ಇವತ್ತಿನ ಮಾತು ಎಲ್ಲಿಂದ ಶುರು ಮಾಡ್ಲಿ ಅನ್ನೋದೇ ಗೊತ್ತಾಗ್ತಿಲ್ಲ. ಯಾಕಂದ್ರೆ ಇವತ್ತಿನ ವಿಷ್ಯ ಎಚ್ಎಎಲ್ನಿಂದ ಮಂಗಳಯಾನದ ವರೆಗೂ ಇದೆ. ಇಷ್ಟು ಹೇಳ್ತಿದ್ ಹಾಗೆ ನಾನು ಯಾರ್ ಬಗ್ಗೆ ಮಾತಾಡ್ತಿದೀನಿ ಅಂತ ನಿಮ್ ಮನಸಲ್ಲಿ ಒಂದ್ ಉತ್ರ ಟೇಕಾಫ್ ಆಗಿರ್ಬೋದು. ಆಗಿಲ್ಲಂದ್ರೆ ಒಮ್ಮೆ ‘ನೀರ್ದೋಸೆ’ನ ನೆನಪಿಸ್ಕೊಳ್ಳಿ.

ಯೆಸ್.. ನಾನು ಮಾತಾಡ್ತಿರೋದು ದ ಗ್ರೇಟ್ ಆ್ಯಕ್ಟರ್ ದತ್ತಣ್ಣ ಬಗ್ಗೆ. ‘ನೀರ್ದೋಸೆ’ ಸಿನಿಮಾದಲ್ಲಿ ನಾನು ಅವರೂ ಜೊತೆಗೇ ಆ್ಯಕ್ಟ್ ಮಾಡಿದ್ವಿ. ಈಗ ಕೊರೊನಾ ಟೈಮಲ್ಲಿ ದತ್ತಣ್ಣ ಏನ್ ಮಾಡ್ತಿರ್ಬೋದು ಅಂತ ಒಂದು ಕಾಲ್ ಮಾಡೇ ಬಿಟ್ಟೆ.

ದತ್ತಣ್ಣ ಎಚ್ಎಎಲ್ನಲ್ಲಿ ಆಫೀಸರ್ ಆಗಿದ್ರು. ಅವರಿಗೆ 45 ವರ್ಷ ವಯಸ್ಸಾಗಿದ್ದಾಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ರು. ಅಷ್ಟೇ ಅಲ್ಲ, ಆ್ಯಕ್ಟಿಂಗ್ಗಾಗಿ ಮೂರ್ ಸಲ ರಾಷ್ಟ್ರಪ್ರಶಸ್ತಿ ಪಡ್ಕೊಂಡಿದಾರೆ. ಅವ್ರು ಇಲ್ಲಿಗೆ ಅಂದ್ರೆ ಸಿನಿಮಾ ಇಂಡಸ್ಟ್ರಿಗೆ ಬಂದೇ 33 ವರ್ಷಗಳಾಗಿವೆ. ಇದು ಅವ್ರ ಜೀವನದ ಪ್ರೊಫೆಷನಲ್ ಟ್ರಾವೆಲ್ ಹಿಸ್ಟರಿ😍👏🏻
ಕಾಲ್ ಕನೆಕ್ಟ್ ಆಗ್ತಿದ್ದ ಹಾಗೆ, ‘ಹೇಗಿದೀರ ದತ್ತಣ್ಣ ?’ ಅಂದೆ. ಅವ್ರೂ ನನ್ ಯೋಗಕ್ಷೇಮ ವಿಚಾರಿಸಿಕೊಂಡ್ರು. ‘ಎಲ್ರೂ ಹೌಸ್ ಅರೆಸ್ಟ್ ಅಲ್ವಾ? ಆದ್ರೆ ನಾನು ಬೇಬ್ನೋಸ್ಗೆ ಬರೆಯೋದ್ರಲ್ಲೇ ಬ್ಯುಸಿ ಆಗಿದ್ದೆ’ ಅಂದೆ. ‘ಲಾಕ್ಡೌನ್ ಟೈಮಲ್ಲಿ ಏನಾದ್ರೂ ಹೊಸ ಅಡುಗೆ ಕಲಿತ್ಯಾ?’ ಅಂತ ಕೇಳಿದ್ರು. ‘ಇಲ್ಲ’ ಅಂದೆ. ‘ಹೆಣ್ಮಕ್ಳಿಗೆ ಅಡುಗೆ ಅಸೆಟ್, ಕಲೀಬೇಕು’ ಎಂದ್ರು. ‘ಇಲ್ಲ.. ನಾನು ಶೆಫ್ನ ಮದ್ವೆ ಆಗ್ತೀನಿ ಬಿಡಿ’ ಅಂದೆ. ಹಹಹ. ಅಷ್ಟರಲ್ಲಿ ಮಾತು ಅಡುಗೆಮನೆಯಿಂದ ಮದುವೆಮನೆಗೆ ಬಂತು.

ಸ್ಟಿಲ್ ಬ್ಯಾಚುಲರ್ ಆಗಿರುವ ದತ್ತಣ್ಣ, ಊಟಕ್ಕೆ ಹೋಟೆಲ್, ಬ್ರದರ್ ಮನೆಗೆ ಹೋಗ್ತೀನಿ ಅಂದಿದ್ರು. ‘ಬೇರೆ ಟೈಮಲ್ಲಿ ಓಕೆ. ಆದ್ರೆ ಹಬ್ಬದೂಟಕ್ಕೋಸ್ಕರ ಆದ್ರೂ ಮದ್ವೆ ಆಗ್ಬೇಕು ಅನಿಸಿಲ್ವಾ ನಿಮಗೆ?’ ಅಂದೆ. ಆಗ ಮಾತು ಎಚ್ಎಎಲ್ಗೆ ಟೇಕಾಫ್ ಆಯ್ತು. ‘ಎಚ್ಎಎಲ್ನಲ್ಲಿ ಕೆಲಸಕ್ಕೆ ಸೇರ್ದಾಗ ತುಂಬಾ ಓಡಾಡ್ಬೇಕಿತ್ತು. ಅಲ್ಲೇ ಕ್ಯಾಂಟೀನ್ ಇತ್ತು. ಊಟ-ತಿಂಡಿ ಸಮಸ್ಯೆ ಅನಿಸಿರಲಿಲ್ಲ. ಇನ್ನು ಬೇರೆ ಬೇರೆ ಕಡೆ ಟ್ರಾನ್ಸ್ಫರ್ ಆಗ್ತಿದ್ರಿಂದ ಒಂದೇ ಕಡೆ ಸೆಟಲ್ ಅನ್ನೋ ಥರ ಇರ್ಲಿಲ್ಲ. ನಂತ್ರ ಸಿನಿಮಾಗೆ ಬಂದ್ಮೇಲೂ ಅಷ್ಟೇ. ಇನ್ನು ಶೂಟಿಂಗ್ ಅಂತ ದಿನಗಟ್ಟಲೆ ಹೋಗ್ತಿದ್ರಿಂದ ಮದ್ವೆ ಬಗ್ಗೆ ಯೋಚನೆ ಮಾಡ್ಲೇ ಇಲ್ಲ. ಮೋರೋವರ್ ನನ್ ಪ್ರೊಫೆಷನ್ ಮದ್ವೆಗೆ ಸಫೋರ್ಟ್ ಮಾಡಿಲ್ಲ. ಅಷ್ಟಕ್ಕೂ ಮದ್ವೆ ಬಗ್ಗೆ ನನ್ ನಂಬಿಕೆನೇ ಬೇರೆ..’ ಅಂದ್ರು. ‘ಹಾಗಾದ್ರೆ ಮದುವೆ ಆಗದವರಿಗೆ, ನನಗೆ ನಿಮ್ ಸಜೆಷನ್ ಏನು?’ ಅಂತ ಕೇಳಿದ್ಕೆ, ‘ನೀನು ಮ್ಯಾರೇಜ್ ಮೆಟೀರಿಯಲ್.. ಮದ್ವೆ ಆಗ್ಬೇಕು..’ ಅಂತಂದ್ರು ಹಹಹ. ಅಂದ್ರೆ ನಮ್ಮನೆ ಹುಡ್ಗಿ ಅನಿಸ್ತೀಯ, ನಂಗೆ ತಮ್ಮ.. ನೋ, ಮಗನೋ ಇದ್ದಿದ್ರೆ ತಂದ್ಕೊಬಿಡ್ತಿದ್ದೆ’ ಅಂದ್ರು ದತ್ತಣ್ಣ.

‘ನೀವ್ ಯಾರನ್ನೂ ಲವ್ ಮಾಡಿಲ್ಲ, ಮದ್ವೆ ಆಗಿಲ್ಲ. ಹೋಗ್ಲಿ.. ನಿಮ್ ಫೇವರಿಟ್ ಹೀರೋಯಿನ್ ಯಾರು?’ ಅಂತ ಕೇಳ್ದೆ. ಅದಕ್ಕೆ ಅವ್ರು ತಕ್ಷಣ ಕೊಟ್ಟ ಉತ್ರ ‘ಮಧುಬಾಲಾ’. ‘ಮುಘಲ್-ಇ-ಅಜಮ್ನ ಮಧುಬಾಲಾ’.. ನನ್ನ ಫಾರೆವರ್ ಫೇವರಿಟ್. ಅದೆಷ್ಟೇ ಹೀರೋಯಿನ್ಸ್ ಬಂದಿದ್ರೂ ನಂಗೆ ಅವಳಷ್ಟು ಇಷ್ಟ ಯಾರೂ ಆಗಿಲ್ಲ. ಅವಳು ಅಂದ್ರೆ ನಂಗೆ ಎಲ್ಲರಿಗಿಂತಲೂ ಇಷ್ಟ, ನಿನಗಿಂತಲೂ.. ಅಂದ್ರು.😩

ಆಮೇಲೆ ನಾವಿಬ್ರೂ ಮಂಗಳಯಾನ ಮಾಡಿದ್ವಿ. ಅಂದ್ರೆ ದತ್ತಣ್ಣ ಅಕ್ಷಯ್ ಕುಮಾರ್ ಜೊತೆ ಮಾಡಿದ್ ಹಿಂದಿ ಸಿನಿಮಾ ‘ಮಿಷನ್ ಮಂಗಲ್’ ಬಗ್ಗೆ ಮಾತಾಡಿದ್ವಿ. ‘ಅಕ್ಷಯ್ ಕುಮಾರ್ ತುಂಬಾ ತಮಾಷೆಯಾಗಿ ಇರ್ತಾರೆ, ಹಾಗೇ ತುಂಬಾ ತರ್ಲೆ ಕೂಡ. ನಾನು ಸೀನ್ ಕಂಟಿನ್ಯುಟಿ ಬಗ್ಗೆ ತುಂಬಾ ಶಿಸ್ತಾಗಿರೋದ್ನ ಗಮನಿಸಿದ್ದ ಅವ್ರು ಒಂದಿನ ನನ್ನ ಕರ್ಚೀಫ್ ಕದ್ ಬಿಟ್ಟಿದ್ರು. ನಾನ್ ಎಲ್ಲ ಕಡೆ, ನನ್ ಕಂಟಿನ್ಯುಟಿ ಕರ್ಚೀಫ್ ಎಲ್ಲಿ? ಅಂತ ಹುಡುಕಾಡಿ ಸುಸ್ತಾದ್ ಮೇಲೆ ಅವ್ರು, ನೋಡಿ ಇಲ್ಲಿ ಅಂತ ಹೇಳಿ ವಾಪಸ್ ಕೊಟ್ರು. ಆವತ್ನಿಂದ ಸೆಟ್ಗೆ ಬಂದ ಯಾರನ್ನೇ ಅಕ್ಷಯ್ ತಬ್ಕೊಂಡ್ರೂ ‘ಬಿ ಕೇರ್ ಫುಲ್’ ಅಂತ ನಾನು ಕೂಗಿ ಹೇಳಿ ರೇಗಿಸ್ತಿದ್ದೆ. ಅಂತ ಶೂಟಿಂಗ್ ತಮಾಷೆಗಳನ್ನ ಹೇಳ್ಕೊಂಡ್ರು.

‘ಮಿಷನ್ ಮಂಗಲ್’ ಶೂಟಿಂಗ್ನಲ್ಲಿ ಅಕ್ಷಯ್ ಕುಮಾರ್ ಮನೆಯಿಂದ್ಲೇ ಊಟ ಬರ್ತಿತ್ತಂತೆ. ‘ತಮಾಷೆ ಏನ್ ಗೊತ್ತಾ? ಎಲ್ರೂ ನನಗೆ ಅದು ಬೇಕು, ಇದು ಬೇಕು ಅಂತ ಅಕ್ಷಯ್ಗೇ ಐಟಮ್ಸ್ ಆರ್ಡರ್ ಮಾಡ್ತಿದ್ರು. ಗ್ರೇಟ್ ಅಂದ್ರೆ ಅಕ್ಷಯ್ ಎಲ್ಲರೂ ಹೇಳಿದ ಅಷ್ಟೂ ಐಟಮ್ಸ್ ಮಾಡ್ಸಿ ತರಿಸ್ತಿದ್ರು’ ಅಂತ ಬಾಲಿವುಡ್ ಬಗ್ಗೆ ದತ್ತಣ್ಣ ತುಂಬಾ ವಿಷ್ಯ ಹಂಚ್ಕೊಂಡ್ರು, ಹಾಗೆ ಅಣ್ಣಾವ್ರ ಬಗ್ಗೆ, ಸ್ಯಾಂಡಲ್ವುಡ್ ಬಗ್ಗೆನೂ ದತ್ತಣ್ಣ ಒಂದಷ್ಟು ವಿಷ್ಯ ಮಾತಾಡಿದ್ರು. ಅದೇನಂತ ತಿಳ್ಕೊಳೋಕೆ ಸಂಜೆ ಪೋಸ್ಟ್ ನೋಡಿ…
ಮುಂದುವರಿಯುವುದು….
-ಹರಿಪ್ರಿಯಾ
Dattanna is one the Fantabulous actor in Indian Cinema. If I’m not wrong he is from Chitradurga where Dr Vishnuvardhan’s first movie Nagarahavu shooting was done. I have seen Dattanna for the first time in TV serial Mayamruga which was telecaster in DD chandana and his acting Amazed and ot use give a feel that things are happening in next door, ofcourse T N Seetaram had directed in a amazingly Natural and suttler way. His acting in Movie ” Bettada Jeeva ” mesmerizes the audience. His performance always touches the Hearts of the audience since it gives the feel that he behaves the role instead of acting. The way he performed the naughty role with such an ease in your Movie ” Neer Dose” had mesmerized and also surprised me since it was entirely different to the roles he had performed throughout his acting career and I believe it’s quite opposite his original nature also😉. And your performance was also incredible in that movie which was very bold and challenging and moreover one appreciate your dareness to accept that role being a star actress by then and set an example all others to perform such roles since it’s just a character in a movie and also helps one to explore their talents..
Your Big Fan,
Raghunandan
Thank you 🙂
Is that ” thank you ” reply for me madam ??
Sweet takeoff where u landing I waiting.
Thanks madam for introduction of another great actor, an original actor..since the enquiry was about bachelor and life as singles, it reminds me that you are probably enquiring to know that worse case scenario incase of unmarried..as much as we know, you should get married..else it would be…