ಬೆಲ್ ಬಾಟಂ’ ಸಿನಿಮಾದ ‘ಏತಕೆ ಬೊಗಸೆ ತುಂಬಾ ಆಸೆ ನೀಡುವೆ..’ ಅನ್ನೋ ಸಾಂಗ್ ನೋಡೋವಾಗ್ಲೇ ಇಷ್ಟೆಲ್ಲ ನೆನಪಾಗಿದ್ದು. ಅಷ್ಟೇ ಅಲ್ಲ, ಆ ಸಾಂಗ್ ಶೂಟ್ ಮಾಡೋವಾಗ್ಲೇ ಇಷ್ಟೊತ್ತು ನಾನು ಹೇಳಿದ್ದೆಲ್ಲ ನಡೆದಿದ್ದು. ಈ ಸಾಂಗ್ ನೋಡುವ ಯಾರಿಗೂ ನಾನು ಇಂಥದ್ದೊಂದು ಸಂಕಟದಲ್ಲೇ ಆ್ಯಕ್ಟ್ ಮಾಡಿದ್ದೆ ಅಂತ ಒಂದು ಸಣ್ ಸುಳಿವು ಕೂಡ ಸಿಗಲ್ಲ. ಇದೊಂದು ಕಂಪ್ಲೀಟ್ ರೊಮ್ಯಾಂಟಿಕ್ ಸಾಂಗ್, ಈ ವೀಡಿಯೊ ಪೂರ್ತಿ ನಾನು ನಗುತ್ತಲೇ ಇದೀನಿ.

ಕಲಾವಿದರಿಗೆ ಇದೆಲ್ಲ ಅನಿವಾರ್ಯ. ನಾವು ಪರ್ಸನಲ್ ಆಗಿ ಎಂಥದ್ದೇ ನೋವಲ್ಲಿದ್ರೂ ಕಲಾವಿದರಾಗಿ ನಾವೆಷ್ಟೋ ಸಲ ಸುಳ್ಳು ಭಾವನೆಗಳನ್ನು ಎಕ್ಸ್ಪ್ರೆಸ್ ಮಾಡ್ಬೇಕಾಗುತ್ತೆ. ಅಂಥ ಸಂಕಟಗಳನ್ನೆಲ್ಲ ದಾಟಿಯೇ ನಾವು ಮುಂದೆ ಬರಬೇಕಾಗಿರುತ್ತೆ. ಕೆಲವೊಮ್ಮೆ ನಾವು ನೋಡೋ ಸುಂದರ ದೃಶ್ಯದ ಹಿಂದೆ ಅದೆಷ್ಟು ನೋವಿರುತ್ತಲ್ವಾ!?
-ಹರಿಪ್ರಿಯಾ
ನಿಮ್ಮ “ಏತಕೆ…” ಹಾಡು ನನಗೆ ತುಂಬಾ ಹಿಡಿಸಿದ್ದ ಕೆಲವೇ ಹಾಡುಗಳಲ್ಲಿ ಒಂದು. ನೀವು ನಟಿಸಿದ ಇಷ್ಟು ಒಳ್ಳೆಯ ಹಾಡಿನ ಹಿಂದೆ ಇಂತಹಾ ಕಹಿ ಅನುಭವ ಪಟ್ಟಿದ್ದೀರಿ ಅಂತ ಓದಿದಾಗ ಮನಸ್ಸಿಗೆ ಬಹಳ ಬೇಸರ ಆಯ್ತು ಮೇಡಮ್…
– ಮಣಿ ನಿಮ್ಮ ಅಭಿಮಾನಿ
You are a wonderful daughter. Commendable job, Haripriya. Really touched my heart reading this. Kindly take care of your mother’s health always.
I follow all your posts closely on fb 👌
Great ನೀವು 🙏….
Great ..Kan tumbi bandtu koneyalli
Really I appreciate your dedication towards work and love towards Maa. One big salute from my end for managing both!!
ನಿಮ್ಮ ಅನುಭವವನ್ನು ಎಷ್ಟು ಚೆನ್ನಾಗಿ ಬರೆದಿದ್ದಿರಿ ಅಕ್ಕ. ಅಮ್ಮ ನೂರೂ ಕಾಲ ಬಾಳಲಿ ಎಂದು ದೇವರಲ್ಲಿ ಕೇಳಿಕೊಳ್ಳತ್ತೆನೆ.
Yes
kone pyaara odirlilla eega taane odide idarindane tiliyutte; jeevana shailiyali. uduge-todugeyali, bedagu-binnanadali, aahaara-vihaaradali, deha rachaneli manushya-manushyarali badalirabahudu aadare bhaavanegalu maatra ellarigoo, ellaralloo onde aagiruttave. kanishta paksha obba parichitanaagiyaadaroo nimma aa sankatada samayadalli joteyaguttidde naa khanditaa..! endu tilisuttaa aa sandharbadali nimma nade nannanoo seridante ellaa makkaligoo maadhari.
It’s ture on screen mele namgae yenu gothagalla but. off screen alli thumba problem iruthae
idannu odida pratiyobbara manakaragi kannugalu kela nimisha oddeyaagi nimmibbara bhaavanaatmaka odanaatavannu pratibimbisuttiruva bhaavachitravu bhaavanaatmaka bhaandhvyavannu pratinidhisuvantide haagu konege santasa marukalisuttiruvantide.
O my god. Adakke bogase alli meenu ididu bande mele neeralli bittu edemele kaittu nittusiru bido seen so so so emotional.
I feel that time you feel so much your mother. So proud. Always love your mom.
Hats off to u Mam😍