ಜೂನ್ ಅಂದ್ರೆ ಸಾಮಾನ್ಯವಾಗಿ ಮಳೆಗಾಲ ಆರಂಭ ಆಗಿರುತ್ತೆ, ಜೊತೆಗೆ ಶಾಲೆಗಳು ಕೂಡ. ಮೊನ್ಮೊನ್ನೆ ಹೀಗೇ ಮಳೇಲಿ ಸ್ವಲ್ಪ ನೆನೆದೆ, ಅದು ಸ್ಕೂಲ್ ಡೇಸ್ನ ನೆನೆಸಿಕೊಳ್ಳೋ ಥರ ಮಾಡ್ತು. ಇದ್ದಕ್ಕಿದ್ದ ಹಾಗೆ ನೆನಪು ಜೂನ್ನಿಂದ ಜಂಕ್ ಫುಡ್ಸ್ಗೆ ಜಂಪ್ ಆಯ್ತು.
ಆಗೆಲ್ಲ ಸ್ಕೂಲ್ಗೆ ಹೋಗೋವಾಗ ಅಪ್ಪ ಪಾಕೆಟ್ ಮನಿ ಕೊಡೋರು. ಅದ್ರಿಂದ ನನ್ ಫೇವರಿಟ್ ಸ್ನ್ಯಾಕ್ಸ್ ತಗೊಳ್ತಿದ್ದೆ. ಒಂದು ರೂಪಾಯಿಯಿಂದ ಶುರುವಾದ್ದು ಇನ್ನೊಂದ್ ವರ್ಷಕ್ಕೆ ಎರಡು, ಮತ್ತೊಂದ್ ವರ್ಷಕ್ಕೆ ಮೂರು.. ಹೀಗೆ ಕ್ಲಾಸ್ ಹೆಚ್ಚಾದ್ ಹಾಗೆ ಒಂದೊಂದೇ ರೂಪಾಯಿ ಹೆಚ್ಚಾಗ್ತಿತ್ತು. ಆ ಒಂದೆರಡು ರೂಪಾಯಲ್ಲೇ ಏನೇನ್ ಬರುತ್ತೆ ಅಂತ ಭಾರಿ ಲೆಕ್ಕಾಚಾರ ಹಾಕಿ ಅಷ್ಟರಲ್ಲೇ ವೆರೈಟಿ ವೆರೈಟಿ ತಿಂಡಿ ತಗೋತಿದ್ದೆ. ಅದ್ನ ಆಮೇಲೆ ಸ್ಕೂಲ್ಗೆ ಹೋಗ್ತಾ, ಮನೆಗೆ ಬರ್ತಾ ಅಥವಾ ಸ್ಕೂಲ್ನಲ್ಲಿ ಕದ್ದುಮುಚ್ಚಿ ಪಿಟಿ ಪೀರಿಯಡ್ನಲ್ಲಿ ಆಟ ಆಡ್ತಾ ತಿಂತಿದ್ದೆ.
ಆಗೆಲ್ಲ ಹಾಗೆ ನಾನ್ ಎಷ್ಟು ಜಂಕ್ ಫುಡ್ಸ್ ತಿಂತಿದ್ದೆ ಅಂದ್ರೆ ಸರಿಯಾಗಿ ಊಟನೇ ಮಾಡ್ತಿರ್ಲಿಲ್ಲ. ಖಾಲಿ ಆದ್ರೆ ಮತ್ತೆ ಬೇಕು ಅಂತ ಅಮ್ಮ-ಅಪ್ಪನ ಹತ್ರ ಹಟ ಮಾಡ್ತಿದ್ದೆ. ಮನೆಗೆ ನೆಂಟ್ರು, ಯಾರಾದ್ರೂ ಬಂದ್ರೆ, ‘ನಿಮ್ ಮಗಳು ಏನ್ ಊಟನೇ ಮಾಡಲ್ವಾ?’ ಅಂತ ಕೇಳ್ತಿದ್ರಂತೆ. ಯಾಕಂದ್ರೆ ತುಂಬಾ ಸಣ್ಣ ಇದ್ದೆ.😅
ಈಗ್ಲೂ ನಂಗೆ ಸ್ಕೂಲ್ ಡೇಸ್ನಲ್ಲಿ ತಗೋತಿದ್ ಆ ಸ್ನ್ಯಾಕ್ಸ್ ನೆನಪಾಗ್ತಿರುತ್ತೆ. ಅದ್ರಲ್ಲಿ ‘ಕಲ್ಪನಾ’ (ಹುಣಸೇಹಣ್ಣು, ಎಳಚೇಹಣ್ಣು ಹಾಕಿ ಮಾಡಿರ್ತಾರೆ) ಅನ್ನೋ ತಿಂಡಿ ಅಂತೂ ನನ್ ಫೇವರಿಟ್. ಆಗ ಸಿಗ್ತಿದ್ದ ತಿಂಡಿಗಳಲ್ಲಿ ಈಗ್ಲೂ ಕೆಲವು ಸಿಗುತ್ವೆ. ನಾನು ಎಲ್ಲಾದ್ರೂ ಹಳ್ಳಿ ಕಡೆ ಶೂಟಿಂಗ್ಗೆ ಹೋದ್ರೆ, ‘ಸುತ್ತ ಎಲ್ಲಾದ್ರೂ ಈ ಥರ ತಿಂಡಿ ಇದ್ಯಾ ನೋಡಿ ತಗೊಂಡ್ ಬಾ’ ಅಂತ ಅಸಿಸ್ಟೆಂಟ್ನ ಕಳಿಸ್ತೀನಿ.🙈
ಆಗ ತಿಂಡಿ ಬೇಕು ಅಂತ ಅಳ್ತಿದ್ವಿ, ಈಗ ತಿನ್ಬೇಕಂದ್ರೆ ಅಳಿತೀವಿ. ಯಾಕಂದ್ರೆ ಈಗ ಆವಾಗಿನ್ ಥರ ತಿನ್ನೋ ಹಾಗಿಲ್ಲ. ಏನ್ ತಿನ್ಬೇಕಂದ್ರೂ ಡಯೆಟ್, ಒಂಥರಾ ಅಳೆದುತೂಗಿ ತಿನ್ನೋದು. ‘ನಮ್ ಕಾಲದಲ್ಲಿ ಹೀಗಿರ್ಲಿಲ್ಲ, ಯಾವುದಕ್ಕೂ ಲೆಕ್ಕ ಹಾಕ್ತಿರ್ಲಿಲ್ಲ, ಲೆಕ್ಕ ಹಾಕಿನೂ ತಿಂತಿರ್ಲಿಲ್ಲ’, ಸುಮ್ನೆ ಚೆನ್ನಾಗ್ ತಿನ್ನು’ ಅಂತ ಅಮ್ಮ ಬೈತಾರೆ. ಆದ್ರೆ ಏನ್ ಮಾಡಾಣ? ನನ್ ಪ್ರೊಫೆಷನ್ ಡಯೆಟ್ ಡಿಮಾಂಡ್ ಮಾಡುತ್ತೆ. ಈಗಿನ ಕಾಲನೂ ಹಾಗೇ ಇದೆ.

ಕೊ-ಇನ್ಸಿಡೆನ್ಸ್ ನೋಡಿ.. ಈಗ ಇದ್ನ ಬರೀತಿರೋವಾಗ್ಲೂ ಮಳೆ ಬರೋಕ್ ಶುರುವಾಯ್ತು. ನಂಗೆ ಮತ್ತೆ ಆ ತಿಂಡಿಗಳನ್ನ ತಿನ್ಬೇಕು ಅನಿಸ್ತಿದೆ. ಗೊತ್ತಲ್ವಾ.. ನನ್ ಫೇವರಿಟ್ ‘ಕಲ್ಪನಾ’. ಆದ್ರೆ ಈ ಟೈಮಲ್ಲಿ ಸಿಗೋದು ಕಷ್ಟ. ಅಮ್ಮಂಗೆ ಹೇಳಿ ನನ್ನ ಫೇವರಿಟ್ ಪಾಸ್ಟಾ ಮಾಡಿಸ್ಕೋತೀನಿ. ನಿಮ್ ಫೇವರಿಟ್ ತಿಂಡಿ ಏನು?
-ಹರಿಪ್ರಿಯಾ
Kalpanaa ge Namma UK Alli “Hunchii Zigale”
Antaare Sooo famous……. Women’s fav……👍👍👍👍👍👍
Adondu bangaara tumbikoda samaya.. Suttella kanodu navarangi Duniya aadaru ega bekandroo nanapugala hinde sariyabeku… Nimma nenapugallli namma kelavu thunukugalu adagive…
Mam Nim simplicity thumba ista aythu nivu innu enu marthilla🥰