ಎಲ್ಲರಿಗೂ ನಮಸ್ಕಾರ..🙏
ಇವತ್ತು ನಿಮ್ ಬೇಬ್ಗೆ ಒಂದು ತಿಂಗಳು… ಎಸ್.. ಯೂ ಆರ್ ರೈಟ್. ನಮ್ಮ Babeknows.com ಗೆ ಒಂದು ತಿಂಗಳು 😀 . ಕೆಲವು ವರ್ಷಗಳಿಂದ ಬರೆಯೋಕೆ ಶುರು ಮಾಡಿದೆ. ಅದೆಲ್ಲಾ ನಿಮ್ಮ ಹತ್ರ ಶೇರ್ ಮಾಡ್ಕೋಬೇಕು ಅಂತ ತುಂಬಾ ದಿನದಿಂದ ಅಂದ್ಕೋತಿದ್ದೆ. ಬರೀ ಪ್ಲ್ಯಾನಿಂಗ್ನಲ್ಲೇ ಟೈಮಾಗೋಯ್ತು. ಮತ್ತೆ ಒಂದರ ಮೇಲೊಂದು ಶೂಟಿಂಗ್, ರಿಲೀಸ್ ಅಂತನೂ ಬ್ಯುಸಿ ಇರ್ತಿದ್ದೆ. ಆದರೆ ಬರೆಯೋದು ಮಾತ್ರ ಐದೂವರೆ ವರ್ಷಗಳ ಹಿಂದೆ ಶುರು ಮಾಡಿದ್ದು ನಿಲ್ಲಿಸಿಲ್ಲ, ಯಾವತ್ತೂ ನಿಲ್ಸೋದೂ ಇಲ್ಲ. (ಯಾಕೆ? ಏನು? ಮಾಹಿತಿಗೆ About ಸೆಕ್ಷನ್ ಓದಿ). ಈ ಕೊರೊನಾ ಲಾಕ್ಡೌನ್, ಹೋಮ್ ಕ್ವಾರಂಟೈನಲ್ಲಿ ಈ ವೈರಸ್ನ ಎಷ್ಟು ಬೈಕೊಂಡ್ರೂ ನೇಚರ್ ರಿಫ್ರೆಷ್ ಆಗೋಕೆ ಟೈಮ್ ಸಿಕ್ತು ಅನ್ನೋದ್ ಒಂದು ಖುಷಿ. ಹಾಗೆ ನನಗೆ ಹೆಚ್ಚು ಬರಿಯೋಕೆ ಬಿಡುವಾಗಿದ್ದು ಇನ್ನೊಂದು ಖುಷಿ. 😊
ಸೋ.. ಫೈನಲಿ, ನಾನು ಬರೆದಿದ್ದೆಲ್ಲ ಈಗ Babeknows.com ಮೂಲಕ ಒಂದು ತಿಂಗಳಿಂದ ನಿಮ್ ಜೊತೆ ಅದೆಷ್ಟೋ ವಿಷಯ ಹಂಚಿಕೊಳ್ತಾ ಇದೀನಿ. ನೀವೆಲ್ಲ ತುಂಬಾ ಇಷ್ಟಪಟ್ಟು, ನಿಮ್ ಅನಿಸಿಕೆಗಳನ್ನು ಕೂಡ ನಂಗೆ ತಿಳಿಸ್ತಿದೀರ, ತುಂಬಾ ಖುಷಿ ಆಗ್ತಿದೆ. ನಿಜ ಹೇಳ್ಬೇಕು ಅಂದ್ರೆ, ನಿಮ್ಮ ಪ್ರತಿಕ್ರಿಯೆ ನೋಡಿ, ಇನ್ನೂ ಇನ್ನೂ ಹೆಚ್ಚಾಗಿ ಬರೀಬೇಕು ಅಂತ ಸ್ಫೂರ್ತಿ ಸಿಕ್ತಿದೆ.. ಧನ್ಯವಾದಗಳು. 🙏🏻
ಈ ನಿಮ್ಮ ಸಪೋರ್ಟ್ ನೋಡ್ದಾಗ ನನ್ನ ಇಂಡಸ್ಟ್ರಿಯ ಮೊದಲ ದಿನಗಳು ನೆನಪಾಗುತ್ತೆ. ನೀವು ಇಷ್ಟಪಟ್ಟು ಆಶೀರ್ವಾದ ಮಾಡಿದ್ದಕ್ಕೆ 12 ವರ್ಷಗಳಿಂದ ಇಷ್ಟು ಸಿನಿಮಾಗಳನ್ನು ಮಾಡೋಕೆ ಆಯ್ತು. ಇಷ್ಟು ವಿಧವಿಧವಾದ ಅನುಭವ ಪಡ್ಕೊಳೋಕೆ ಆಯ್ತು. ಹಾಗೆ ನನ್ನ ಎಲ್ಲ ಎಕ್ಸ್ಪೀರಿಯನ್ಸ್ ಶೇರ್ ಮಾಡೋಕೆ ಈ Babeknows.com ವೆಬ್ಸೈಟ್ ಕೂಡ ಆಯ್ತು. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ. 🙏
ನಿಮಗೆ ನನ್ನನ್ನು ಪರಿಚಯ ಮಾಡಿಸಿದ್ದು ಪ್ರೆಸ್-ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ. ಇಂಡಸ್ಟ್ರಿಯ ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೇ ಬಂದ ನನ್ನನ್ನು ಕೇವಲ ಪ್ರತಿಭೆ ಗುರುತಿಸಿ ನಿಮ್ಮೆಲ್ಲರಿಗೆ ಪರಿಚಯಿಸಿದ್ರು. ನನ್ನ ಮೊದಲ ಸಿನಿಮಾದಿಂದ ಹಿಡಿದು ಇಲ್ಲಿವರೆಗೂ ಅವರೆಲ್ಲ ಅದೇ ಪ್ರೋತ್ಸಾಹ ನೀಡ್ತಿದಾರೆ. ನಾನು ಚೆನ್ನಾಗಿ ಆ್ಯಕ್ಟ್ ಮಾಡಿದಾಗ ಒಳ್ಳೇ ಮಾತುಗಳನ್ನು ಬರ್ದಿದಾರೆ. ಇಂಪ್ರೂವ್ ಆಗಬೇಕಾದ ವಿಷಯಗಳ ಬಗ್ಗೆ ಸಲಹೆ ಕೊಟ್ಟಿದಾರೆ. ಒಟ್ನಲ್ಲಿ ಈ ಜರ್ನಿ ಉದ್ದಕ್ಕೂ ನನ್ನ ಬೆನ್ನ ಹಿಂದೇ ಇದ್ದು ಬೆನ್ ತಟ್ಟಿದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು. 🙏
ನನ್ನ ಚೈಲ್ಡ್ಹುಡ್ ಹಾಗೆ ನನ್ನ ಉದ್ಯೋಗಕ್ಕೆ ಸಂಬಂಧಪಟ್ಟಂತೆ ತುಂಬಾ ಜನ ನನ್ನ ಲೈಫ್ನಲ್ಲಿ ಭೇಟಿ ಆಗಿದಾರೆ. ಹಾಗೆ ಅವರೆಲ್ಲರಿಂದಲೂ ಒಂದಲ್ಲ ಒಂದು ರೀತಿಯ ವಿಶೇಷ ಅನುಭವ ಆಗಿದೆ. ಅದು ಒಳ್ಳೇದಿರಬಹುದು, ಕೆಟ್ಟದ್ದೂ ಇರಬಹುದು. ಅದರಿಂದ ಏನಾದರೂ ಹೊಸ ವಿಷಯ ಕಲ್ತಿದೀನಿ. ಅಂಥ ಎಲ್ಲ ವಿಷಯ, ಅನುಭವಗಳೇ ಈ Babeknows.com ಬರಹಗಳಿಗೆ ಸ್ಫೂರ್ತಿ. ತುಂಬಾ ದಿನಗಳಿಂದ ಕನಸಾಗಿದ್ದ ಈ ಬ್ಲಾಗ್ ನನಸಾಗುವಂತೆ ಮಾಡಿದ ನಿಮಗೆಲ್ರಿಗೂ ತುಂಬು ಹೃದಯದ ಧನ್ಯವಾದಗಳು. 🙏
ನನ್ನ ಈ ಬ್ಲಾಗ್ ಶುರು ಮಾಡಲು ಒತ್ತಾಯಿಸಿ ಸಪೋರ್ಟ್ ಮಾಡಿದ ನನ್ನ ವಿಶೇಷ ಸ್ನೇಹಿತನಿಗೂ ಮೆನಿ ಮೆನಿ ಥ್ಯಾಂಕ್ಸ್.
ಒಟ್ನಲ್ಲಿ ನಿಮ್ಮೆಲ್ಲರ ಸಪೋರ್ಟ್, ಅಭಿಮಾನ, ಪ್ರೀತಿ ಪಡೆದ ನಾನೇ ಧನ್ಯ. ನಾನು ಚಿರಋಣಿ. 🙏🏻
-ಇಂತಿ ನಿಮ್ಮ ಪ್ರೀತಿಯ
-ಹರಿಪ್ರಿಯಾ
Can u please repost each Kannada message in English.u know translate is too much effort ☺️
H! ಹರಿಪ್ರಿಯಾ ಮಾಡಮ್ ನಾನು ಹೇಗ್ ಹೇಳೋದು ಗೊತ್ತಿಲ್ಲ ಅಷ್ಟು ಇಷ್ಟ ನೀವು ಅಂದ್ರೆ ….. ಒಳ್ಳೆದಾಗ್ಲಿ ಜಾಸ್ತಿ ಒಳ್ಳೆದಾಗ್ಲಿ ನಿಮ್ಗೆ ಇನ್ನು ಒಳ್ಳೆ ಒಳ್ಳೆ movies ಕೊಡ್ತೀರಿ ….ಈ ತರ ಒಂದು ಒಳ್ಳೆ ಅವಕಾಶ ನಿಮ್ ಅಭಿಮಾನಿಗಳಿಗೆ ನಿಮ್ ಜೊತೆ ಅನಿಸಿಕೆಗಳನ್ನ share ಮಾಡೋದಿಕ್ಕೆ ಖುಷಿ ಅನ್ಸುತ್ತೆ ನಿಮ್ ಈ ಆಲೋಚನೆಗೆ .. ಎಲ್ರುಗೂ response ಮಾಡಿರೋದುನ್ನ ನೋಡಿ ನನಿಗೆ ನಿಮ್ ಮೇಲಿರೋ ಅಭಿಮಾನ ಇನ್ನು ಆಕಾಶದಷ್ಟಾಗಿದೆ… ನಿಮ್ voice ತುಂಬಾ ಇಷ್ಟ ನಂಗೆ ಇನ್ನು ಜಾಸ್ತಿ ಜಾಸ್ತಿ ಈ ತರ ವಿಷ್ಯಾಗಳನ್ನ ಅಂಚಿಕೊಳ್ಳಿ …
ಇಂತಿ ನಿಮ್ಮ ಪುಟ್ಟ ಅಭಿಮಾನಿ
ಪುಷ್ಪ ಪ್ರಶಾಂತ್❤️❤️
Thank you ☺️
ನೀವು Instagram join ಆಗೋಕಿಂತ ಮುಂಚೆಯಿಂದಲೇ ನಿಮ್ನ್ ಎಷ್ಟೋ ಸಾರಿ Instagramಅಲ್ಲಿ ಹುಡುಕಾಡಿದ್ದುಂಟು ನಾನು ..ಇವಾಗ ನೀವು ಬರ್ದಿರೋದು ಕೂಡ ಒದಕ್ಕ ಸಿಗ್ತಿದೆ ಅಂದ್ರೆ ತುಂಬಾ ಖುಷಿ ಆಗತ್ತೆ Ma’am. All the Best ma’am..We admire you
Thank you ☺️
ಈ ಬರವಣಿಗೆ📝 ಹಾಗೆ ನೀಮ್ಮ ಜೀವನವು ಸುಂದರವಾರಲಿ, ಅರಳಿದ ಹೂವಂತೆ, ಹೊಳೆಯುವ ನಕ್ಷತ್ರದಂತೆ, ನೀಮ್ಮ ಮುಖದಲ್ಲಿ ಯಾವಾಗಲೂ ನಗು ತುಂಬಿರಲಿ, ಈ ನೀಮ್ಮ ಬರವಣಿಗೆ ಹಿಗೆ ಮುಂದುವರಿಯಲಿ, ಒಳ್ಳೆಯದಾಗಲಿ.
Thank you 🙂
ಬರವಣಿಗೆ ತುಂಬಾ ಒಳ್ಳೆಯದು…….. ಉಮಾಶ್ರೀ ಯವರ ಏನೋ ಹೇಳಲು ಹೂರಟೆ…..
Wahh…! super sunday you know why? Through your write up, a special, stylish with emotional lecture today, also it is the day of karnataka’s great person too.
According to me,
totally today’s post for us is resembles like a proposal of tapashwini Akkamahadevi to Lord ……………………towards retaining her love & Affection. Even you are looking like ‘AKKAMAHADEVI’ today you know…!
Please don’t stop writing the blog. I’m reading your blog daily! Infact I have pinned your website to my browser wherein I can access your blog directly and read soon as possible. So please share your experiences and don’t stop writing the blog Haripriya mam..
Thats really sweet, definitely , Thank you 🙂
ಪ್ರೀತಿಯ ನಟಿಗೆ ಆದರದ ನಮಸ್ಕಾರಗಳು. ತುಂಬ ಚೆನ್ನಾಗಿದೆ ನಿಮ್ಮ ಲೇಖನ ಶೈಲಿ. ಇದೇ ರೀತಿ ನಿಮ್ಮ ಭಾವನೆಗಳನ್ನು ಅಂಚಿಕೂಂಡರೆ ನಮಗೂ ನಿಮ್ಮ ಜೀವನದ ಅಮೂಲ್ಯ ಸಮಯ ಸವಿದಂತಾಗುವುದು. ನಮಗೆ ನಿಮ್ಮ ನಟನೆಯ ಬಗ್ಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ. ಕನ್ನಡದ ಉದಯೋನ್ಮುಖ ಪ್ರತಿಭೆಗಳಲ್ಲಿ ನಿಮ್ಮ ಕೀರ್ತಿ ಬೆಳಗಲೆಂದು ತುಂಬು ಹೃದಯದ ಆಶಯ.
Thank you:)
ನಿಮ್ಮ ನಟನೆ ಬಹಳ ಇಷ್ಟ ಮೇಡಂ.
ಸದಾ ಸಂತೋಷದಿಂದ ಇರಲಿ ನಿಮ್ಮ ಜೀವನ.
Thank you:)
🙏
ಬ್ಲಾಗ್ ಶುರುಮಾಡಲು ಒತ್ತಾಯಿಸಿದ ಆ ನಿಮ್ಮ “ವಿಶೇಷ ಸ್ನೇಹಿತ “😉 ಯಾರು?
Thanks madam. think big dream big
🙂
👍 ದೇವರು ಒಳ್ಳೆಯದು ಮಾಡಲಿ ಹಾಗೂ ಇನ್ನೂ ಎತ್ತರ ಬೆಳೆಯಿರಿ ಮೇಡಂ
Thank you:)
ಹೀಗೆ ನಿರಂತರವಾಗಿ ಸಾಗಲಿ ನಿಮ್ಮ ಚೆಂದದ ಬರವಣಿಗೆ…
ನಿಮ್ಮ ಬಗ್ಗೆ ಒಂದಷ್ಟು ತಿಳ್ಕೊಂಡು ಒಂದಿಷ್ಟು ಹತ್ತಿರ ಆಗಿದೀವಿ ಅನ್ನಿಸುತ್ತದೆ….
ಶುಭವಾಗಲಿ..
–ನಿಮ್ಮ ಅಭಿಮಾನಿ ಆನಂದ ಮೂರ್ತಿ.
Thank you:)
ನೀವು ಹೋಗೊ ಸ್ಪೀಡ್ ನೋಡುದ್ರೆ ಬರೆಯೋದ್ರಲಿ ಕವಿ ರತ್ನ ಕಳಿದಾಸ ನನ್ನು ಮಿರಿಸುತ್ತೀರ ನಿಮ್ಮ ಆ ಜಿರಳೆ ಕಥೆ ಹಾಗೂ ಡ್ರೈವರ್ ಕಥೆ ನಿಮ್ಮ ಪ್ರೆಂಡ್ ಮೆಸೆಜ್ ಕಥೆ ಅದ್ರಲೂ ನಿಮ್ಮ ಮದುವೆ ಕಥೆ ಕೊಡೋ ತಗೊಳೋ ಕಥೆ ಯಲ್ಲ ಸೂಪರ್ ಅಪ್ಪನ ಕಥೆ ಸೂಪರ್ ಬುಕ್ಕು ಯಾವಾಗ ರಿಲೀಸ್ ಮಾಡ್ತೀರ ಹಾಗೆ ನಿಮ್ಮನ್ನು ಪ್ರೋತ್ಸಾಯಿಸಿದ ಮಿಡಿಯಾ ಗೂ ನಮಸ್ಕಾರ ನಿಮ್ಮ ಪಾದ ಜಿರಕ್ಸ್ ಮಾಡಿಕೋಡಿ ನಿಮ್ಮ ಪ್ರೇಮಿಗಳಿಗೆ ಪೂಜೆ ಮಾಡ್ತಾರೆ ಪ್ರಪಂಚದ ಎಂಟನೆ ಅದ್ಬುತ ನಮಸ್ಕಾರ
😀 😀
ಗಾಳಿಯಾಗಿದ್ದರೆ ನಾನು ನಿನಗೆ ಕಾಣದೆ ನಿನ್ನ ನಾನು ಸ್ಪರ್ಶಿಸಬಹುದಿತ್ತು,
ಮೋಡವಾಗಿದ್ದರೆ ನಾನು, ಸೂರ್ಯನ ಅರ್ಭಟದಿಂದ ನಿಮ್ಮನ್ನು ತಂಪಾಗಿಸ ಬಹುದಿತ್ತು,
ಮಿಂಚಾಗಿದ್ದರೆ ನಾನು, ಗುಡುಗಿನ ಅರ್ಭಟದ ನಡುವೆ ಮಿಂಚ ಬಹುದಿತ್ತು.. ಅಟ್ ಲೀಸ್ಟ್ ಮೆಡಿಮೆಕ್ಸ್ ಸೋಪ್ ಆಗಿದ್ರೆ ನಿಮ್ಮ ಜೊತೆ ಇರಬಹುದಿತ್ತು…ನಿನ್ನ ಪ್ರೇಮಿಯಾಗಿ ಕಲ್ಪನೆಯಲ್ಲಿ ನಿನ್ನ ಜೊತೆ ಬಾಳ್ವೇ ಮಾಡುತ್ತಿದ್ದೇನೆ…!!!
ಇಂತಿ ನಿನ್ನ ಪ್ರೀತಿಯ ಮಗಧೀರ
ನ💘ನ್……!!!
HA HA 😀
Our well wishes and support will always be there for you hariprriya….
Thank you:)
Share with us…
ಹರಿಪ್ರಿಯಾ ಅವರೇ ನಾನು ನಿಮ್ಮನ್ನು 2012 8ವರ್ಷದ ಹಿಂದೆ ಬಸವೇಶ್ವರ ನಗರ್ ಸೂಪರ್ ಶಾಸ್ತ್ರಿ ಶೂಟಿಂಗ್ ನಲ್ಲಿ ನೋಡಿದ್ದೇ ಆಗ ತುಂಬಾ ಸ್ಲಿಮ್ ಆಗಿದ್ದು ನಾನು ಆಗಲೇ ಅಂದು ಕೊಂಡಿದ್ದೆ ನೀವು ಮುಂದೆ ಟಾಪ್ ಹೀರೋಯಿನ್ ಆಗುತ್ತಿರೆಂದು ಬೆಸ್ಟ್ ಆಫ್ ಲಕ್
Thank you:)