ನಾನಾಗ ಚಿಕ್ಕವಳಿದ್ದೆ, ಚಿಕ್ಕಬಳ್ಳಾಪುರದಲ್ಲಿದ್ದೆ. ಅದೇ ನಮ್ಮೂರು, ಅಲ್ಲೇ ನಾನು ಪ್ರೈಮರಿ ಸ್ಟಡೀಸ್ ಮಾಡಿದ್ದು. ಒಂದಿನ ಏನಾಯ್ತು ಗೊತ್ತಾ? ನಮ್ ಟೀಚರ್ ಮೀಟಿಂಗ್ ಅಂತ ಹೋದ್ರು. ನಾನು ಕ್ಲಾಸ್ ಲೀಡರ್ ಆಗಿದ್ನಲ್ವ, ಅದ್ಕೆ ‘ಸ್ವಲ್ಪ ಕ್ಲಾಸ್ ನೋಡ್ಕೋ’ ಅಂತ ನನ್ನ ಹತ್ರ ಹೇಳಿ ಹೋದ್ರು. ಅವರು ಹೋಗಿ ಐದು ನಿಮಿಷನೂ ಆಗಿಲ್ಲ, ಅಷ್ಟರಲ್ಲೇ ಒಂದ್ ಹುಡ್ಗಿ ಟಾಯ್ಲೆಟ್ಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದ್ಲು. ಇನ್ನು ಸ್ವಲ್ಪ ಹೊತ್ತು ಬಿಟ್ಟು ಮತ್ತೊಂದ್ ಹುಡ್ಗಿ ಹಾಗೇ ಹೇಳಿ ಹೋದ್ಲು. ಸ್ವಲ್ಪ ಹೊತ್ನಲ್ಲಿ ಒಬ್ರೊಬ್ರೇ ಕೇಳ್ಕೊಂಡ್ ಹೋದ್ರು. ಆಶ್ಚರ್ಯ ಅಂದ್ರೆ ಹೋದವರು ಒಬ್ರೂ ವಾಪಸ್ ಬರಲಿಲ್ಲ. ಅರ್ಧ ಕ್ಲಾಸೇ ಖಾಲಿ ಆಗಿತ್ತು.. ಹುಹ್… ಇನ್ನು ಸ್ವಲ್ಪ ಹೊತ್ತಾದ್ರೆ ಟೀಚರ್ ಬಂದ್ ಬಿಡ್ತಾರೆ, ಎಲ್ಲರೂ ಎಲ್ಲಿ ಅಂತ ಕೇಳ್ತಾರೆ ಅನ್ನೋ ಭಯ ಶುರು ಆಯ್ತು. ಅದ್ಕೆ ಎಲ್ರನ್ನೂ ಕರೆದ್ಕೊಂಡ್ ಬರೋಣ ಅಂತ ನಾನೂ ಟಾಯ್ಲೆಟ್ ಕಡೆ ಓಡಿ ಹೋದೆ, ಹಹಹ.
ನಮ್ಮ ಸ್ಕೂಲ್ ಹಿಂದಿನ ಗೇಟ್ ಹತ್ರ ಟಾಯ್ಲೆಟ್ ಇತ್ತು.. ಅಲ್ಲೇ ಪಕ್ಕದಲ್ಲೇ ರೈಲ್ವೇ ಟ್ರ್ಯಾಕು. ಅಲ್ಲೊಂದ್ಕಡೆ ತುಂಬಾ ಜನ ಸೇರಿದ್ರು. ನಮ್ ಸ್ಕೂಲ್ ಹುಡ್ಗೀರು ಅಲ್ಲೇ ಇದ್ದಿದ್ದು ಕಾಣಿಸ್ತು. ಇವ್ರೆಲ್ಲ ಅಲ್ಯಾಕೆ ನಿಂತಿದಾರೆ, ಏನ್ ನಡೀತಿದೆ ಅಲ್ಲಿ ಅನ್ನೋ ಕ್ಯೂರಿಯಾಸಿಟಿಯಿಂದ ನಾನೂ ಹೋದೆ. ನಮ್ ಕ್ಲಾಸ್ಮೇಟ್ಸ್ ಮಧ್ಯ ನುಸುಳಿಕೊಂಡು ಮುಂದಕ್ ಹೋದೆ. ಅಲ್ಲಿ ಶೂಟಿಂಗ್ ನಡಿತಿರೋದು ಅಂತ ಗೊತ್ತಾಗಿದ್ ಮೇಲೆ, ಎಲ್ರನ್ನೂ ಕರೆದುಕೊಂಡು ಹೋಗೋದು ಮರೆತೆ. ನಂಗೂ ಯಾವ್ ಸಿನಿಮಾ ಏನು ಅಂತ ನೋಡೋಕೆ ಆಸೆ ಆಯ್ತು. ಇನ್ನೂ ಒಂದಿಬ್ರನ್ನ ತಳ್ಕೊಂಡು ಇನ್ನೂ ಸ್ವಲ್ಪ ಮುಂದೆ ಹೋಗಿ ಸ್ವಲ್ಪ ಎಡಕ್ಕೆ ಬಾಗಿ ಬಲಕ್ಕೆ ನೋಡ್ದೆ.
ಎದುರುಗಡೆ ರೈಲ್ವೇ ಬೋಗಿ ಕಾಣಿಸ್ತು. ಬೋಗಿ ಎಂಟ್ರೆನ್ಸ್ ಕಡೆಗೇ ಎಲ್ರೂ ನೋಡ್ತಿದ್ರು. ದೊಡ್ಡ ಲೈಟ್ ಬೇರೆ ಫೋಕಸ್ ಮಾಡಿದ್ರು (H.M.I- ಈಗ ಎಕ್ಸ್ಪೀರಿಯನ್ಸ್ನಿಂದ ಗೊತ್ತು). ಅಷ್ಟರಲ್ಲಿ ಬೆಳ್ಳಗಿರೋರು ಒಬ್ರು ( ಲೈಟ್ ಮತ್ತೆ ಮೇಕಪ್ಗೆ ಇನ್ನೂ ಬೆಳ್ಳಗೆ ಕಾಣಿಸ್ತಿದ್ರು) ನಿಧಾನ ಹೊರಗೆ ಬಂದ್ರು, ಎಡ್ಜ್ನಲ್ಲಿ ನಿಂತ್ರು. ಹಾಗೆ ಒಮ್ಮೆ ಎಲ್ರಿಗೂ ಕೈ ಬೀಸಿದ್ರು. ನನ್ನ ಕಣ್ಣನ್ನ ನನಗೇ ನಂಬೋಕಾಗಿಲ್ಲ. ಯಾಕ್ ಗೊತ್ತಾ? ಗೆಸ್ ಮಾಡಿ ನೋಡೋಣ.
ಇವತ್ತು ನಾನು ಈ ವಿಷ್ಯ ಹೇಳ್ತಾ ಇದೀನಿ ಅಂದ್ರೆ ನಿಮ್ಮಲ್ಲಿ ಒಂದಷ್ಟು ಜನ ಖಂಡಿತ ಗೆಸ್ ಮಾಡಿರ್ತೀರಿ. ಎಸ್.. ಅವರೇ, ನಮ್ ಅಣ್ಣಾವ್ರು. ನಮ್ಮ ನಿಮ್ಮೆಲ್ರ ನೆಚ್ಚಿನ, ಪ್ರೀತಿಯ ವರನಟ ಡಾ. ರಾಜ್ಕುಮಾರ್ ಸರ್. ಇವತ್ತು ಅವ್ರ ಬರ್ತ್ಡೇ. ಈಗ ಅವ್ರು ಇದ್ದಿದ್ರೆ (ಈಗಲೂ ನಮ್ಮ ಹೃದಯದಲ್ಲಿ ಅವ್ರು ಇದಾರೆ) ಅವರಿಗೆ 91 ವರ್ಷ.
ನನಗೆ ಆಗ 9 ವರ್ಷ ಅನಿಸುತ್ತೆ. ಆಗ ನನಗೆ ಹೀರೋಯಿನ್ ಆಗ್ತೀನಿ ಅನ್ನೋ ಆಸೆ ಕನಸು ಏನೂ ಇರೋಕೆ ಸಾಧ್ಯ ಇಲ್ಲ ಬಿಡಿ. ಆದ್ರೆ ಆಗ್ಲೇ ನಾನು ಅಣ್ಣಾವ್ರನ್ನು ಅಷ್ಟು ಹತ್ರದಿಂದ ನೋಡಿದ್ನಲ್ಲ, ಅದು ನನ್ನ ಅದೃಷ್ಟ. ಆಮೇಲೆ ನಾನು ಬೈ ಚಾನ್ಸ್ ಆಗಿ ಚಿತ್ರರಂಗಕ್ಕೆ ಬಂದೆ, ಹೀರೋಯಿನ್ ಕೂಡ ಆದೆ. ಆದರೆ ಅವರನ್ನು ಒಮ್ಮೆನೂ ಭೇಟಿ ಮಾಡೋಕೆ ಅಥವಾ ಹತ್ರದಿಂದ ನೋಡೋಕಾಗಿಲ್ವಲ್ಲ ಅನ್ನೋದೇ ದೊಡ್ಡ ಬೇಜಾರು.
ನಂಗೆ ಒಂದ್ ಅಭ್ಯಾಸ ಇದೆ. ಕಾರಲ್ಲಿ ಎಲ್ಲಿಗಾದ್ರೂ ಹೋಗೋವಾಗ ರಸ್ತೆ ಬದಿಯಲ್ಲಿ ಯಾವುದಾದರೂ ದೇವಸ್ಥಾನ, ಚರ್ಚ್, ಮಸೀದಿ.. ಏನೇ ಕಾಣಿಸಿದ್ರೂ ಒಮ್ಮೆ ಕಾರೊಳಗಿಂದಲೇ ನಮಸ್ಕಾರ ಮಾಡ್ತೀನಿ. ಅದೇ ಥರ ಕಂಠೀರವ ಸ್ಟುಡಿಯೊ ದಾರಿಯಲ್ಲಿ ಹೋಗೋವಾಗಲೂ ಅಷ್ಟೇ, ಕಾರಲ್ಲಿ ಹೋಗ್ತಾ ಹಾಗೇ ಒಮ್ಮೆ ಅಣ್ಣಾವ್ರ ಪುಣ್ಯಸ್ಥಳದ ಕಡೆಗ್ ನೋಡಿ ನಮಸ್ಕಾರ ಮಾಡ್ತೀನಿ. ಯಾಕೆ ಅಂದ್ರೆ, ಅಭಿಮಾನಿಗಳೇ ನನ್ನ ದೇವರು ಎಂದ ಅವರು ನನಗೂ ದೇವರಸಮಾನ. ನನಗೆ ಮಾತ್ರ ಅಲ್ಲ, ಇಂಡಸ್ಟ್ರಿಯ ಎಲ್ರಿಗೂ ಅವ್ರು ದೇವರ ಥರ.
ಸ್ಯಾಂಡಲ್ವುಡ್ನ ದೇವರ ಜನ್ಮದಿನ ಅಂದ್ರೆ ನಮಗೆಲ್ಲರಿಗೂ ಸಂಭ್ರಮದ ದಿನ, ಸೆಲೆಬ್ರೇಷನ್ ಮಾಡೋ ವಿಷಯ. ಆದ್ರೆ ಈ ಸಲ ಒಂದೇ ಬೇಜಾರು, ನಮಗೆ ಅವರ ಪುಣ್ಯಭೂಮಿಗೆ ಹೋಗಿ ಹತ್ರದಿಂದ ಅವರಿಗೆ ಗೌರವ ಸಲ್ಲಿಸೋ ಅವಕಾಶ ಇಲ್ಲ. ಕೊರೊನಾ ಕಾರಣಕ್ಕೆ ಎಲ್ರೂ ಸೋಷಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡಲೇಬೇಕು. ಆದರೆ ಅಣ್ಣಾವ್ರ ವಿಷಯದಲ್ಲಿ ಈ ಡಿಸ್ಟೆನ್ಸ್ ಈ ಸಲಕ್ಕೆ ಮಾತ್ರ. ಯಾಕಂದ್ರೆ ಎಮೋಷನಲಿ ಅವ್ರು ಯಾವಾಗಲೂ ಹತ್ರ, ಯಾವತ್ಗೂ ಹತ್ರ.
ಹರಿಪ್ರಿಯಾ
Image Courtesy: picbear.org
Nanu annavra big fan but avrna ond sari nu direct agi nodoke aglilla mam..ade tumba bejaru
Hi Haripriya madam .. I’m big fan for your acting skills, kind of roles you chose always been impressing and lastly your simplicity in everything .. You have your own way of writing skills; pls keep continue it in your free time even after lockdown … I make myself free time to read your blogs regularly.. Lots of love from Canada🇮🇳🇨🇦.. Please stay safe everyone over there 🙏👏..
Thank you, definitely! Writing will continue forever 🙂
👌ag bardidira mam
Thank you 🙂
ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ.
Thank you 😊
Most welcome 😍
Super…
I always have a feeling that in Kannada film industry after a long time an actress who can also act has come.
Today is my birthday, please wish me happy birthday hariprriya…..it makes my birthday more special
Happy birthday, stay blessed 🙂
Thank you so much, so nice of you
Man beauty beautifully narrated the experience…. All the best on these happy & emotional day we all kannadigas see that U grow higher & higher…….
Thank you 🙂
ಶಬ್ದವೇದಿ ಸಿನಿಮಾ ಚಿತ್ರಿಕರಣ ಇರಬಹುದಾ. ಸ್ವಾರಸ್ಯಕರವಾದ ಅನುಭವ 🙂
Thank you 🙂
Penned ur experience nicely madam!!!
Thank you 🙂
ಡಾ. ಮುತ್ತುರಾಜ್ ಕುಮಾರ್ ಸರ್ ಅಂತಂದ್ರೆ ಎಲ್ಲರಿಗೂ ಇಷ್ಟ, ಆದರೆ ಅವರಂತೆ ಆಗೋದು ಸ್ವಲ್ಪ ಕಷ್ಟ.
🙂
ಡಾಕ್ಟರ್ ರಾಜ್ಕುಮಾರ್ ಅವರ ಬಗ್ಗೆ ತುಂಬಾ ಅದ್ಭುತವಾಗಿ ನಿಮ್ಮ ಆ School ದಿನಗಳಲ್ಲಿ ಕಂಡ ಅಣ್ಣಾವ್ರ ಬಗ್ಗೆ ವಿವರಿಸಿದ್ದು ತುಂಬಾ ಖುಷಿಯಾಯಿತು ಮೇಡಂ 🙏 I m Your bigg Fan medam😍😘
Thank you 🙂
Happy birthday Rajanna💥
🙂
Kaleda tingalalli naanu freelancing aadhaarada mele kelasa maaduttidda samshte corona kaaranadinda business loss aagi mucchalpattitu nannataradavara jote adara khaam udyogigalannu bere kelasa seralu anumati patra needi kaluhisitu. Inthaha paristhitiyalle duhkha padada naanu ee dina nimma blogalliruva annavra photo mattu avara nenapalli nimma hrudayasparshi barahavu dukhada jotege aanandabhaashpa tarisitu. Aitihaasika cinemaagalendare chikkandinindaloo aakarshane hecchu, itteechina dinagalalli kalaatmaka, award winning haagoo vibhinna saamaajika chitragalannashte maatra veekshisuttiddene. Appajiyavara chitragalendare moral story classthara enjoymaadteeni. (yaavaagalaadroo munduvarisuttene)
Matte munduvarisuttiruve.
Prastuta nirudyogiruva naanu ee dina ondu target haakikondiddene,’Isht dina naanu just prekshaka maatra aagdde, inmele part of the businessoo(industrynoo) aagbeku antha’ idbkke swarhbvaasiyaagiruva annaavre saakshi.
ಯಲ್ಲಾ ಹೇಳಿದ್ದೀರ ಒಂದ್ ಮಿಸ್ ಮಾಡಿದ್ದೀರ ನೀವು ಶೂಟಿಂಗ್ ನೋಡುದ್ರಲ್ಲ ಅಣ್ಣವ್ರುದು ಯಾವ ಸಿನಿಮಾ ಅಂತ ಹೇಳಿಲ್ಲ ಅದ್ರು ನಾನು ಹೇಳ್ತಿನಿ ಯಾವ ಸಿನಿಮಾ ಅಂತ ಶಬ್ಧವೇದಿ ತಾನೆ,ನಂದು ಒಂದು ಸಣ್ಣ ಕಥೆ ಇದೆ ನಮ್ಮ ಊರು ತೂಮಕೂರು ಶಬ್ಧವೇದಿ ಸಿನಿಮಾ ತುಮಕೂರು ಕ್ರಿಷ್ಣ ಟೇಟರ್ ನಲ್ಲಿ ರಿಲೀಸ್ ಆಗಿತ್ತು ಪಸ್ಟು ಡೇ ಸೆಕೆಂಡ್ ಸೋ ಸಿನಿಮಾ ನೋಡೊಣ ಅಂತ ನಾನು ನನ್ನ ಪ್ರೆಂಡ್ ಟೇಟರ್ ಅತ್ತಿರ ಹೋಗಿದ್ದೊ ಆಗ ನನ್ನ ವಯಸ್ಸು 13 ವರ್ಷ ಟೇಟರ್ ಅತ್ತಿರ ಜನವೋ ಜನ ಆ ಜನದಲ್ಲಿ ನಮ್ಮಿಗೆ ಟಿಕೆಟ್ಟು ಸಿಗೋದಾದರು ಹೇಗೆ ಅಂತ ಯೋಚನೆ ಮಾಡ್ತಯಿದ್ದೋ ಪಟಾಕಿ ಸೌಂಡು ಟಮಟೆ ಸೌಂಡು ಅದುನ್ನೆಲ್ಲ ನೋಡಿ ಓಂದು ಕಡೆ ಖುಷಿಯಾದರೆ ಟಿಕೆಟ್ ಇಲ್ಲ ಅಂತ ಒಂದು ಕಡೆ ದುಖ್ಖ ಆಗ ಏನು ಮಾಡೋದು ನೀವೆ ಏಳಿ ನಾನು ಆಗಲೆ ಅಣ್ಣವ್ರ ದೊಡ್ಡ ಪ್ಯಾನ್ ಸಿನಿಮಾ ನೋಡಲೆ ಬೇಕು ಬ್ಲಾಕ್ ತಗೋಳೋಣ ಅಂದರೆ ಜಾಸ್ತಿ ದುಡ್ಡು ಇಲ್ಲ . ಆದೆ ಟೈಂ ನಲ್ಲಿ ಓಂದು ಗಲಾಟೆ ಆಯ್ತು ಪೋಲಿಸ್ ಹಾಗೂ ಅಭಿಮಾನಿಗಳ ಮದ್ಯೆ ದೊಡ್ಡ ಗಲಾಟೆನೆ ಆಯ್ತು ಟೇಟರ್ ಅತ್ತಿರ ಯಾರು ಅಭಿಮಾನಿಗಳು ನಿಲ್ಲುವ ಆಗಿಲ್ಲ ಆಗ ನಾವು ಯೋಚನೆ ಮಾಡುತ್ತ ನಿಂತಿದ್ದೋ ಆಗ ಪೋಲಿಸ್ ನವರು ಅಲವ್ನ್ಸ ಮಾಡಿದರು ಅಭಿಮಾನಿಗಳಲ್ಲಿ ವಿನಂತಿ ಪೋಲಿಸ್ ಸ್ಟೇಷನ್ ಅತ್ತಿರ ಅಣ್ಣವ್ರ ಸಿನಿಮಾ ಟಿಕೆಟ್ ಕೊಡುತಾರೆ ಅಂತ ನಾವು ಅಲ್ಲಿಂದ ಹೋಡಿದೆವು ಪೋಲಿಸ್ ಸ್ಟೇಷನ್ ಅಂತ್ತಿರ ಸ್ವಲ್ಪ ಹೊತ್ತು ಬಿಟ್ಟು, ಟಿಕೆಟ್ ಕೋಟ್ಟರು ಆಗ ಅಲ್ಲಿಂದ ಹೋಡಿ ಬಂದು ಸಿನಿಮಾ ನೋಡಿದೇವು ಸಿನಿಮಾ ನೋಡಿದಿವಿ ಅಂತ ಕುಷಿ ಪಡೋದೋ ಇಲ್ಲ ಪೋಲಿಸ್ ಸ್ಟೇಷನಲ್ಲೀ ಟಿಕೇಟ್ ತಂಗೋಂಡು ಸಿನಿಮಾ ನೋಡಿದ್ದೋ ಅಂತ ದುಖ ಪಡೋದೊ ನೀವೆ ಏಳಿ ಅದ್ರೆ ಒಂದತು ನಿಜ ಅಣ್ಣವ್ರ ಸಿನಿಮಾ ನೋಡಿದೋ ಅಂತ ನನ್ನ ಮೋದಲನೆ ಸಿನಿಮಾ ಸೋಲಿಲ್ಲದ ಸರದಾರ ನಮ್ಮ ಹಳ್ಳಿ ಟೆಂಟ್ ನಲ್ಲಿ,ಗೂಳೂರು. ,ನನ್ನ,ಎರಡನೆ ಸಿನಿಮಾ ,ಶಬ್ದವೇದಿ ತುಮಕೂರಿನಲ್ಲಿ,ನನ್ನ ಮೂರನೆ ಸಿನಿಮಾ ,ಅಪ್ಪು ,ಅಣ್ಣವ್ರ ಸಿನಿಮಾ ನೋಡಿದ ನೇನಪು ಇದ್ದರೆ ಅಂಚಿಕೊಳ್ಳಿ
Super mam ♥️..
Thank you so much for writing all your experiences tht only in this in all forms.. I like all your blog .. your blog is inspiring and motivating all the youth ..
Thank you 🙂
Fantastic madam
Thank you 🙂
Beautiful memories
Thank you 🙂
ನಮಸ್ಕಾರ ಮೇಡಂ.ತುಂಬಾ ಚೆನ್ನಾಗಿ ಶುಭಾಶಯವನ್ನು ಕೋರಿದ್ಧೀರೀ. ಧನ್ಯವಾದಗಳು.
ನೀವು ಕೂಡ ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಈ ಸುಸಂದರ್ಭದಲ್ಲಿ ಹಾರೈಸುತ್ತೇನೆ.
Thank you 🙂
Superb experience 👌 Ur so lucky
Thank you 🙂
ನಾನು ಇವತ್ತು ಎರಡು ಗಿಡ ನೆಟ್ಟು ನೀರು ಪೂರೈಕೆ ಮಾಡಿದ್ದೀನಿ. ಒಂದು ಸಿನಿಮಾ ದಿಗ್ಗಜ ಹಾಗೂ ಇನ್ನೂಂದು ಕ್ರಿಕೆಟ್ ದಿಗ್ಗಜ ಸವಿ ನೆನಪು! ಇಬ್ಬರೂ ದಂತಕಥೆ! ಮನೆಯಲ್ಲಿ ಇರಿ ಸುರಕ್ಷಿತವಾಗಿರಿ 🤗💐💐💐🤗❤️🙌🙏
Good job 🙂
ಕನ್ನಡ ಸಿನಿರಸಿಕರ ಕಣ್ಮಣಿ, ಚಂದನವದ ಧ್ರುವತಾರೆ, ಆಡು ಮುಟ್ಟುದ ಸೊಪ್ಪಿಲ್ಲ ಮತ್ತು ರಾಜ ನಟನೆಯ ಪಾತ್ರ ಯಾರೂ ಮಾಡಲೂ ಸಾಧ್ಯವಿಲ್ಲ! ಕನ್ನಡದ ಉಸಿರು, ಸದಾ ಎಲ್ಲರ ಮನದಲ್ಲಿ ಅಜರಾಮರ! ಚಿತ್ರ ಲೊಕದ ದಂತಕಥೆ! ಎಷ್ಟು ವರ್ಣಸಿದರೂ ಪದಗಳೆ ಸೊತು ಹೊದವು ಸಕಲಕಲಾವಲ್ಲಭನೀಗೆ! ಅವರಿಗೆ ಅವರೆ ಸಾಟಿ! ಅಭಿಮಾನಿಗಳನ್ನು ದೆವರು ಅಂದ ಧೀಮಂತ ನಾಯಕ! ಕೊಟೀ ಕೊಟೀ ನಮನಗಳು💐💐💐💐😎🤗
🙂 🙂
👌🏽… ಟೀಚರ್ ಅಲ್ಲೇ ಇದ್ರು ಅಲ್ವಾ…?
🙏🙏🙏
🙂