ಕೊರೊನಾ ಬಂದ್ಮೇಲೆ ಎಲ್ರೂ ಕ್ಲೀನ್ ಹ್ಯಾಂಡೆಡ್ ಆಗಿದಾರೆ. ಏನ್ ಮುಟ್ಬೇಕಿದ್ರೂ ಕೈತೊಳ್ಕೋತಾರೆ, ಏನನ್ನ ಮುಟ್ಟಿದ್ರೂ ಕೈತೊಳ್ಕೋತಾರೆ. ರೀಸೆಂಟಾಗಿ ನಾನು ಹಾಗೆ ಕೈತೊಳ್ಕೋತಿರುವಾಗ ಕೆಲವು ವರ್ಷಗಳ ಹಿಂದೆ ನಾನ್ ಆ ಥರ ಮತ್ತೆ ಮತ್ತೆ ಕೈತೊಳ್ಕೋತಿದ್ದು ನೆನಪಾಯ್ತು. ಹಹಹ.. ಖಂಡಿತ ಆಗ ಕೊರೊನಾ ಇರ್ಲಿಲ್ಲ. ಅದ್ಕೆ ಕಾರಣ ಮದರಂಗಿ, ಅದೇ ಮೆಹೆಂದಿ.
ನಂಗೆ ಮೆಹೆಂದಿ ಅಂದ್ರೆ ಚಿಕ್ಕೋಳ್ ಇರೋವಾಗ್ಲಿಂದಾನೇ ತುಂಬಾ ಇಷ್ಟ. ಎಷ್ಟ್ ಇಷ್ಟ ಅಂದ್ರೆ, ಮೆಹೆಂದಿ ಹಾಕೋದ್ ಕಲಿಯೋಕಂತ್ಲೇ ಕ್ಲಾಸ್ಗೆ ಹೋಗಿದ್ದೆ. ಅಲ್ಲಿ ಕ್ಲಾಸಲ್ಲಿ ಕಲಿತಿದ್ನೆಲ್ಲ ಅಮ್ಮ-ಅಪ್ಪನ ಮೇಲೆ ಪ್ರಯೋಗ ಮಾಡ್ತಿದ್ದೆ. ಅಣ್ಣನ ಮೇಲೆ ಕೂಡ, ಬೇಡ ಅಂದ್ರೂ ಬಿಡ್ತಿರ್ಲಿಲ್ಲ. ಕೊನೆಗೆ ಮನೆಗೆ ರಿಲೇಟಿವ್ಸ್ ಯಾರಾದ್ರೂ ಬಂದ್ರೆ ಅವ್ರಿಗೂ ಮೆಹೆಂದಿ ಹಚ್ಚಿಯೇ ಕಳಿಸ್ತಿದ್ದೆ.
ನಂತ್ರ ಸ್ವಲ್ಪ ದೊಡ್ಡೋಳಾದ್ ಮೇಲೆ ಕಸಿನ್ಸ್ ಮದ್ವೇಲಿ, ಮೆಹೆಂದಿ ಶಾಸ್ತ್ರದಲ್ಲಿ, ನಾವೂ ಮೆಹೆಂದಿ ಹಚ್ಚಿಸಿಕೊಳ್ತಿದ್ವಿ. ಆಗೆಲ್ಲ ಮೆಹೆಂದಿ ಹಚ್ಕೊಳೋ ಎಲ್ರಿಗೂ ಅದು ಎಷ್ಟು ಕೆಂಪಾಗಿ ಬರುತ್ತೆ ಅನ್ನೋ ಕ್ಯೂರಿಯಾಸಿಟಿ ಇರ್ತಿತ್ತು. ಎಷ್ಟು ಬಣ್ಣ ಬರುತ್ತೋ, ಮದ್ವೆ ಆಗೋ ಗಂಡು ಅಷ್ಟು ಪ್ರೀತಿ ಮಾಡ್ತಾನೆ ಅಂತ ಅರ್ಥ ಅಂತಿದ್ರು. ಹಹಹ..
ಈಗ ಬಿಡಿ, ಕೆಮಿಕಲ್ ಬೆರೆಸಿರೋ ರೆಡಿಮೇಡ್ ಮೆಹೆಂದಿ ಸಿಗುತ್ತೆ. ಮೆಹೆಂದಿ ತರೋಕೆ ಹೋದ್ರೆ ‘ನಿಮ್ಗೆ ಯಾವ್ ಬಣ್ಣ ಬೇಕು?’ ಅಂತ ಕೇಳ್ತಾರೆ. ಸ್ವಲ್ಪ ಕೆಂಪಾ, ಜಾಸ್ತಿ ಕೆಂಪಾ ಅಥವಾ ಕಪ್ಪಾ.. ಹೀಗೆ ಯಾವ್ ಥರ ಬಣ್ಣ ಬೇಕೋ ಎಲ್ಲ ಸಿಗುತ್ತೆ.
ಆದ್ರೆ ಆವಾಗೆಲ್ಲ ಮೆಹಂದಿ ಹಚ್ಕೊಂಡ್ ಮಾರನೆ ದಿನಾನೇ ಎಷ್ಟು ಬಣ್ಣ ಬಂದಿದೆ ಅಂತ ಗೊತ್ತಾಗ್ತಿದ್ದಿದ್ದು. ನಿಜ ಏನ್ ಗೊತ್ತಾ?, ಅದ್ಕೆಲ್ಲ ಕಾರಣ ಬಾಡಿ ಟೆಂಪರೇಚರ್ ಅಂತೆ. ಉಷ್ಣಾಂಶ ಜಾಸ್ತಿ ಇದ್ರೆ ಜಾಸ್ತಿ ಕಲರ್ ಬರುತ್ತೆ ಅಂತೆ. ಮದ್ವೆ ಟೈಮಲ್ಲಿ ಟೆನ್ಷನ್ ಸ್ವಲ್ಪ ಕಮ್ಮಿ ಆಗ್ಲಿ, ತಣ್ಣಗ್ ಇರ್ಲಿ ಅಂತ ಮೆಹೆಂದಿ ಹಾಕ್ತಾರಂತೆ.
ನನ್ನ ಈಗಿನ ಪ್ರಾಬ್ಲಮ್ ಏನಂದ್ರೆ, ನಂಗೆ ಮೆಹೆಂದಿ ಹಚ್ಕೊಳೋ ಅವಕಾಶ ಸಿಗೋದ್ ತುಂಬಾ ಕಮ್ಮಿ. ಒಟ್ಟೊಟ್ಟಿಗೆ ಎರಡು ಮೂರು ಸಿನಿಮಾ ಒಪ್ಕೊಂಡಿದ್ದಾಗ ಮೆಹೆಂದಿ ಹಚ್ಕೊಂಡ್ರೆ ಕಂಟಿನ್ಯುಟಿ ಪ್ರಾಬ್ಲಮ್ ಆಗುತ್ತೆ. ಇದರ ಮಧ್ಯೆ ಖುಷಿ ವಿಷ್ಯ ಏನಂದ್ರೆ, ಇತ್ತೀಚೆಗೆ ನನ್ನ ‘ಅಮೃತಮತಿ’ ಸಿನಿಮಾಗೆ ಮೆಹೆಂದಿ ಹಚ್ಕೋಬೇಕಾದ ಸೀನ್ಸ್ ಇದ್ವು. ಹದಿನೈದು ದಿನ ಒಟ್ಟಿಗೆ ಶೂಟಿಂಗ್ ಇತ್ತು, ಅದಕ್ಕಾಗಿ ರಿಯಲ್ ಆಗಿ ಮೆಹೆಂದಿ ಹಾಕಿಸ್ಕೊಂಡಿದ್ದೆ. ಶೂಟಿಂಗ್ಗೂ ಆಯ್ತು, ನನ್ ಆಸೆನೂ ತೀರ್ತು.

ಹ್ಞಾ.. ಮರೆತೋಯ್ತು. ಅದೇ ಕೈತೊಳೆಯೋ ಬಗ್ಗೆ ಹೇಳ್ತಿದ್ನಲ್ವಾ? ಏನ್ ಗೊತ್ತಾ.. ನಾನು ಮೆಹೆಂದಿ ಹಚ್ಕೊಂಡ ಪ್ರತಿ ರಾತ್ರಿ ಕನಸು ಬೀಳುತ್ತೆ. ಅದೇನಂದ್ರೆ, ಮೆಹೆಂದಿ ಹಾಕೊಂಡ್ ಮಲಗಿರ್ತೀನಿ, ಬೆಳಗ್ಗೆ ಎದ್ದು ಕೈತೊಳ್ಕೋತೀನಿ, ಮೆಹೆಂದಿ ಕಲರೇ ಬಂದಿರಲ್ಲ. ಮತ್ತೆ ಏಳ್ತೀನಂತೆ, ಕೈತೊಳಿತೀನಂತೆ, ಫುಲ್ ಕಲರ್ ಬಂದಿರುತ್ತೆ. ಮತ್ತೆ ಮತ್ತೆ ಇದೇ ರೀತಿ ಕನಸು ಬೀಳ್ತಾನೇ ಇರುತ್ತೆ. ಕಲರ್ ಬಂತು ಬರ್ಲಿಲ್ಲ, ಕಲರ್ ಬಂತು ಬರ್ಲಿಲ್ಲ!
ಹಾಗೆ ಕನಸಲ್ಲಿ ಅದೆಷ್ಟ್ ಸಲ ಮೆಹೆಂದಿ ಹಚ್ಕೊಂಡ್ ಕೈ ತೊಳ್ಕೋತಿದ್ನೋ, ಲೆಕ್ಕನೇ ಸಿಗ್ತಿರ್ಲಿಲ್ಲ. ಆದ್ರೆ ಬೆಳಗ್ಗೆ ಎದ್ದು, ‘ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತಿ..’ ಅಂತ ಶ್ಲೋಕ ಹೇಳ್ಕೊಂಡು ಹಸ್ತ ಕಣ್ಣಿಗೆ ಒತ್ಕೊಂಡು ನಿಧಾನ ಕಣ್ ಬಿಟ್ಟು ನೋಡಿದ್ರೆ, ಮೆಹೆಂದಿ ಬಣ್ಣ ಕೆಂಪಾಗಿ ಬಂದಿರುತ್ತೆ. ಹಾಗಾದ್ರೆ ನನ್ ಹುಡ್ಗ ನನ್ನನ್ನ ತುಂಬಾ ಪ್ರೀತಿಸ್ತಾನೆ ಅನ್ಸುತ್ತೆ, ಅಲ್ವಾ?! ಹಹಹ 😆
-ಹರಿಪ್ರಿಯಾ
ಹೌದು ಮೇಡಮ್. ನಾನು ನಿಮ್ಮನ್ನ ತುಂಬಾ ಪ್ರೀತಿಸ್ತೀನಿ… ನಿಮ್ಮ ಅಭಿಮಾನಿಯಾಗಿ.
– ಮಣಿ ಎನ್ ಹೂಗಾರ್
👌🏽
Preetigagi sakshi huduko manada bhavanegalu vuswasahodirodu preyatamana mele, kurudu hrudaya gurutisodu yaarige gottu… A asege kanasu sihi sakkare…
99% HOUDU, MATTE KUSHI AAGTIRO INNOND VICHAARA ANDRE NANAGE SUMADHURA SHAASHTREEYA SANGEETHA NRUTYA GALA MELE ESHTU AASHAKTI IDEYO ASHTE AASHAKTI KUTOOHALA JANAPADA PRAKAARAGALALLIYOOIDE. NIMMA BLOGINA EE POSTALLIRUVA KITTALE BANNBDA VASHTRA DHARISIRUVA CHITRA TUNUKU CHITRADA BAGGE BINNATE MANOBHAAVANE MOODISUTTIDE HAAGOO KUTOOHALA HECCHISUVANTIDE. UTTARA KARNATAKA BHAAGAGALALLI EE REETIYA CINEMAGALIGE VISHESHA AADHYATEYOO SIGUVUDENDU KELIDDENE KOODA.
“ಕೈಯ ಮೆಹಂದಿಯೊಮ್ಮೆ ನೋಡಿಕೊಳ್ಳಲೇನು…..” ಅಂತ ಹಾಡಬೇಕಾಗುತ್ತೆ. 😂
ನೀವು ಬರೆಯುವ ಲೇಖನಗಳು ಇಂಗ್ಲಿಷ್ಗಿಂತ ಕನ್ನಡದಲ್ಲೇ ಚೆನ್ನಾಗಿರ್ತಾವೆ. ಕನ್ನಡದಲ್ಲೇ ಜಾಸ್ತಿ ಬರೀರಿ.
avaru ingleeshnallu chennaagi baritaare, kannada ruchisutte ashte.
🙂ಆ ನೀಮ್ಮ ಕನಸು ನನಸಾಗಲಿ, ಮುಂದೆ ನೀಮ್ಮ ಕೈ ಹಿಡಿಯುವ ಗಂಡು ನಿಮ್ಮನ್ನು ತುಂಬಾನೇ ಪ್ರೀತಿ ಮಾಡುವಂತವನಾಗಿರಲಿ✋
Avana preethige kayye kannadi E ninna muddada manase preethige prathirupa
AKSHARA SAHA SATHYA