ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನ ನಾಲ್ಕೈದ್ ಸಲ ಓದ್ದೆ. ಯಾಕಂದ್ರೆ ಆ ಮೆಸೇಜ್ನ ನಂಗೆ ನಂಬೋಕ್ ಸಾಧ್ಯನೇ ಆಗ್ಲಿಲ್ಲ. ನಾನೇ ಏನಾದ್ರೂ ತಪ್ ಓದಿದ್ನ ಅಂತನ್ಸಿ ಮತ್ತೆ ಮತ್ತೆ ಓದ್ಕೊಂಡೆ. ಅಷ್ಟರಲ್ಲಿ ಬೇರೆಬೇರೆ ಕಡೆಯಿಂದ್ಲೂ ಅದೇ ಮೆಸೇಜ್ ಬರ್ತಿತ್ತು, ಟಿವಿಲೂ ಅದೇ ಬ್ರೇಕಿಂಗ್ ನ್ಯೂಸ್. “ಚಿರು ಇನ್ನಿಲ್ಲ..” ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗ್ ನಂಬೋಕ್ ಆಗಲ್ಲ.
ಚಿರು ಮಾತ್ರ ಅಲ್ಲ, ಅವ್ರ ಫ್ಯಾಮಿಲಿ ಎಲ್ರ ಜೊತೆ ಆ್ಯಕ್ಟ್ ಮಾಡಿದೀನಿ. ನಾನು ಚಿರು ‘ಸಂಹಾರ’ ಸಿನಿಮಾದಲ್ ಆ್ಯಕ್ಟ್ ಮಾಡಿದ್ವಿ. ಅಲ್ಲಿ ಹೀರೋಯಿನ್ /ವಿಲನ್ ರೋಲ್. ಸೋ.. ನಂಗೂ ಚಿರುಗೂ ಒಟ್ಟಿಗೆ ಇರೋ ಸೀನ್ಸ್ ಜಾಸ್ತಿ ಇರ್ಲಿಲ್ಲ. ಆದ್ರೆ ಸಾಂಗ್ ಶೂಟ್ನಲ್ಲಿ ನಾವಿಬ್ರೂ ತುಂಬಾ ಮಾತಾಡಿದ್ದು, ನಕ್ಕಿದ್ದು ಇದೆ. ಅದ್ರಲ್ಲಿ ಕೊನೇಲೊಂದು ಫೈಟ್ ಇತ್ತು. ಆಗ ಒಂದು ಪಲ್ಟಿ ಹೊಡೆಯುವಾಗ ಆಯತಪ್ಪಿ ದಡ್ ಅಂತ ನೆಲಕ್ಕೆ ಬಿದ್ದು ‘ಅಮ್ಮಾ..’ ಅಂತ ಕಿರುಚಿದ್ದೆ. (ಸ್ವಲ್ಪ ಹೆಚ್ಚುಕಡಿಮೆ ಆಗಿದ್ರೂ ಬ್ಯಾಕ್ಬೋನ್ಗೆ ಏಟಾಗಿರ್ತಿತ್ತು). ಆವಾಗಿಂದ ಶೂಟಿಂಗ್ ಮುಗಿಯೋವರೆಗೂ ನಾನ್ ಕಿರುಚಿದ್ ಟೋನ್ನಲ್ಲೇ ‘ಅಮ್ಮಾ..’ ಅಂತ ರೇಗಿಸ್ತಿದ್ರು ಚಿರು.
ಚಿರು ಇಲ್ಲ ಅಂದ್ ತಕ್ಷಣ ಶಾಕ್ ಆಗಿತ್ತು. ಭಾನುವಾರ ಟಿವಿಲಿ ನೋಡ್ತ ಮನೆಯಲ್ಲೇ ತುಂಬಾ ಅತ್ತಿದ್ದೆ, ಚಿರುನ ಹಾಗೆ ಹೇಗೆ ನೋಡೋದು ಅಂತ ಹೋಗೋಕ್ ಹಿಂಜರಿದೆ. ಸೋಮವಾರ ಕೊನೆದಾಗಿ ಒಂದ್ಸಾರಿ ನೋಡ್ಬೇಕು ಅಂತ ತಕ್ಷಣ ಹೊರಟೆ. ಆದ್ರೆ ಅಲ್ಲಿ ಮೇಘನಾನ ಕಂಡು ನಂಗೆ ಇನ್ನೂ ಜಾಸ್ತಿ ದುಃಖ ಆಯ್ತು. ಏನ್ ಸಮಾಧಾನ ಹೇಳೋಕೂ ಮಾತೇ ಹೊರಡ್ತಿರ್ಲಿಲ್ಲ.
ಅಲ್ಲಿ ಯಾರೋ ಹೇಳ್ತಿದ್ರು, ಮೇಘನಾ ಕ್ಯಾರಿಂಗ್ ವಿಷಯಾನ ಚಿರು ಇನ್ ಸ್ವಲ್ಪದಿನದಲ್ಲೇ ಪಬ್ಲಿಕ್ ಮಾಡ್ತಿದ್ರು ಅಂತ. ಆದ್ರೆ ಅಷ್ಟರಲ್ಲಿ ಏನೇನಾಯ್ತಲ್ಲ? ಲೈಫ್ ಎಷ್ಟ್ ಅನ್ಪ್ರೆಡಿಕ್ಟೇಬಲ್ ಅಲ್ವಾ. ಒಬ್ರ ಸ್ಥಾನನ ಇನ್ನೊಬ್ರು ಯಾವತ್ತೂ ತುಂಬೋಕ್ ಆಗಲ್ಲ.
ಇನ್ನು ಅರ್ಜುನ್ ಸರ್.. ಕಾಫೀನ್ ಬಾಕ್ಸ್ ಗ್ಲಾಸ್ಗೆ ತಲೆ ಕೊಟ್ಟು, “ಚಿರು.. ಮಾಮ ಬಂದಿದಿನಿ, ಎದ್ದೇಳೋ..” ಅಂದಿದ್ನ ನೋಡ್ದಾಗಂತೂ ತುಂಬಾ ಸಂಕಟ ಆಗಿತ್ತು. ಬೆಳೆದು ನಿಂತಿರೋ ಮಗನ್ನ ಕಳ್ಕೊಂಡಿರೋ ಸಂಕಟದಲ್ಲಿರೋ ಅಪ್ಪ-ಅಮ್ಮಂಗೆ ಯಾವ ಸಾಂತ್ವನ ಸಮಾಧಾನ ನೀಡೋಕ್ ಸಾಧ್ಯ? 😥 ಚಿಕ್ಕೋರಿದ್ದಾಗಿಂದ ಒಟ್ಟಿಗೇ ಆಡಿ ಬೆಳೆದ ಧ್ರುವಂಗೆ ಆಗಿರೋ ಕಷ್ಟ ಯಾರಾದ್ರೂ ಊಹಿಸೋಕ್ ಸಾಧ್ಯನಾ? ಈ ಲಾಕ್ಡೌನ್ ಟೈಮಲ್ಲಿ ಎಲ್ಲ ಮನೇಲೇ ಇದ್ದು ಎಂದಿಗಿಂತ ಜಾಸ್ತಿ ಸಮಯ ಒಟ್ಟಿಗೇ ಕಳೆದಿರ್ತಾರೆ. ಆದ್ರೆ ಈ ಟೈಮಲ್ಲೇ ಹೀಗಾಯ್ತಲ್ಲ..
ನಾನಲ್ಲ.. ಯಾರೇ ಆದ್ರೂ ಸಾಂತ್ವನ ಹೇಳೋದ್ ಬಿಟ್ಟು ಬೇರೇನೂ ಮಾಡೋಕಾಗಲ್ಲ. ಮೇಘನಾಗೆ, ಅವ್ರ ಅಮ್ಮ-ಅಪ್ಪಂಗೆ, ಅರ್ಜುನ್ ಸರ್ ಗೆ, ಧ್ರುವಂಗೆ , ಅವ್ರೆಲ್ರಿಗೂ ದುಃಖ ಸಹಿಸ್ಕೊಳೋ ಶಕ್ತಿ ಕೊಡು ದೇವ್ರೇ ಅಂತ ಪ್ರಾರ್ಥನೆ ಮಾಡೋಣ. ಹೋದವರು ಹೋದಾಗ ಆಗೋ ನೋವಿಗಿಂತ ಆಮೇಲೆ ಅವ್ರ ನೆನಪಾಗಿ ಆಗೋ ನೋವಿದ್ಯಲ ಅದೇ ದೊಡ್ಡ ಯಾತನೆ. ಅದನ್ನು ಸಹಿಸ್ಕೊಳ್ಳೋ ಶಕ್ತಿ ಚಿರು ಫ್ಯಾಮಿಲಿಗೆ ದೇವ್ರು ಕೊಡ್ಲಿ 🙏
ಚಿರು ಸಿನಿಮಾಗಳು ರಿಲೀಸ್ ಆಗೋದಿವೆ. ಇನ್ನೂ ತುಂಬಾ ಸಿನಿಮಾ ಮಾಡೋದಿತ್ತು. ಆದ್ರೆ ಚಿರು ಇಲ್ಲ ಅನ್ನೋದ್ನ ನಂಗಿನ್ನೂ ನಂಬೋಕೇ ಆಗ್ತಿಲ್ಲ. ನೋಡೋಕೆ, ಮಾತಾಡೋಕೆ , ರೇಗ್ಸೋಕೆ ಚಿರು ಇನ್ನು ಕಾಣಿಸದೇ ಇರ್ಬೋದು. ಆದ್ರೆ ಎಲ್ಲರ ಮನಸಲ್ಲಿ ಚಿರು ಯಾವತ್ತೂ ಚಿರಂಜೀವಿನೇ..🙏
-ಹರಿಪ್ರಿಯಾ
ನಮಗೂ ಕೂಡಾ ತುಂಬಾ ದುಃಕ್ಕ ಆಗಿದೆ ಮೇಘನಾ ಗು ಹಾಗೂ ಧ್ರುವ ಸರ್ಜಾ ಅವರಿಗೆ ಆ ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡು ಎಂದು ನಾನು ಆ ದೇವರಿಲ್ಲಿ ಪ್ರಾರ್ಥಿಸುತೇನ್ನೇ ದೇವೇರೆ ನೀನೂ ಎಷ್ಟು ಕ್ರೂರಿ
My senior will always be remembered forever. He is always in our 💕. Love you senior 😍😘😘😘🙏🙏🙏
😢 Very Difficult to digest until now.. Chiru sir will soon be reborn in their family..
Very true words
Yes chiru sir is always chiranjivi ne mam 👌😔☺️
True nothing can replace Chiru and his smile 😞Two days we cried by seeing chiru family tears 😭 But one thing I want to some how convey Meghana that she is better half of Chiru so other half Chiru is alive in her so she need to be strong at this time for baby where that baby will be represent MC forever (Meghana Chiru)..
RIP to lovely man Chiru
Vry vry vry sad chiru sir …idk hw u left mega mam alone …I cant even imagine hr position exactly nw N hr last hug fr u made us feel vry sad 😔 vidhi is so cruel …v luv u ❤ n miss u chiru sir😭 v hpe u vil b back as ur baby 🤞🤞
ಯುವ ಸಾಮ್ರಾಟ ಚಿರು ಅಣ್ಣ ಎಂದಿಗೂ ಕನ್ನಡಿಗರ ಮನದಲ್ಲಿ “ಚಿರಂಜೀವಿ “
Nijavaglu avru illa anode nambooke agolla 😔 avru smile yestu pure agede ,enu Meghana mam anthu nodoke agolla yarugu beda ha novu… 😔😭😢
obba prekshaka vidyaarthiyaagi heluvudaadare nanna kendra adheenada shaaleyalli makkala sthaleeya jnaana vikaashakkoshkara raajya sarkaaragala vatiyinda shifaarassugonda kela kannada chalanachitragalanna torisuttiddaru avugalalli arjun sarja sir avara saahasamaya chitragalanne hecchu nanna baalyadalli nodiruvudu gili koti kudure naayi aane muntaada praanigalu eegaloo nenapinalle ive. anthaha kutumbada sodara samaanaraada chiranjeevi sarja avaru matte janmisali endu praarthisutteve.
So sad, but chiru is always in our mind good humanity person forever.
Hoping chiru sir will again come as meghana mam’s son
😢😢😌😌
He is amazing person ….Rest in peace
ಸಾಯೋ ಏಜ್ ಅಲ್ಲ ಅವ್ರಿದ್ದು.. ಮಗುವಿನ ಮುದ್ದು ಮುಖ ನೋಡೋ ಭಾಗ್ಯ ಕಿತ್ಕೊಂಡ್ ಬಿಟ್ರು ದೇವರು.. ಆದ್ರೆ ಪಾಪ ಮೇಘನಾ ಪರಿಸ್ಥಿತಿ ನೋಡಿದ್ರೆ ಅಳು ಬರುತ್ತೆ ಇನ್ನೊಂದು ಜೀವ ಕೊಡೋ ಟೈಮ್ ಅಲ್ಲೇ ಅವರ ಜೀವಕ್ಕೆ ಜೀವ ಆದವ್ರನ್ನ ಕಳ್ಕೊಂಡು ಬಿಟ್ರು.. ಗೊತ್ತಿಲ್ಲ ಯಾವ ಥರ ಅದನ್ನ ಅವ್ರು ತಡ್ಕೋತರೆ ಅಂತ. ದೇವರು ಅವರಿಗೆ ಮಗು ಗೋಸ್ಕರ ಆದರೂ ಎಲ್ಲ ನೋವು ತಡ್ಕೊಳ್ಳೋ ಶಕ್ತಿ ನೀಡಲಿ.. God bless her
ಸಾಯೋ ಏಜ್ ಅಲ್ಲ ಅವ್ರಿದ್ದು.. ಮಗುವಿನ ಮುದ್ದು ಮುಖ ನೋಡೋ ಭಾಗ್ಯ ಕಿತ್ಕೊಂಡ್ ಬಿಟ್ರು ದೇವರು.. ಆದ್ರೆ ಪಾಪ ಮೇಘನಾ ಪರಿಸ್ಥಿತಿ ನೋಡಿದ್ರೆ ಅಳು ಬರುತ್ತೆ ಇನ್ನೊಂದು ಜೀವ ಕೊಡೋ ಟೈಮ್ ಅಲ್ಲೇ ಅವರ ಜೀವಕ್ಕೆ ಜೀವ ಆದವ್ರನ್ನ ಕಳ್ಕೊಂಡು ಬಿಟ್ರು.. ಗೊತ್ತಿಲ್ಲ ಯಾವ ಥರ ಅದನ್ನ ಅವ್ರು ತಡ್ಕೋತರೆ ಅಂತ. ದೇವರು ಅವರಿಗೆ ಮಗು ಗೋಸ್ಕರ ಆದರೂ ಎಲ್ಲ ನೋವು ತಡ್ಕೊಳ್ಳೋ ಶಕ್ತಿ ನೀಡಲಿ.. God bless her
ನಿಜ ಆದ್ರೇ ಎನ್ ಮಾಡೋದು ಎಲ್ಲಾ ವಿಧಿಯಾಟ
😞
😞
💔
Life is Unpredictable… one has to move on with memories….