“ಈ ಟೈಮಲ್ಲಿ ಸಾಯೋ ಮಾತ್ ಬೇಕಾ?”, ಯಾರಾದರೂ ಸಾವಿನ ಬಗ್ಗೆ ಮಾತಾಡ್ದಾಗ ಸಡನ್ ಆಗಿ ಈ ಥರದ ಪ್ರಶ್ನೆ ಎದುರಾಗುತ್ತೆ. ಈಗ ನಾನು ಮಾತಾಡೋಕೆ ಐ ಮೀನ್ ಬರೆಯೋಕೆ ಹೊರಟಿರೋದು ಕೂಡ ಸಾವಿನ ಮಾತೇ. ಹಹಹ.. ಹಾಗಂತ “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?” ಅಂತ ನೀವ್ ಕೇಳ್ಬೇಡಿ. ಯಾಕಂದ್ರೆ ನಾನ್ ಮಾತಾಡ್ತಿರೋದು ರಿಯಲ್ ಸಾವಲ್ಲ, ಆ್ಯಕ್ಟಿಂಗ್ ಬಗ್ಗೆ.
ಸಾವೆಂದರೆ ಕೊನೆ, ಆದರೆ ನನ್ನ ಪಾಲಿಗೆ ಅದೇ ಶುರು. ಅಂದ್ರೆ ನಾನು ನನ್ನ ಮೊದಲ ಕೆಲವು ಸಿನಿಮಾಗಳಲ್ಲೇ ಸತ್ತಿದ್ದೆ. ನಾನೊಂಥರ ಸತ್ತು ಸತ್ತು ಬದುಕಿರೋಳು, ಹಹಹ. ಮಜಾ ಗೊತ್ತಾ? ನಮ್ಗೆ ಕಲಾವಿದರಿಗೆ ಡಿಫರೆಂಟ್ ಡಿಫರೆಂಟಾಗಿ ಸಾಯೋ ಚಾನ್ಸ್ ಸಿಗುತ್ತೆ. ನಡೀತ ನಡೀತ , ನಿಂತಾಗ, ಕುಂತಾಗ ಅಥವಾ ಮಲಗಿದಲ್ಲೇ ಸಾವು. ಚೆನ್ನಾಗ್ ಸತ್ರೆ ಚಪ್ಪಾಳೆ ಬೇರೆ ಹೊಡಿತಾರೆ 😂 ಹೀಗೆ ಸೀನ್ಗೆ ತಕ್ಕ ಹಾಗೆ ನಾನಾ ಥರದಲ್ಲಿ, ಡಿಫರೆಂಟ್ ಕಾಸ್ಟ್ಯೂಮ್-ಮೇಕಪ್ನಲ್ಲಿ ಕಲರ್ ಕಲರ್ಫುಲ್ ಆಗಿ ಸಾಯ್ತೀವಿ. ಸತ್ತು ನಿಮ್ ಮನಸಲ್ಲಿ ಉಳಿತೀವಿ. ಹಾಗೆ ಸತ್ ಮೇಲೂ ಮತ್ತೆ ಬದುಕೋಕ್ ಅವಕಾಶ ಇರೋದು ನಮಗೆ ಮಾತ್ರ. ಅದೆಂಥ ಸಾವಿನ ಸೀನೇ ಆದ್ರೂ ‘ಕಟ್’ ಅಂತಿದ್ ಹಾಗೆ ಥಟ್ ಅಂತ ಎದ್ದು ಬಿಡ್ತೀವಿ..😃
ನನ್ನ ಒಂದು ಸಿನಿಮಾದಲ್ಲಿ ಲವರ್ಸ್ ಅಂದ್ರೆ ಹೀರೋ- ಹೀರೋಯಿನ್ ಇಬ್ರೂ ಸತ್ತಿರ್ತಾರೆ. ಮೆರವಣಿಗೆ ತಗೊಂಡು ಹೋಗ್ತಿರ್ತಾರೆ. ಆಗ ಮಧ್ಯಮಧ್ಯ ಗುಡುಗು-ಸಿಡಿಲು-ಮಿಂಚಿನ ಇಫೆಕ್ಟ್ಗೆ ಕೈ ಕೈ ಟಚ್ ಆಗಿ ಮಳೆ ಬರುತ್ತೆ 😂 ಸದ್ಯ ಕಣ್ ಮುಚ್ಚಿ ಸತ್ತಿದ್ದೆ. ಆದ್ರೆ ಮಳೆ ನೀರಿನ ಹನಿ ಬೀಳ್ತಿದ್ರೂ ಕಣ್ ಒಂಚೂರೂ ಶೇಕ್ ಆಗದಂತೆ ಇರಬೇಕಿತ್ತು… ಮೂಗಲ್ಲಿ ಹತ್ತಿ ಬೇರೆ! ಎಲ್ಲಿ ಒದ್ದೆ ಆದ ಹತ್ತಿ ಜಾರಿ ಮೂಗೊಳಗೆ ಹೋಗಿಬಿಡುತ್ತೋ ಅಂತ ಭಯ. ಥೂ.. ಸಾಯೋದ್ ಇಷ್ಟ್ ಕಷ್ಟನಾ ಅಂತ ಅನಿಸಿತ್ತು ಆಗ, ಹಹಹ.
ಕಣ್ ಮುಚ್ಕೊಂಡ್ ಸಾಯೋ ಕಥೆನೇ ಹೀಗಾದ್ರೆ, ಇನ್ನು ಕಣ್ ತೆರ್ಕೊಂಡೇ ಸಾಯೋದಂತೂ ವ್ಯಥೆನೇ. “ಕೊರಗ್ಲಿಲ್ಲ, ನರಳ್ಲಿಲ್ಲ.. ಬಿಟ್ ಕಣ್ ಬಿಟ್ಟ ಹಾಗೇ ಇತ್ತು. ಎಂಥ ಒಳ್ಳೇ ಸಾವು!” ಅಂತ ಅದೆಷ್ಟೋ ಜನ ಹೇಳಿದ್ನ ಕೇಳಿದ್ದೆ. ಆದ್ರೆ ಕಣ್ ಬಿಟ್ಕೊಂಡೇ ಸಾಯೋ ಕಷ್ಟ ಏನ್ ಗೊತ್ತಾ!?. ಸುತ್ಲೂ ಗುಂಪಲ್ಲಿ ಯಾರಾದ್ರೂ ತಮಾಷೆ ಮಾಡೋದ್ ಕಾಣಿಸಿದ್ರೂ ಅಥವಾ ಶಾಟ್ ಮಧ್ಯದಲ್ಲಿ ಧೂಳು ಬಂದ್ರೂ.. ಏನೇ ಆದ್ರೂ ಕಟ್ ಅನ್ನೋವರ್ಗೂ ಕಣ್ ಮಿಟುಕಿಸ್ದೇ ಇರ್ಬೇಕು. ಇಲ್ಲಂದ್ರೆ ‘ಒನ್ ಮೋರ್’ ಆಗುತ್ತೆ. ಹೀಗೆ ತೆಲುಗಿನಲ್ಲಿ ನಾನು ಆ್ಯಕ್ಟ್ ಮಾಡಿದ್ದ “ಜಯಸಿಂಹ” ಸಿನಿಮಾದಲ್ಲಿ ಕಣ್ ಬಿಟ್ಕೊಂಡೇ ಸಾಯೋ ಸೀನ್ ಇತ್ತು. ಒಂದು ದೊಡ್ಡ ಶಾಟ್, ಆ ಸೀನಲ್ಲಿ ಆ್ಯಕ್ಟ್ ಮಾಡ್ತಿದ್ದಾಗ ನನಗಾಗ್ತಿದ್ದ ಕಷ್ಟನಾ ಡೈರೆಕ್ಟರ್ ಕೆ.ಎಸ್.ರವಿಕುಮಾರ್ ಸರ್ ಗಮನಿಸಿದ್ರು. ಕಲಾವಿದರು ಕಷ್ಟಪಡೋದ್ನ ಅಬ್ಸರ್ವ್ ಮಾಡಿ ಸಜೆಷನ್ ಕೊಟ್ಟು ನಮ್ ಕೆಲಸ ಸುಲಭ ಮಾಡ್ತಾರಲ್ವ ಅವ್ರು ನಿಜಕ್ಕೂ ಗ್ರೇಟ್ ಡೈರೆಕ್ಟರ್ಸ್. “ನೋಡು.. ಆ್ಯಕ್ಷನ್ ಅನ್ನೋ ಮುಂಚೆ ಒಮ್ಮೆ ಡೀಪಾಗಿ ಬ್ರೀಥ್ ಇನ್ ಮಾಡ್ಕೊ, ನಂತ್ರ ಕಟ್ ಅನ್ನೋವರ್ಗೂ ಹಾಗೇ ಅರ್ಧತೆರೆದ ಬಾಯಲ್ಲೇ ನಿಧಾನ ಬ್ರೀಥ್ ಔಟ್ ಮಾಡ್ತಾ ಇರು..” ಅಂದ್ರು. ಹಾಗೇ ಮಾಡ್ದೆ, ಸೀನ್ ಸೂಪರ್ ಆಗಿ ಬಂತು. (ಆದ್ರೆ ಇದನ್ನ ಪ್ರಾಪರ್ ಡೈರೆಕ್ಷನ್ ಇಲ್ದೆ ಯಾರಾದ್ರೂ ಒಂಟಿಯಾಗಿ ಮನೆಯಲ್ಲಿ ಪ್ರಯತ್ನ ಮಾಡೋದು ಡೇಂಜರಸ್ 😉) ಎಲ್ರಿಗೂ ಬದುಕೋಕೆ ಹೇಳ್ಕೊಟ್ಟ ಗುರು ಇರ್ತಾರೆ, ಆದ್ರೆ ಅವ್ರು ನಂಗೆ ಸಾಯೋಕ್ ಹೇಳ್ಕೊಟ್ಟ ಗುರು ಕೂಡ, ಹಹಹ.. ಆಮೇಲೆ ‘ರಿಕ್ಕಿ’ ಸಿನಿಮಾದಲ್ಲೂ ಹಾಗೇ ಕಣ್ ಬಿಟ್ಕೊಂಡೇ ಈಸಿಯಾಗಿ ಸತ್ತಿದ್ದೆ. ಅದ್ಕೆ ಸಾವಿನ್ ಬಗ್ಗೆ ಈಗ ಈಸಿಯಾಗಿ ಇಷ್ಟೆಲ್ಲ ಮಾತಾಡ್ದೆ.
ಯೆಸ್.. ಇಷ್ಟೊತ್ ನಾನು ಮಾತಾಡಿದ್ದು ರೀಲ್ ಸಾವು, ಅಂದ್ರೆ ಸಾಯೋ ಆ್ಯಕ್ಟಿಂಗ್ ಬಗ್ಗೆನೇ ಆಗಿದ್ರೂ ಎಷ್ಟೋ ಜನಕ್ಕೆ ಈ ಸಾವಿನ ಮಾತು ಇಷ್ಟ ಆಗದೇ ಇರ್ಬೋದು. ನಂಗೂ ಅಷ್ಟೇ, ಕೆಲವೊಂದ್ಸಲ ಹಾಗೇ ಅನ್ಸುತ್ತೆ. ಇದನ್ನು ಓದಿದ್ ಅಮ್ಮ ಕೂಡ ಕೇಳಿದ್ ಇದ್ನೇ.. “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?” 😉
-ಹರಿಪ್ರಿಯಾ
ಕನ್ನಡದಲ್ಲಿ ನಿಮ್ಮ ಮಾತುಗಳನ್ನು ಸೊಗಸಾಗಿ ಹಂಚಿಕೊಂಡಿದ್ದೀರಿ. ಧನ್ಯವಾದಗಳು ಮೇಡಂ.
This photo has very simple costumes and dress..may i ask which movie is it where u played this character of simple person with low proce ornaments..maybe u can add a trivia sort of thing and your fans can guess the movie, location,song, etc..just to keep it more engaging and fun..what u say madam
Death.. While inevitable..is also highly traumatic..To truly act death and make the audience feel the trauma is even more challenging..thanks for sharing the interesting thoughts and actions towards perfection.. The photo makes you glitter like an angel just arrived from heaven 🙂
Naagarapamchami dina e savin maath yak madam…😀
ಕನ್ನಡದಲ್ಲಿ ನೀನು ಬರೆದರೆ ನನ್ನ ಜೊತೆ ಪಕ್ಕದಲ್ಲೆ ಕೂತು ನೀನು ಮಾತಾಡ್ತಿದ್ಯ ಅನ್ಸುತ್ತೆ …??? ಅದೇ ಇಂಗ್ಲೀಷಲ್ಲಿ ಬರುದ್ರೇ ಎಲ್ಲೋ ದೂರದಿಂದ ಪೋನ್ ಅಲ್ಲಿ ಮಾತನಾಡಿದ ಹಾಗೆ ಇರುತ್ತೆ ಹರಿಪ್ರಿಯಾ.ಬಾಯ್.ಟೇಕ್ ಕೇರ್.ಕನ್ನಡ ಬಳಸಿದ್ದಕ್ಕೆ ಧನ್ಯವಾದ.ಸ್ವರ್ಗ ಅನ್ನೋದು ಇದ್ರೆ ಅಲ್ಲಿ ಸೇರೋಣ..!!
ನೀನು ನನ್ನ ಸ್ನೇಹ ಬೇಡ ಅಂದೆ, ಅದುಕ್ಕೆ ನಿನ್ನಿಂದ ದೂರ ಹೋಗ್ತ ಇದ್ದೀನಿ…!!!
ಇಂತಿ ನಿನ್ನ ಮಗಧೀರ
ನ💘ನ್……!!!