ನಾನು ಹುಟ್ಟಿದ್ದು ಬೆಂಗಳೂರು, ಬೆಳೆದಿದ್ದು ಚಿಕ್ಕಬಳ್ಳಾಪುರದಲ್ಲಿ. ನಾನು ಶಾಲೆಯ ಉತ್ತಮ ವಿದ್ಯಾರ್ಥಿ , ಚನ್ನಾಗಿ ಓದುತ್ತಿದ್ದೆ ,ಇಂಗ್ಲಿಷಲ್ಲೂ ಒಳ್ಳೇ ಮಾರ್ಕ್ಸ್ ತಗೊಳ್ತಿದ್ದೆ. ನಾನು ಇಂಗ್ಲಿಷಲ್ಲಿ ಮಾತಾಡೋದು ನೋಡಿ ಭೇಷ್ ಅಂತಿದ್ರು. ನಾನು ಇಂಗ್ಲಿಷ್ ಪೇಪರ್ಗಳನ್ನ ಓದಿ ಅದ್ರ ವಿಷಯ ಎಲ್ಲರಿಗೂ ಎಕ್ಸ್ಪ್ಲೇನ್ ಸಹ ಮಾಡ್ತಿದ್ದೆ. ನಂಗೂ ನನ್ನ ಇಂಗ್ಲಿಷ್ ಸ್ಪೀಕಿಂಗ್ ಸ್ಕಿಲ್ಸ್ ಬಗ್ಗೆ ಹೆಮ್ಮೆ ಇತ್ತು. ಆದರೆ ನನ್ನ ಮುಂದಿನ ವಿದ್ಯಾಭಾಸಕ್ಕೆ ಬೆಂಗಳೂರಿಗೆ ಬಂದ ಮೇಲೆ ಗೊತ್ತಾಗಿದ್ದು, ನಾನು ಇಂಗ್ಲಿಷ್ ಇನ್ನೂ ಸರಿಯಾಗಿ ಕಲಿಬೇಕು ಅಂತ, ಹಹ್ಹಹ.
ಅಷ್ಟು ಗೊತ್ತಾದ ಮೇಲೆ ನಾನು ಇನ್ನೂ ಜಾಸ್ತಿ ಓದೋಕ್ ಶುರು ಮಾಡ್ದೆ. ಯಾಕಂದ್ರೆ ಅಭ್ಯಾಸ ಮಾಡಿದ್ರೆ ಏನ್ ಬೇಕಿದ್ರೂ ಕಲಿಬಹುದು ಅಲ್ವಾ?. ನನ್ನ ಕಮ್ಯುನಿಕೇಷನ್ ಸ್ಕಿಲ್ಸ್ ಕೂಡ ಇಂಪ್ರೂವ್ ಮಾಡ್ಕೊಂಡೆ. ಕಲ್ತೆ, ಇನ್ನೂ ಕಲಿತಿದೀನಿ.. ಯಾಕಂದ್ರೆ ಕಲಿಯೋದಕ್ಕೆ ಕೊನೆ ಅನ್ನೋದೇ ಇಲ್ಲ.

ಹಾಗೆ ನಾವು ಬೇರೆ ದೇಶ , ರಾಜ್ಯ, ಅಥವಾ ಊರಿಗೆ ಹೋಗಿ ನೆಲೆಸಿದ್ರೆ ಆಗ ತುಂಬಾ ಹೊಸ ವಿಷ್ಯ ಕಲಿಯೋ ಅವಕಾಶ ಸಿಗುತ್ತೆ. ಕೆಲಸಕ್ಕೆ ಅಥವಾ ನಮ್ಮ ಬಳಕೆಗೆ ಅನಿವಾರ್ಯ ಇರದಿದ್ದರೆ ಇಂಗ್ಲಿಷ್ ಅಂಥ ಅಗತ್ಯ ಆಗಿರಲ್ಲ. ಆದ್ರೆ ನಮಗೆ ನಮ್ಮ ಮಾತೃಭಾಷೆ ಅಥವಾ ನಾವಿರುವ ರಾಜ್ಯದ ಭಾಷೆ ಚೆನ್ನಾಗಿ ಗೊತ್ತಿರಲೇಬೇಕು. ಒಬ್ಬ ನಟಿಯಾಗಿ ನಾನು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಆ್ಯಕ್ಟ್ ಮಾಡ್ತಿದೀನಿ. ಹೆಚ್ಚು ಭಾಷೆಗಳು ಗೊತ್ತಿರೋದ್ರಿಂದ ನನ್ನ ನಟನೆಗೆ ಸಹಾಯ ಆಗುತ್ತೆ, ಹಾಗೆ ಆಯಾ ಭಾಷೆಯ ಫ್ಯಾನ್ಸ್ ಜೊತೆ ಮಾತಾಡೋಕೆ ಸಹಾಯ ಆಗ್ತಿದೆ. ಎಲ್ಲಕ್ಕಿಂತ , ಅವ್ರು ನನ್ನ ಹೊಗಳ್ತಿದಾರಾ ಇಲ್ಲ ತೆಗಳ್ತಿದಾರಾ ಅನ್ನೋದು ನನಗೆ ಗೊತ್ತಾಗುತ್ತೆ.. ಹಹ್ಹಹ.
ಎಷ್ಟೇ ಕಲಿತ್ರೂ ಇಂಗ್ಲಿಷ್ ಒಂಥರ ವಿಚಿತ್ರ ಭಾಷೆ. ಕೆಲವೊಂದು ಪದಗಳ ಸ್ಪೆಲ್ಲಿಂಗ್ ಒಂದೇ ಇದ್ರೂ ಎರಡು ಅರ್ಥಗಳಿರುತ್ತೆ. ಉದಾಹರಣೆಗೆ Nails, jam , pool , mine and season. ಇನ್ನು ಕೆಲವು ಪದಗಳು ಬೇರೆ ಬೇರೆ ಸ್ಪೆಲ್ಲಿಂಗ್, ಬೇರೆ ಬೇರೆ ಅರ್ಥ ಹೊಂದಿದ್ರೂ ಉಚ್ಚಾರ ಒಂದೇ ಇರುತ್ತೆ. ಫಾರ್ ಎಕ್ಸಾಂಪಲ್, Right-write, one-won, know-no, cell-sell, sea-see etc. ಮತ್ತೆ ಕೆಲವು ಪದಗಳಲ್ಲಿ ಕೆಲವು ಅಕ್ಷರ ಸೈಲೆಂಟ್. Muscle, Subtle, Knee and Knife. ಇನ್ನು ಕೆಲವು ಪದಗಳ ಉಚ್ಚಾರನೇ ವಿಚಿತ್ರ. ಉದಾಹರಣೆಗೆ Sugar ಮತ್ತು sure. ಇದರಲ್ಲಿ ಎಸ್ ಪಕ್ಕ ಎಚ್ ಇಲ್ಲಂದ್ರೂ ಸು-ಸೂ ಅನ್ನದೆ ಶು-ಶೂ ಅಂತನೇ ಹೇಳ್ತಾರೆ. ಆದ್ರೆ ಪ್ರತಿ ಪದಕ್ಕೂ ಅದ್ರದ್ದೇ ಆದ ಅರ್ಥ ಇರುವ ನಮ್ಮ ಭಾರತೀಯ ಭಾಷೆಗಳ ಬಗ್ಗೆ ನನಗೆ ಹೆಚ್ಚು ಗೌರವ ಮತ್ತು ಹೆಮ್ಮೆ ಇದೆ.

ಯಾರಿಗೇ ಆಗ್ಲಿ, ಇಂಗ್ಲಿಷ್ ಕಲಿಬೇಕು ಅನಿಸಿದ್ರೆ ಕಲಿಬಹುದೇ ಹೊರತು ಅದು ಕಡ್ಡಾಯ ಆಗಬಾರದು. ಭಾರತದಲ್ಲಿ ಇಂಗ್ಲಿಷ್ನ ಬುದ್ಧಿವಂತಿಕೆಯ ಲಕ್ಷಣ ಅಂತ ಬಹಳಷ್ಟು ಜನ ಅಂದ್ಕೊಂಡಿದಾರೆ. ಅದೇ ಕಾರಣಕ್ಕೆ ಕೆಲವರು ಇನ್ನೊಬ್ರನ್ನ ಸಣ್ಣತನದಿಂದ ನೋಡ್ತಾರೆ. ಜರ್ಮನ್ ಅಥವಾ ಫ್ರೆಂಚ್ ಭಾಷೆ ಗೊತ್ತಿಲ್ಲದ್ದಕ್ಕೆ ನೀವು ಯಾವತ್ತಾದರೂ ಬೇಜಾರಾಗಿದ್ದು ಇದ್ಯಾ ಅಥವಾ ಆ ಭಾಷೆಗಳು ಗೊತ್ತಿಲ್ಲ ಅಂತ ನಿಮಗೆ ಯಾರಾದರೂ ತಮಾಷೆ ಮಾಡಿದ್ದು ಇದ್ಯಾ? ಇಲ್ಲ ಅಲ್ವಾ? ಹಾಗೆ, ಇಂಗ್ಲಿಷ್ ಗೊತ್ತಿರಲೇಬೇಕಂತಿಲ್ಲ, ಗೊತ್ತಿದ್ರೂ ಪಕ್ಕಾ ಗೊತ್ತಿರಬೇಕು ಅಂತನೂ ಇಲ್ಲ. ಹೇಳಿದ್ದು ಅರ್ಥ ಆಯ್ತಾ ಅನ್ನೋದು ತುಂಬಾ ಮುಖ್ಯ.
ಕೊನೆಯದಾಗಿ ಹೇಳಬೇಕಂದರೆ, ಯಾರೂ ಯಾವ ಭಾಷೆಯಲ್ಲೂ ಪಕ್ಕಾ ಇರಲು ಸಾಧ್ಯವಿಲ್ಲ, ಅದು ಅವರ ಮಾತೃಭಾಷೆಯಾದರೂ ಅಷ್ಟೇ. ಎಷ್ಟೋ ಸಲ ನಮ್ಮ ಭಾಷೆಯದ್ದೇ ಎಷ್ಟೋ ಪದಗಳು ನಮಗೇ ಗೊತ್ತಿರಲ್ಲ. ಹಾಗಿದ್ದ ಮೇಲೆ ಇಂಗ್ಲಿಷ್ ಚೆನ್ನಾಗಿ ಗೊತ್ತಿಲ್ಲ ಅನ್ನೋ ಕಾರಣಕ್ಕೆ ಕೀಳರಿಮೆ ಆಗಬಾರದು. ಇಂಗ್ಲಿಷ್ ಚೆನ್ನಾಗಿ ಗೊತ್ತಿಲ್ಲ ಅನ್ನೋ ಒಂದೇ ಕಾರಣಕ್ಕೆ ಯಾರಾದರೂ ನಿಮ್ಮನ್ನು ಗೇಲಿ ಮಾಡಿದ್ರೆ, ನೆನಪಿರಲಿ ‘ಇಂಗ್ಲಿಷ್ ಬರೀ ಒಂದು ಭಾಷೆ, ಅದು ನಿಮ್ಮ ಬುದ್ಧಿವಂತಿಕೆ ಅಳೆಯೋ ಮಾನದಂಡ ಅಲ್ಲ’ .
-ಹರಿಪ್ರಿಯಾ
Image Source: Image Source: karkara.eus
istu talent iruvudarindale neevu istu dodda nati aagiddeeri superb
Well said Hari priya
Well said madam good thought for nowadays peoples
Abba intha olle manasu
Chikkavara bagge yochane na.
Great ,,
Karnatakadalli kannada baashe kaddaya madbeku.
ಸೂಪರ್ ಒಬ್ಬ ನಟಿಯಾಗಿ ಒಳ್ಳೆಯ ಸಂದೇಶ ನೀಡುವುದು. ನಿಮ್ಮ ದೊಡ್ಡತನ ತೋರಿಸುತ್ತದೆ.
💯% true
It’s true
Wowww superbb madam. .😍
Hii mam.. It’s really.. Motivating some people.. Because it’s true line’s.. 😍😘
Well said mam !! ಯೋಚ್ನೆ ಮಾಡಬೇಕಾಗಿರೊ ವಿಷ್ಯ ಇದು✔
ಸೂಪರ್ ಮೇಡಂ…. ಫೋಟೋ ಕೂಡ ತುಬ ತುಂಬಾ ಚೆನ್ನಾಗಿದೆ ಆದಷ್ಟು ಕನ್ನಡದಲ್ಲಿ ಆರ್ಟಿಕಲ್ಸ್ ಪೋಸ್ಟ್ ಮಾಡಿ ಹೆಚ್ಚು ಜನ ಓದುತ್ತಾರೆ
Absolutely you are correct miss haripriya mam
ನಿಮ್ಮ ಮಾತು ನೂರಕ್ಕೆ ನೂರು ಸತ್ಯ..