ಕ್ವಾರಂಟೈನ್ ಟೈಮಲ್ಲಿ ಸುಮ್ನೆ ಎಫ್ಎಂ ಕೇಳ್ತಿದ್ದಾಗ, ಒಂದ್ ಸಾಂಗ್ ಬರ್ತಾ ಇತ್ತು. ಅದ್ನ ಕೇಳ್ತಿದ್ದ ಹಾಗೆ ನಂಗೆ ನನ್ನ ಅಸಿಸ್ಟೆಂಟ್ದು ಒಂದು ಹಳೇ ಘಟನೆ ನೆನಪಾಯ್ತು. ( ಯಾವ್ದು ಅಂತ ನಿಮಗೆ ಗೊತ್ತಾಗುತ್ತೆ ಇರಿ 😉). ಇದೊಂಥರ ಫನ್ನಿ ಮ್ಯಾಟರ್. ಈ ಥರ ತಮಾಷೆ ವಿಷ್ಯ ತುಂಬಾ ಇವೆ. ನೆನಪ್ ಬಂದಿದ್ದೆಲ್ಲ ನಿಮ್ ಹತ್ರ ಶೇರ್ ಮಾಡ್ಕೊಳ್ತ ಇರ್ತೀನಿ ಆಯ್ತಾ? ನಿಮಗೆ ಗೊತ್ತಿರೋ ಹಾಗೆ ನಮಗೆ ಸ್ಟಾಫ್ ಇರ್ತಾರೆ. ಶೂಟಿಂಗ್ನಲ್ಲಿ ಏನಿಲ್ಲ ಅಂದ್ರೂ 12-15 ಗಂಟೆ ಕಾಲ ನಮ್ಮ ಜೊತೇನೆ ಇರ್ತಾರೆ, ಡೇ ಆ್ಯಂಡ್ ನೈಟ್ ಶೂಟಿಂಗ್ ಇದ್ದಾಗ 24 ಗಂಟೆ ಜೊತೆಗಿದ್ದಿದ್ದೂ ಇದೆ. ಅವರೆಲ್ಲ ನಮ್ಮ ಸೆಕೆಂಡ್ ಫ್ಯಾಮಿಲಿ ಇದ್ದ ಹಾಗೆ. ಇರ್ಲಿ, ಅದ್ರ ಬಗ್ಗೆ ಇನ್ನೊಂದಿನ ಮಾತಾಡೋಣ.
ಸ್ವಲ್ಪ ಮೊದ್ಲು ಹೇಳಿದ್ನಲ್ವ, ಅಸಿಸ್ಟೆಂಟ್ ಬಗ್ಗೆ ಇದು ಅಂತ.. ಅದೇನಂದ್ರೆ, ಒಂದಿನ ಬೆಳ್ ಬೆಳಗ್ಗೆ ನಾನು ಅವನಿಗೆ ಕಾಲ್ ಮಾಡಿದ್ದೆ. ಅವನು ಆಗ್ಲೇ ನಮ್ ಮನೆ ಕಡೆ ಹೊರಟಿದ್ದ. ‘ಬರ್ತಾ ಚಿತ್ತಾರ ತಗೊಂಡ್ ಬಾ’ ಅಂತ ಹೇಳ್ದೆ. ‘ಒಂದಾ ಎರಡಾ?’ ಅಂತ ಕೇಳ್ದ. ‘ಎರಡ್ಯಾಕೆ, ಒಂದ್ ಸಾಕು..’ ಅಂತ ಹೇಳಿ ಕಾಲ್ ಕಟ್ ಮಾಡಿ ಶೂಟಿಂಗ್ಗೆ ರೆಡಿ ಆಗ್ತಿದ್ದೆ.
ನಾನು ರೆಡಿ ಆಗಿ ಬರುವಷ್ಟರಲ್ಲಿ ಅವನು ನಮ್ ಮನೆಗೆ ತಲುಪಿದ್ದ, ಬಂದು ಕೈಗೆ ಒಂದು ಪ್ಯಾಕೆಟ್ ಕೊಟ್ಟ. ಅದ್ನ ನೋಡಿ, ಇವ್ನು ಏನ್ ತಂದಿರ್ಬೋದು ಅಂತ ನಂಗೆ ಆಶ್ಚರ್ಯ ಆಯ್ತು. ಬಿಡಿಸ್ತಾ.. ಏನಿದು ಅಂತ ಕೇಳ್ದೆ. ಅವನು ಮಾತಾಡಿಲ್ಲ, ಕಾರ್ನಲ್ಲಿ ಇಡಬೇಕಾದ ವಸ್ತುಗಳನ್ನು ಇಡೋದ್ರಲ್ಲಿ ಬ್ಯುಸಿ ಆಗಿದ್ದ. ಸರಿ ಅಂತ ಇನ್ನೂ ಬಿಡಿಸ್ದೆ, ಪೇಪರ್ ಒಳಗೆ ಬಾಳೆಎಲೆ ಕಾಣಿಸ್ತು. ಅದ್ನೂ ತೆರೆದ್ರೆ.. ಹಹಹ.. ಚಿತ್ರಾನ್ನ!
ಅಷ್ಟನ್ನು ನೋಡ್ತಿದ್ದ ಹಾಗೆ ಬೆಳಗ್ಗೆ ಕಾಲ್ ಮಾಡಿದಾಗ ಅವನು ಕೇಳಿದ್ದು ನೆನಪಾಯ್ತು. ‘ಮೇಡಮ್, ಅದ್ನ ಎಲ್ಲಿಂದ ತರ್ಬೇಕು?’ ಅಂತ ಕೇಳಿದ್ದ. ‘ಬೆಳ್ ಬೆಳಗ್ಗೆ ರೋಡ್ಸೈಡ್ ಶಾಪ್ಸ್ನಲ್ಲಿ ಸಿಗುತ್ತೆ, ಅಲ್ಲಿಂದ್ಲೇ ತಾ’ ಅಂದಿದ್ದೆ. ಈ ಪುಣ್ಯಾತ್ಮ ನನಗೆ ಬೆಳ್ಬೆಳಗ್ಗೆ ಮನೇಲಿ ತಿನ್ನೋಕೆ ಚಿತ್ರಾನ್ನ ತಗೊಂಡು ಬಂದಿದ್ದ.. ಹಹಹ.
ಆಮೇಲೆ ಗೊತ್ತಾಯ್ತು.. ಅವನು ಅದುವರ್ಗೂ ಪೇಪರ್, ಮ್ಯಾಗಜಿನ್ ಓದಿಲ್ಲ ಅಂತ. ಅದ್ಕೆ ಅವನು ಚಿತ್ತಾರ ಅಂದ್ರೆ ಚಿತ್ರಾನ್ನ ತಂದಿದ್ದ. ಈಗ್ಲೂ ಎಲ್ಲಾದ್ರೂ ಚಿತ್ತಾರ ಮ್ಯಾಗಜಿನ್ ಅಥವಾ ಚಿತ್ರಾನ್ನ ಕಂಡ್ರೆ ಅವನು ನೆನಪಾಗ್ತಾನೆ.. ಹಹಹ!! ಈಗ ಗೊತ್ತಾಯ್ತಾ.. ಎಫ್ಎಮ್ನಲ್ಲಿ ಯಾವ ಹಾಡು ಬಂದಿದ್ದು ಅಂತ? ರಿಪ್ಲೈ ಮಾಡಿ.. ನಿಮ್ ಗೆಸ್ ಕರೆಕ್ಟಾ ನೋಡೋಣ..😜
-ಹರಿಪ್ರಿಯಾ
Chitranna song banditto athava chittara muudo veleli song banditto ma’am
You narrated beautifully
Thank you 🙂
ಚಿತ್ರಾನ್ನ ಚಿತ್ರಾನ್ನ song yellaru already gues madidre, adre e article inda inmeleinda aa magazine sales will increase
Song already yellaru guess madidare, adre e article inda aa magazine innu famous aguthe 🙂
haha..! c… c…
Upendra sir Bhuddivantha movie Song Chithrana…Chithrana… Is that right plz put status mam I’m big fan😍 you don’t reply me..so plz reply live you 😍🌷❤
Chitranna chitranna song
Upendra awar haadu chitrnanna chitranna
ಅಲ್ಲೆ ಇದ್ದೀದು ಟ್ವಿಸ್ಟ್ ಮೇಡಂ….! ಚಿತ್ರಾನ್ನ ಬಾಳೆಎಲೆ ಜೊತೆ ಇತ್ತಲ್ಲಾ ಪೇಪರ್ ! ಅದೇ ಚಿತ್ತಾರ ಮ್ಯಾಗಜಿನ್…
Chitranna chitranna
ಚಿತ್ತಾರ ಮೂಡೋ ವೇಳೆಲಿ
ನಾನು ಚಿತ್ರಾನ ಚೆನ್ನಾಗಿ ಮಾಡ್ತಿನಿ ನೀವು ಉಗ್ರಂ ಸಿನಿಮಾದಲ್ಲಿ ರಸಂ ಮಾಡ್ತಿರಲ್ಲ ಹಾಗೆ
ನಾನು ಚಿತ್ರಾನ ಚೆನ್ನಾಗಿ ಮಾಡ್ತಿನಿ
ಚಿತ್ತಾರ ಮೂಡೋ ವೇಳೆ
Chitranna chitranna song alva mam uppi sir dhu
Story olledhitthu. But story kelovaga swalpa nidde barthitthu……😂😂😂
Ha ha ha nice
Chithranna Chithranna song bandirutte Uprendra sir movie du
Chitrana chitrana
ಬಾಸ್ದು ಚಿತ್ರಾನ್ನ ಚಿತ್ರಾನ್ನ ಸಾಂಗ್ ಕೇಳಿರ್ತೀರಾ.. ಚಿತ್ತಾರದ ನೆನಪು ಬಂದಿದೆ.
ಆದ್ರೆ ಒಂದು ಡೌಟಿದೆ. ಎರಡು ಚಿತ್ರಾನ್ನನ ಯಾಱರು ತಿಂದಿರಬಹುದು..? 😊