ಇಡೀ ಸಂಸಾರ, ಅಂದ್ರೆ ಮಡದಿ, ಮಕ್ಕಳು, ತಂದೆ-ತಾಯಿ, ತಂಗಿ ಅಥವಾ ತಮ್ಮ ಮತ್ತಿತರರ ಬೇಕು-ಬೇಡಗಳನ್ನು ನಿಭಾಯಿಸುವವನು ತಂದೆ. ಎಲ್ಲಿಯವರೆಗೆ? ಕೊನೆಯವರೆಗೂ.
ಎಲ್ಲರ ಜವಾಬ್ದಾರಿಯನ್ನು ಹೊತ್ತು ನಿಲ್ಲುವವ ತಂದೆ. ಇದು ಅವನ ಹೆಮ್ಮೆಯೂ ಹೌದು, ತಪ್ಪಿಸಿಕೊಳ್ಳಲು ಆಗದ ಜವಾಬ್ದಾರಿಯೂ ಹೌದು. ಏಕೆಂದರೆ, ಈತ ಎಲ್ಲರ ಬೆನ್ನೆಲುಬು. ಕಷ್ಟಕ್ಕೆ, ಸುಖಕ್ಕೆ ಆಗುವ ಮನೆಯ ದಿಕ್ಕು.
(ನನಗೆ ಬಾಲ್ಯ ನೆನಪಾಗುತ್ತೆ. ನನ್ನ ಸ್ನೇಹಿತರೊಂದಿಗೆ ಜಗಳ ಆದಾಗ, ‘ಇರು ಅಪ್ಪಂಗೆ ಹೇಳ್ತೀನಿ’ ಅಂತಿದ್ದೆ. ಅಮ್ಮಂಗೆ ಏನಾದರೂ ಬೇಜಾರಾಗಿದ್ರೆ ಅಪ್ಪ ಬರೋವರ್ಗೂ ಕಾದು, ಅವರ್ಗೆ ಹೇಳ್ಕೊಂಡು ಸಮಾಧಾನ ಆಗ್ತಿದ್ರು. ಎಲ್ಲರಿಗೂ.. ಏನೇ ಬೇಕಂದ್ರೂ ಅಪ್ಪ ಇದಾರೆ ಅನ್ನೋ ಧೈರ್ಯ.)
ಮನೆಯಲ್ಲಿರುವವರೆಲ್ಲ ಸಂತೋಷವಾಗಿರುವುದರ ಹಿಂದೆ ಈತನ ಸಾಕಷ್ಟು ಪರಿಶ್ರಮ ಇರುತ್ತೆ. ಪ್ರತಿಯೊಂದು ವ್ಯಕ್ತಿಗೂ ಆರ್ಥಿಕತೆಯಲ್ಲೋ, ಮನಸಿನ ಸ್ಥಿತಿಯಲ್ಲೋ ಏಳು-ಬೀಳುಗಳಿರುತ್ತವೆ. ಆದರೆ ನಮ್ಮ ಖುಷಿಯಲ್ಲಿ ಅವರ ಎಷ್ಟೋ ನೋವನ್ನು ಮರೆಯುತ್ತಾರೆ. ನಾವು ನಮ್ಮ ಪ್ರತಿದಿನದ ಗೊಂದಲಗಳ ಮಧ್ಯ ಗಮನಿಸಲ್ಲ.
ತಂದೆಯಾದವರು ಆ ಸ್ಥಾನದಲ್ಲಿರುವಾಗ ಅವರ ಕಷ್ಟಗಳನ್ನು ತೋರಿಸಲು ಇಷ್ಟಪಡಲ್ಲ. ‘ಮನೆಯ ಪಿಲ್ಲರ್ ವೀಕಾಗಿದೆ ಅಂದ್ರೆ ಬೇರೆಯವರು ಗಾಬರಿ ಆಗ್ತಾರೆ’ ಅಂತ. ಆದ್ರೆ ನಾವು ಅದನ್ನು ಅರಿತು, ನಾವೆಲ್ಲರೂ ಇದ್ದೇವೆಂದು ಪರೋಕ್ಷವಾಗಿ ಭರವಸೆ ಕೊಡಬೇಕು.
ಕೆಲವು ಸಂದರ್ಭಗಳಲ್ಲಿ ಅದೆಂಥ ಅರಸನಾದರೂ ಅಸಹಾಯಕನಾಗುತ್ತಾನೆ. ಎಲ್ಲ ಕುಟುಂಬಸ್ಥರೂ ಒಬ್ಬರ ಮೇಲೇ ಅವಲಂಬಿಸಿದಾಗ, ಕೆಲವೊಮ್ಮೆ ಹೊರೆ ಅನಿಸುತ್ತದೇನೋ? ಆತ ಸಂಸಾರದ ಕಣ್ಣಲ್ಲಿ ಹೀರೋ. ಆದರೆ ತಂದೆಯಾದವರು ಕೂಡ ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿ. ಏನೇ ಆಗಲಿ, ಸಂಸಾರದ ದೋಣಿಯನ್ನು ದಡಕ್ಕೆ ಸೇರಿಸುತ್ತಾನೆ.
ಈ ತಂದೆ ಅನ್ನೋ ಸ್ಥಾನಾನ ಗಂಡೇ ಅಲ್ಲ, ಎಷ್ಟೋ ಹೆಣ್ಣು ಮಕ್ಕಳೂ ತುಂಬುತ್ತಿದ್ದಾರೆ. ಹೊರಜಗತ್ತಿನ ಜಂಜಾಟದಲ್ಲೂ ಗೆದ್ದು, ಮನೆ ಜವಾಬ್ದಾರಿಯನ್ನೂ ಸಾಗಿಸುತ್ತಿದ್ದಾರೆ.
‘ತಂದೆ’ ಅನ್ನೋ ಸ್ಥಾನವನ್ನು ತುಂಬುತ್ತಿರುವ ಪ್ರತಿಯೊಂದು ವ್ಯಕ್ತಿಗೂ ನನ್ನದೊಂದು ದೊಡ್ಡ ಸಲಾಮ್.

-ಹರಿಪ್ರಿಯಾ
Nicely written blog on importance of father in life. Equal credit goes to mother as well. Please continue to share your thoughts in blogs.
Definitely. Thank you 🙂
ನೀವೂ ರೀಪ್ಲೇ ಮಾಡಲೇ ಬೇಕು… ನೀವೂ ತಂದೆಯ ಬಗ್ಗೆ ಬರೆದಿರುವಿರಿ.. ಆದರೇ ನೀವೂ ತಂದೆಯನ್ನು ಕಳಕೊಂಡಿರಿ ಚಿಕ್ಕ ವಯಸ್ಸಿನಲ್ಲಿ, ಅವರು ನೀವು ಯಾವ ವಯಸ್ಸಿನಲ್ಲಿ ಇದ್ದಾಗ ತೀರಿಕೊಂಡರು.. ನನಗೆ ಗೊತ್ತು ನಿಮ್ಮ ಯಶಸ್ಸು ನೋಡಲು ನಿಮ್ಮ ತಂದೆಯಿಲ್ಲವಲ್ಲ ಎಂಬ ಕೋರಗು ನಿಮಗಿದೆಯೆಂದು… ಆ ನೋವನ್ನು ನೀವೂ ಹೇಗೆ ನೀಬಾಯಿಸುತ್ತೀರಿ…ಯಾರ ಬಳಿ ನಿಮ್ಮ ಕಷ್ಟ ತೋಡಿಕೊಳ್ಳುತ್ತೀರಿ ದಯಮಾಡಿ ರೀಪ್ಲೇ ಮಾಡಿ….!!!
My father passed away during my 9th std exams ! AMMA is everything to me 🙂
Appa my hero
😀
Tumba chennagi bardiddira madam…
Thank you 🙂
ತಂದೆಯ ಕುರಿತು ಎಷ್ಟು ಹೇಳಿದರೂ ಕಡಿಮೆಯೇ ನಮಗಾಗಿ ಇಡೀ ಜೀವನವನ್ನು ಸವೆಸುವ ಅವರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ ನಿಮ್ಮ ಬರವಣಿಗೆಯ ಶೈಲಿಯೂ ಚೆನ್ನಾಗಿದೆ
Haa medam your right my best friend my father
😀
Thank you 🙂
Madam NIV bardiro article nijvaglu heart touch maditu eneaadru maneli Appa idare anno. Dhairya irutte but aade Appa ilde hodre Amma ne Ella nangu Appa illa EE article inda nangu Appa innaasht Dina nanjote irbek ittu ansutte
I understand because even I miss my dad ! but they are watching and blessing us !!
ನಿಜ ಜೀವನದ ನೈಜ ಘಟನೆಗಳು
ಎಲ್ಲರೂ ಈ ರೀತಿಯ ಜೀವನವನ್ನು ಅನುಭವಿಸಿರುತ್ತಾರೆ ಇದನ್ನು ಓದುವಾಗ ನಮ್ಮ ಬಾಲ್ಯ ನೆನಪಾಯಿತು ಚೆನ್ನಾಗಿದೆ 💙
🙂
Dear Haripriya madam your so lucky.Every Girl like first hero in the world one and only Father. best writing dear mam your are not Heroin your best human being well natured every one reached and touch with you.this is the way of sucess dear mam all the best dear mam God bless you achive more sucess CHANDANAVANADA Big DIAMOND agi madam🙏🙏🙏🙏🙏🙏🙏
Thank you so much 🙂
When ur dad is no more anything about father can make you tear. This title I couldn’t control my tears rolling down.
Hugs to you likitha 🙂
ಸೊಗಸಾಗಿದೆ ನಿಮ್ಮ ಬರಹ..
ನನಗೂ ಅಷ್ಟೇ ನಮ್ಮ ಅಪ್ಪ ನಡೆದಾಡೋ ದೇವರು.
🙂 🙂
ಸೂಪರ್ ಕ್ವೀನ್🙏🙏🙏🙏
🙂
ಕೊರೋನಾ ಎಫೆಕ್ಟ್ಸ್ ಕೋಡೊದು ತಗೊಳೊದು ಚೆನ್ನಾಗಿ ಮಾಡಿ
ha ha !
ಮಕ್ಕಳು ಇಲ್ಲದವರಿಗೆ ಮಗಳು ಸ್ತಾನ ಕೊಟ್ಟಿದ್ದೀರಾ ತಂಗಿ ಇಲ್ಲದವರಿಗೆ ತಂಗಿ ಸ್ಥಾನ ತುಂಬಿದೀರಾ ಅಕ್ಕ ಇಲ್ಲದವರಿಗೆ ಅಕ್ಕನ ಸ್ಥಾನ ಅಮ್ಮ ಇಲ್ಲದವರಿಗೆ ಅಮ್ಮನಸ್ಥಾನ ತುಂಬಿದ್ದೀರಾ ಪ್ರೇಮಿ ಇಲ್ಲದವರಿಗೆ ಪ್ರೇಮಿ ಸ್ಥಾನ ತುಂಬಿದೀರಾ ಮಹಾನ್ ತ್ಯಾಗಿ ನೀವು ನಿಮ್ಮ ತ್ಯಾಗದ ಮುಂದೆ ಬೇರೆಯವರ ತ್ಯಾಗ ಚಿಕ್ಕದು ಬೇರೆಯವರ ಇಸ್ಟಾರ್ತಾಗಳನ ನೇರವೇರಿಸೊ ನೀವು ನಿಮ್ಮ ತಂದೆ ತಾಯಿಗಳ ಇಸ್ಟಾರ್ತಗಳನ್ನ ನೆರವೆರಿಸಿ ಊರ್ನಲ್ಲಿ ಇರೊರ್ನೆಲ್ಲ ತಂದೆ ಸ್ಥಾನ ಕೊಟ್ಟಿದ್ದೀರ ನಿಮ್ಮ ಅಭಿಮಾನಕ್ಕೆ ಚಿರರುಣಿ
ಪ್ರೀತಿಯ ಹರಿಪ್ರಿಯಾ
ಹೆಣ್ಣುಮಕ್ಕಳಿಗೆ ತಾಯಿಗಿಂತ ತಂದೆಯ ಮೇಲೆಯೇ ಪ್ರೀತಿ ಜಾಸ್ತಿ. ಅಂತಹ ತಂದೆಯ ಪ್ರೀತಿಯಿಂದ ನೀವು ವಂಚಿತರಾಗಿಯೇ ಬೆಳೆದಿರಿ. ಈ ನಿಮ್ಮ ಲೇಖನದಲ್ಲಿ ತಂದೆಯ ಬಗ್ಗೆ ತಂದೆಯ ಜವಾಬ್ದಾರಿಯ ಬಗ್ಗೆ ಕುಟುಂಬದಲ್ಲಿ ಮಕ್ಕಳ ಪಾಲನೆಯಲ್ಲಿ ಅವರ ಪಾತ್ರದ ಬಗ್ಗೆ ತುಂಬಾ ಭಾವನಾತ್ಮಕವಾಗಿ ಮನಮುಟ್ಟುವಂತೆ ಬರೆದಿದ್ದೀರಿ. ನಿಮ್ಮ ತಾಯಿಯೇ ತಂದೆಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೂ ತಂದೆಯ ಬಗೆಗಿನ ನಿಮ್ಮ ಹಪಹಪಿ ಈ ಲೇಖನದಲ್ಲಿ ಎದ್ದು ಕಾಣುತ್ತದೆ. ಕಾಲ ಕಳೆದು ಹೋಗಿದೆ. ನಿಮ್ಮ ಅಪ್ಪ ನಿಮ್ಮ ಆ ಮಗುವಿನ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ ನಿಮ್ಮಲ್ಲ ಸಾಧನೆಗಳಿಗೆ ಅವರು ಆಶೀರ್ವಾದ ಖಂಡಿತಾ ಇರುತ್ತೆ.
🙂 🙂 🙂
namaskaragalu 🙂
ತುಂಬಾ ಚನ್ನಾಗಿದೆ
🙂
ಸೂಪರ್
🙂