ಎಲ್ರೂ ಲಾಕ್ಡೌನಲ್ಲಿ ಇದೀವಿ. ಹೆಚ್ಚೂಕಡಿಮೆ ಇನ್ನೊಂದು ವಾರದಲ್ಲಿ ಅದು ಮುಗಿಯುತ್ತೆ. ಆಮೇಲೂ ಮುಂದುವರಿಯುತ್ತಾ? ಗೊತ್ತಿಲ್ಲ. ಸದ್ಯ ಮೇ 17ಕ್ಕೆ ಮುಗಿಯುತ್ತೆ ಅಂದ್ಕೊಳೋಣ. ಆದರೆ ಅದು ಮುಗಿದ್ ಮೇಲೆ ಎಲ್ಲ ಮತ್ತೆ ನಾರ್ಮಲ್ ಆಗೋಕೆ ಕಡಿಮೆ ಅಂದ್ರೂ ಮೂರ್ನಾಲ್ಕು ತಿಂಗಳಾದ್ರೂ ಬೇಕು. ಇದರ ನಡುವೆ, ದೇಶದ ಆರ್ಥಿಕ ಸ್ಥಿತಿ 15-20 ವರ್ಷ ಹಿಂದಕ್ಕೆ ಹೋಗುತ್ತೆ ಅಂತ ಕೆಲವರು ಹೇಳ್ತಿದಾರೆ. ಹಾಗಾಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ನಾವೊಂದಷ್ಟು ಜನ ಆಗ್ಲೇ 10-15 ವರ್ಷ ಹಿಂದಕ್ಕೆ ಹೋಗಿದೀವಿ, ಹೋಗಿ ಬರ್ತಿದೀವಿ. ನಮ್ ಸಿನಿಮಾ ಭಾಷೆಯಲ್ಲಿ ಹೇಳೋದಾದ್ರೆ ರೆಟ್ರೊಗೆ.
ಹಹಹ.. ಏನ್ ಹೇಳ್ತಿದೀನಿ, ಯಾವುದರ ಬಗ್ಗೆ ಹೇಳ್ತಿದೀನಿ ಅಂತ ಯೋಚಿಸ್ತಿದೀರಾ? ಏನಂದ್ರೆ.. ಈಗ ಲಾಕ್ಡೌನ್ ಟೈಮಲ್ಲಿ ಎಲ್ರೂ ಮನೇಲೇ ಇದ್ವಲ್ವಾ? ಸುಮ್ ಸುಮ್ನೆ ಹೊರಗಡೆ ಹೋಗೋ ಹಾಗಿಲ್ಲ ಅಂದ್ಮೇಲೆ ಮನೆ ಒಳಗೇ ಟೈಮ್ಪಾಸ್ ಮಾಡ್ಬೇಕಲ್ವ? ಹೇಗೆ ಟೈಮ್ಪಾಸ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದಾಗ ನಾವೆಲ್ಲ ಚಿಕ್ಕವರಿದ್ದಾಗ ಆಡ್ತಿದ್ದ ಆಟಗಳು ನೆನಪಾದ್ವು.
ನಾವ್ ಆಗ ಮನೆಯಲ್ಲಿ, ದೊಡ್ಡವರು, ಚಿಕ್ಕವರು ಎಲ್ಲ ಸೇರ್ಕೊಂಡು ಸೆಟ್ ಆಟ ಅಂತ ಆಡ್ತಿದ್ವಿ. ಹಾಗೆ ಚೀಟಿ ಬರ್ದು ರಾಜ-ರಾಣಿ, ಕಳ್ಳ-ಪೊಲೀಸ್ ಆಟನೂ ಆಡ್ತಿದ್ವಿ. ಮಜಾ ಅಂದ್ರೆ ! ಆ ಚೀಟಿ ಆಟದಲ್ಲೂ ಚೀಟ್ ಮಾಡ್ಕೊಂಡು ವಿನ್ ಆಗೋದೆಲ್ಲ ಇರ್ತಿತ್ತು.. ಹಹಹ. ಇನ್ನು ಅಂತ್ಯಾಕ್ಷರಿ ಅಂತೂ ಕಾಮನ್. ಹಾಗೆ ನೋಡಿದ್ರೆ ನಮ್ಮ ಜನರೇಷನವ್ರೇ ಅದೃಷ್ಟವಂತರು. ನಾವು ಹಳ್ಳಿಯಲ್ಲಿನ ಆಟಗಳನ್ನೂ ಆಡಿದ್ವಿ (ಅಜ್ಜ-ಅಜ್ಜಿ ಮನೆಗೆ ಹೋಗಿದ್ದಾಗ), ಜೊತೆಗೆ ಸಿಟಿಯಲ್ಲಿನ ಆಟ ಕೂಡ ಆಡಿದ್ವಿ. (ನಾವು ನಿಜಕ್ಕೂ ಲಕ್ಕಿ). ಆದ್ರೆ ಈಗಿನ ಮಕ್ಕಳು ಬರೀ ಮೊಬೈಲ್ ಫೋನ್, ವೀಡಿಯೊ ಗೇಮ್ಸ್ ಅಂಥವುಗಳಿಗೇ ಅಂಟಿಕೊಂಡು ಬಿಟ್ಟಿದ್ದಾರೆ. ನಾನಂತೂ ಬೇಸಿಗೆ ರಜೆ, ಹಬ್ಬಕ್ಕೆ ಊರಿಗೆ ಹೋಗಿದ್ದಾಗ ಕಸಿನ್ಸ್ ಜೊತೆ ಆಡ್ತಿದ್ದ ಆ ಆಟಗಳನ್ನು ಈಗಲೂ ನೆನಪಿಸಿಕೊಳ್ತ ಇರ್ತೀನಿ.
ಈಗ ಲಾಕ್ಡೌನ್ ಟೈಮಲ್ಲಿ ನಮ್ಮನೇಲಿ ಎಲ್ಲ ಒಟ್ಟಾಗಿ ಅಂತ್ಯಾಕ್ಷರಿ ಆಡಿದ್ವಿ. ಹಹಹ.. ವಿಷಯ ಇರೋದೇ ಇಲ್ಲಿ. ನಾವು ಅಂತ್ಯಾಕ್ಷರಿ ಆಡೋವಾಗ ಒಂದ್ ವಿಷಯ ನನ್ ಗಮನಕ್ ಬಂತು. ಅದೊಂಥರ ಆಶ್ಚರ್ಯ ಅಂತನೂ ಅನಿಸ್ತು. ಏನಂದ್ರೆ ಚಿಕ್ಕವರಿದ್ದಾಗ ಅಂತ್ಯಾಕ್ಷರಿ ಆಡೋವಾಗ ಕೆಲವು ಅಕ್ಷರಗಳಿಗೆ ಕೆಲವು ಹಾಡು ಫಿಕ್ಸ್ ಮಾಡ್ಕೋತಿದ್ವಿ. ಉದಾಹರಣೆ ಹೇಳ್ಬೇಕಂದ್ರೆ, ‘ದ’ ಅಂದ್ರೆ ದಾರಿ ಕಾಣದಾಗಿದೆ ರಾಘವೇಂದ್ರನೆ, ‘ಯ’ ಅಂದ್ರೆ ಯಾರಿವಳು ಯಾರಿವಳು, ‘ರ’ ಅಂದ್ರೆ ರಾಮಾಚಾರಿ ಹಾಡುವ..
ಹಾಗೆ ಯಾವಾಗ ಅಂತ್ಯಾಕ್ಷರಿ ಆಡಿದ್ರೂ ಎಷ್ಟೇ ಹೊಸ ಹಾಡುಗಳು ಬಂದಿದ್ರೂ, ಅದದೇ ಹಾಡು ಬಾಯಿಗೆ ಬರ್ತಿತ್ತು. ಹೀಗೆ ನಾವ್ ಚಿಕ್ಕೋರಿರುವಾಗ ಕೇಳಿದ್ ಈ ಹಾಡುಗಳು ಮನಸಲ್ಲಿ ಎಷ್ಟು ಅಚ್ಚೊತ್ತಿವೆ ಅಂದ್ರೆ ನಾನು ನಿದ್ರೆಯಲ್ಲಿರುವಾಗ ಯಾರಾದರೂ ‘ದ’ ಅಂದ್ರೆ ದಾರಿ ಕಾಣದಾಗಿದೆ ರಾಘವೇಂದ್ರನೆ ಅಂತ ಹೇಳ್ಬಿಡ್ತೀನಿ ಅನ್ಸುತ್ತೆ.. ಹಹಹ.
ತಮಾಷೆ ಏನು ಅಂದ್ರೆ ಮೊನ್ನೆ ಅಂತ್ಯಾಕ್ಷರಿ ಆಡುವಾಗ ಕೂಡ, ಆ ಅಕ್ಷರಗಳಿಗೆ ಅದೇ ಹಾಡುಗಳು ಬರ್ತಿದ್ವು.. ಹಹಹ. ನಾನು ಇಂಡಸ್ಟ್ರಿಗೆ ಬಂದು ಹನ್ನೆರಡು ವರ್ಷಗಳಾದ್ವು. ಬೇರೆ ಬೇರೆ ಭಾಷೆಯಲ್ಲಿ ಸುಮಾರು ಸಿನಿಮಾ ಮಾಡಿದೀನಿ. ಇಷ್ಟು ವರ್ಷಗಳಲ್ಲಿನ ನನ್ನ ಸಿನಿಮಾ ಹಾಡುಗಳನ್ನಷ್ಟೇ ಲೆಕ್ಕಕ್ಕೆ ತಗೊಂಡ್ರೂ ನಂದೇ ಅನ್ನೋವಂಥ ನೂರಾರು ಹಾಡುಗಳಿವೆ. ಹಾಗಿದ್ರೂ ಯಾಕೆ ನಾವು ಆಗ ಕೇಳ್ತಿದ್ದ ಆ ಹಾಡುಗಳೇ ಥಟ್ ಅಂತ ನೆನಪಾಗ್ತಿದ್ವು! ಯಾಕೆ ಆ ಅಕ್ಷರಗಳಿಗೆ ಅದೇ ಹಾಡುಗಳು ಅಷ್ಟೊಂದು ಫಿಕ್ಸ್ ಆಗಿವೆ? ಆ ಹಾಡುಗಳನ್ನೆಲ್ಲ ಕೇಳಿದ್ದು ನಾವು ಚಿಕ್ಕೋರಿರುವಾಗ. ಅದಾದ ಮೇಲೆ ಏನೆಲ್ಲ ಚೇಂಜಾಗಿದೆ, ಎಷ್ಟೆಲ್ಲ ಬದಲಾಗಿದೆ. ಆದ್ರೂ ಆ ಅಕ್ಷರಗಳಿಗೆ ಅದೇ ಹಾಡುಗಳು ನೆನಪಾಗೋದಾದ್ರೂ ಯಾಕೆ? ಬಹುಶಃ ನಾವು ಚಿಕ್ಕಂದಿನಲ್ಲಿ ಕೇಳಿದ್ದು, ಅಭ್ಯಾಸ ಮಾಡಿದ್ದು ಮನಸಿನ್ ಮೇಲೆ ತುಂಬಾ ಪ್ರಭಾವ ಬೀರೋದ್ರಿಂದ ಹಾಗಾಗ್ತಿರಬೋದಾ?
ನೀವೇನಾದ್ರೂ ಅಂತ್ಯಾಕ್ಷರಿ ಆಡಿದ್ರಾ, ನಿಮ್ಗೂ ಹೀಗೇ ಆಗುತ್ತಾ?
ಇವತ್ತೂ ಅಂತ್ಯಾಕ್ಷರಿ ಆಡ್ದೆ, ‘ರ’ ಬಂತು. ಯಾವ್ ಹಾಡು ಹಾಡ್ದೆ ಗೆಸ್ ಮಾಡಿ..🙊
-ಹರಿಪ್ರಿಯಾ
Super anubhava mam 30varsh vapas karedukondu hogi bandri.
🙂
Madem ee nimma antyakshariya bagge anisike anubhava hanchikondaddu nanage namma tumbukutumbada nenapu thandukottide ajji thata chikkappa chikkamma atteyandiru avrmakklu ellaru rajadinagalalki ottagi seri ee antyakshari hadtiddvi ivella old memories tumba ista yakendre
Yaaoora cheluva Iva baalyadahareyaa edyeya tumbi olage ildu kasidukonda hridayaaaa
Shivne shyamblinga tanku kanavva
‘ರ’ ಅಂದ್ರೆ ರವಿವರ್ಮನಾ ಕುಂಚದ ಕಲೆ ಬಲೆ ಸಹಕಾರ ವು ಅದೇ ಹಾಡು ಅನಿಸುತ್ತೆ ಅಲ್ವಾ
Excellent Content.. I 👌Hari priya Madam.💃
🙂
Nice content Haripriya ji.
ರ ಅಂದ್ರೆ ರಾಜ ರಾಜಾ…ರಾಜಾ ಹೆಂಗಿರಬೇಕು ಗೋತ್ತ ನನ್ನ ರಾಜಾ….
ಈ ಹಾಡು ಅಲ್ವ…..
ನೀವು ಬರೆದೂ ಅಷ್ಟೂ ಅನುಭವಗಳು ನಮಗೂ ಆಗಿವೆ. ನೀವು ಬರೆದಿದ್ದು ಓದುತ್ತಿದ್ದರೆ, ನನ್ನ ಬಾಲ್ಯ ನೆನಪಿಗೆ ಬಂತು. ನಮ್ಮ ಜೊತೆ ನೀವೂ ಕಳ್ಳ-ಪೋಲೀಸ್, ಚೀಟಿ ಆಟ, ಅಂತ್ಯಾಕ್ಷರಿ ಆಡ್ತಾ ಇದ್ರೇನು ಅನಿಸಿತು ಒಂದು ಕ್ಷಣ. Same to same ‘ದ’ ಅಕ್ಷರ ಬಂದಾಗ ‘ದಾರಿ ಕಾಣದಾಗಿದೆ ರಾಘವೇಂದ್ರನೆ…’ Fix ಇರ್ತಿತ್ತು. ಹಾಗೇ ‘ಡ’ ಬಂದಾಗ ‘ಡುಂಡುಂ ಡೋಲ್ ರಾಕ್ & ರೋಲ್…’ ಹಾಡಿರುತ್ತಿತ್ತು.
‘ರ’ ಬಂದ್ರೆ ‘ರಾಗಿ ಹೊಲದಾಗೆ ಖಾಲಿ ಗುಡಿಸಲು…’ ಹಾಡ್ತಿದ್ವಿ. ನೀವೂ ಇದೇ ಹಾಡಿದ್ರಾ?
🙂 🙂
Hello mam, you really write very well. I just feel like you are narrating it sitting beside us
Thank you 🙂
mele tilisiruva avugale
Yes
ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ.. ಅಥವಾ ರಾ ರಾ..ಸರಸುಕು ರಾ ರಾ… ಅಲ್ವಾ..?