ಇದಾಗಿದ್ದು ನನ್ನ ಕರಿಯರ್ನ ಆರಂಭದ ದಿನಗಳಲ್ಲಿ, ಎರಡನೇ ಸಿನಿಮಾ ಅನ್ಸುತ್ತೆ. ಒಂದು ಸ್ಟುಡಿಯೋದಲ್ಲಿ ಶೂಟಿಂಗ್ ನಡೀತಿತ್ತು. ‘ಬೇರೆ ಯಾವ ಸಿನಿಮಾ ಶೂಟಿಂಗ್ ನಡಿತಿದೆ?’ ಅಂತ ಕೇಳ್ದಾಗ, ಅಲ್ಲಿದ್ದೋರೊಬ್ರು ‘ಆ ಕಡೆ ರವಿಚಂದ್ರನ್ ಅವರ ‘ಮಂಜಿನ ಹನಿ’ ಶೂಟಿಂಗ್ ಆಗ್ತಿದೆ’ ಅಂದ್ರು. ನಂಗೆ ತುಂಬಾ ಖುಷಿ ಆಗ್ಬಿಡ್ತು. ಸರ್ ಜೊತೆ ಮಾತಾಡ್ಬೇಕು ಅಂತ ಆ ಕಡೆ ಹೋದೆ. ಅವ್ರು ಶೂಟಿಂಗ್ನಲ್ಲಿ ಬ್ಯುಸಿ ಇದ್ರು. ಇನ್ನೇನು ಮಾತಾಡ್ಸ್ ಬೇಕು ಅನ್ನೋವಷ್ಟರಲ್ಲಿ ಈ ಕಡೆ ಶಾಟ್ ರೆಡಿ ಅಂತ ಕರೆದ್ರು. ಅದೇ ಫಸ್ಟ್ ನಾನು ರವಿ ಸರ್ನ ನೋಡಿದ್ದು.
ಅದಾದಮೇಲೆ ನಾನು ಅವ್ರನ್ನ ಫಸ್ಟ್ ಟೈಮ್ ಮಾತಾಡಿದ್ದೆಲ್ಲ ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ. ನಿಮ್ಗೆಲ್ಲ ಗೊತ್ತಿರುತ್ತೆ, ಆ ಉತ್ಸವಕ್ಕೆ ರವಿ ಸರ್ ಅವ್ರೇ ನಿರ್ದೇಶಕರು. ಅವ್ರು ಒಂದು ಕ್ಯಾಪ್ ಹಾಕೊಂಡು, ಸ್ಟಿಕ್ ಹಿಡ್ಕೊಂಡ್ ಡೈರೆಕ್ಟ್ ಮಾಡ್ತಿದ್ರು. ಅವ್ರ ಲೀಡರ್ಶಿಪ್ನಲ್ಲಿ ಒಂಥರ ಮ್ಯಾಜಿಕ್ ಇತ್ತು. ನಾನು ಐದು ಹಾಡುಗಳಿಗೆ ಪರ್ಫಾರ್ಮ್ ಮಾಡಿದ್ದೆ.
ಆಮೇಲೆ ತುಂಬ ಸಲ ಇಂಡಸ್ಟ್ರಿ ಇವೆಂಟ್ಸಲ್ಲಿ ಸರ್ನ ಮೀಟ್ ಮಾಡಿದ್ದೆ. ಒಂದಿನ ರವಿ ಸರ್ ಕಾಲ್ ಮಾಡಿದ್ರು. ‘ನನ್ನ ಸಿನಿಮಾದಲ್ಲಿ ಹೀರೋಯಿನ್ ಆಗಿ ಮಾಡ್ತ್ಯಾ?’ ಕೇಳಿದ್ರು. ‘ವಾವ್.. ಡೆಫಿನೈಟ್ಲಿ ಸರ್.. ಯಾವ್ ಸಿನಿಮಾ?’ ಅಂತ ಕೇಳ್ದೆ. ‘ಮಂಜಿನ ಹನಿ’. ಸ್ಕ್ರಿಪ್ಟ್ ಚೇಂಜ್ ಮಾಡಿ ರಿ-ಶೂಟ್ ಮಾಡ್ತಿದಿನಿ’ ಅಂದ್ರು. ನಂಗೆ ಸಖತ್ ಖುಷಿ ಆಗಿ ಒಪ್ಕೊಂಡೆ. ಕೆಲವು ವರ್ಷಗಳ ಹಿಂದೆ ನಾನ್ ರವಿ ಸರ್ನ ಫಸ್ಟ್ ಟೈಮ್ ನೋಡಿದ್ದು ಅದೇ ‘ಮಂಜಿನ ಹನಿ’ ಶೂಟಿಂಗ್ನಲ್ಲಿ, ಆಮೇಲ್ ಅದೇ ‘ಮಂಜಿನ ಹನಿ’ಗೆ ನಾನೇ ಹೀರೋಯಿನ್.. ವಾವ್ ಅನಿಸ್ತು. ಇದೇ ಸಿನಿಮಾದಲ್ಲಿ ನಾನು ಫಸ್ಟ್ ಲೆನ್ಸ್ ಹಾಕಿದ್ದು, ಹೇರ್ ಕಲರ್ ಮಾಡಿದ್ದು. ಸರ್ ಜೊತೆ ವರ್ಕ್ ಮಾಡ್ತ ತುಂಬಾ ಕಲಿತೆ.

ಅವ್ರ ಮನೇಲೇ ಹಾಕಿದ್ದ ಸೆಟ್ನಲ್ಲಿ ಶೂಟಿಂಗ್ ಶುರು ಆಯ್ತು. ರವಿ ಸರ್ ವೈಫ್ ರುಚಿ ರುಚಿಯಾದ ಊಟ ಕೊಟ್ಟು ತುಂಬಾ ಚೆನ್ನಾಗ್ ನೋಡ್ಕೊಂಡ್ರು. ನಂತ್ರ ಅದೇ ಸಿನಿಮಾ ಶೂಟಿಂಗ್ಗೆ ಮಂಗಳೂರಿಗೆ ಹೋಗಿದ್ವಿ. ಅಲ್ಲಿ ಒಮ್ಮೆ ಲಂಚ್ಗೆ ಟೈಗರ್ ಪ್ರಾನ್ಸ್ ತರಿಸಿದ್ರು, ತಿನ್ನೋಕ್ ಹೇಳಿದ್ರು. ‘ಅಯ್ಯೋ ನಾನ್ ಲೈಫಲ್ಲೇ ತಿಂದಿಲ್ಲ ಸರ್, ಬೇಡ’ ಎಂದೆ. ‘ಲೈಫಲ್ಲೇ ಅಂದ್ರೆ, ಎಷ್ಟೇ ವಯಸ್ ನಿಂಗೆ? ಅಂದ್ರು. ’22’ ಅಂದೆ. ‘ಇನ್ನೂ ಲೈಫೇ ಶುರುವಾಗಿಲ್ಲ, ತಿನ್ನು..’ ಅಂದ್ರು. ಹಹಹ…
ಆಮೇಲೊಂದಿನ ಸಮುದ್ರ ಮಧ್ಯೆ ಜೆಟ್ಸ್ಕಿನಲ್ಲಿ ಬರೋ ಸೀನ್ ಶೂಟ್ ಮಾಡ್ತಿದ್ವಿ. ಆದ್ರೆ ಸಮುದ್ರ ಮಧ್ಯದಲ್ಲೇ ಜೆಟ್ಸ್ಕಿ ಆಫ್ ಆಯ್ತು, ನಂಗೆ ಸಿಕ್ಕಾಪಟ್ಟೆ ಭಯ ಆಗಿತ್ತು. ಸರ್ಗೆ ಭಯ ಆಯ್ತಾ ಇಲ್ವೊ ಗೊತ್ತಿಲ್ಲ. ಆದ್ರೆ ಅವ್ರು ನಂಗೆ ಧೈರ್ಯ ಹೇಳಿದ್ರು. ನಂತ್ರ ಅಲೆಗಳೇ ಸಮುದ್ರದಲ್ಲಿ ಕಾಣಿಸೋ ಬಂಡೆ ಹತ್ರಕ್ಕೆ ತಳ್ ಬಿಟ್ವು. ಆಮೇಲೆ ಟೀಮ್ನೋರು ಬಂದು ಕರ್ಕೊಂಡ್ ಹೋದ್ರು.
ಹೀಗೆ ಇವೆಲ್ಲ ನೆನಪಿಸಿಕೊಳ್ತ ರವಿ ಸರ್ ಬರ್ತ್ ಡೇಗೆ ವಿಷ್ ಮಾಡೋಕೆ ಕಾಲ್ ಮಾಡಿದ್ದೆ. ‘ಹ್ಯಾಪಿ ಬರ್ತ್ ಡೇ ರವಿ ಸರ್’ ಅಂತ ವಿಷ್ ಮಾಡಿ, ‘ನಿಮಗೆ ತುಂಬಾ ಖುಷಿ ಕೊಡೋದು ಏನು?’ ಅಂತ ಕೇಳ್ದೆ. ‘ನಾವ್ ಖುಷಿಯಿಂದ ಮಾಡಿದ್ ಸಿನಿಮಾ ಜನಕ್ಕೂ ಖುಷಿ ಕೊಡುತ್ತಲ್ವಾ.. ಅದೇ’ ಅಂದ್ರು.
‘ಹೌದು.. ನಾನು ಮೊದ್ಲು ನನಗೆ ಖುಷಿ ಕೊಡೋ ಹಾಗೆ ಸಿನಿಮಾ ಮಾಡ್ತಿದ್ದೆ. ಎಲ್ಲ ನನ್ ದೃಷ್ಟಿಯಿಂದ ನೋಡ್ತಿದ್ದೆ. ಆದ್ರೆ ‘ಏಕಾಂಗಿ’ ನನ್ ದೃಷ್ಟಿಕೋನ ಬದಲಿಸ್ತು. ನಾನು ಜನರಿಗೆ ಸಿನಿಮಾ ಮಾಡ್ತಿರೋದ್ರಿಂದ ಅವ್ರ ದೃಷ್ಟಿಯಲ್ಲೇ ನೋಡ್ಬೇಕು ಅಂತ ಅನಿಸ್ತು. ‘ಏಕಾಂಗಿ’ಗೆ ನಾನ್ ಅಂದ್ಕೊಂಡ ಮಟ್ಟಿಗೆ ರೆಸ್ಪಾನ್ಸ್ ಸಿಗದಿದ್ದಾಗ, ಎಲ್ಲೆಲ್ಲಿ, ಏನೇನ್ ತಪ್ಪಾಗಿದೆ ಅಂತ ಎಲ್ಲ ನೋಡ್ಕೊಂಡೆ. ನಾನು ಬಯಸೋದ್ಕಿಂತ ಜನ ಬಯಸೋದ್ನ ಕೊಡಬೇಕು ಅಂದ್ಕೊಂಡು ಅದ್ಕೆ ಪ್ರಿಫರೆನ್ಸ್ ಕೊಟ್ಟೆ. ಹಾಗೆ ಬಂದಿದ್ ಸಿನಿಮಾನೇ ‘ಮಲ್ಲ” ಅಂದ್ರು. ಅದು ಸೂಪರ್ ಹಿಟ್ ಆಗಿದ್ದು ನಮ್ಗೆಲ್ಲ ಗೊತ್ತೇ ಇದೆ.
ಮಜಾ ಗೊತ್ತಾ? ‘ನಿನ್ನತ್ರ ಮಾತಾಡ್ತ ನಾಲ್ಕು ಸೊಳ್ಳೆ ಹೊಡ್ದೆ’ ಅಂದ್ರು. ‘ನಿಜ ಸರ್.. ಈ ನಡುವೆ ಸೊಳ್ಳೆ ಕಾಟ ಹೆಚ್ಚಾಗಿದೆ, ಯಾವ ಸ್ಪ್ರೇ, ಕಾಯಿಲ್ ಹಾಕಿದ್ರೂ ನೋ ಯೂಸ್’ ಅಂದೆ. ‘ಈ ಕರೊನಾ ಅದ್ಕಾದ್ರೂ ಬರ್ಬಾರ್ದಿತ್ತಾ?’ ಅಂದ್ರು. ಆಮೇಲೆ, ‘ಅಯ್ಯೋ, ಅವುಗಳಿಗೆ ಬಂದ್ರೆ ಇನ್ನೂ ಡೇಂಜರ್, ಬೇಡ ಬೇಡ’ ಅಂದ್ರು. ಹಹಹ.. ಅಮ್ಮ ನ್ಯಾಚುರಲ್ ರೆಮಿಡಿ ಕಂಡ್ ಹಿಡ್ದಿದಾರೆ. ಏನ್ ಗೊತ್ತಾ.. ಈ ಸೊಳ್ಳೆಗಳನ್ನು ಸಾಯ್ಸೋಕೆ ಪಲಾವ್ ಎಲೆ ಒಂದಷ್ಟು ಒಟ್ ಮಾಡಿ ಬೆಂಕಿ ಹಚ್ತಾರೆ. ಆ ಹೊಗೆಗೆ ಸೊಳ್ಳೆಗಳು ಮಾಯ ಆಗ್ತವೆ. ರವಿ ಸರ್ಗೂ ಹೇಳ್ದೆ, ನೀವೂ ಟ್ರೈ ಮಾಡಿ.
ನಿಮ್ಮೆಲ್ರ ಥರನೆ ನಂಗೂ ರವೀ ಸರ್ ಅವ್ರ ಸ್ಟ್ರೇಟ್ ಫಾರ್ವರ್ಡ್ನೆಸ್ ಇಷ್ಟ. ಆದ್ರೆ ಸ್ವಲ್ಪ ಕಷ್ಟ.. ಯಾಕ್ ಗೊತ್ತಾ? ಯಾವತ್ತಾದ್ರೂ ಆಗಷ್ಟೇ ವೇಕೇಷನ್ ಮುಗ್ಸಿ ಬಂದಾಗ. ಎಲ್ಲಾದ್ರೂ ಸಿಕ್ಕುದ್ರೆ, ಯಾರಿದ್ದಾರೆ ಇಲ್ಲ ಅಂತ ನೋಡ್ದೆ ಕರೆದು, ‘ಏನಮ್ಮ, ದಪ್ಪ ಆಗಿದಿಯಾ?’ ಅಂತಾರೆ. ಆಗ ಮಾತ್ರ ‘ಯಾಕಾದ್ರೂ ಇವ್ರು ಇಷ್ಟು ನೇರ ಮಾತಾಡ್ತಾರೋ’ ಅನ್ಸುತ್ತೆ, ಹಹಹ.
ಮತ್ತೆ ಬರ್ತ್ ಡೇ ವಿಷ್ಯಕ್ ಬಂದು, ‘ನಿಮ್ ಯಾವ ಬರ್ತ್ ಡೇ ಸ್ಪೆಷಲ್ ಸರ್?’ ಅಂತ ಕೇಳ್ದೆ. ‘ಹಾಗೇನಿಲ್ಲ.. ನನ್ ಸಿನಿಮಾ ಇದ್ದಾಗ, ಅದು ಗೆದ್ದಾಗ ಬರ್ತ್ ಡೇ ಸ್ಪೆಷಲ್ ಅನಿಸುತ್ತೆ. ಅದು ಬಿಟ್ರೆ ನಾನು ಜನರಲಿ ಬರ್ತ್ ಡೇ ಆಚರಿಸಲ್ಲ. ಆಚರಿಸಿದ್ರೂ ಅದು ಅಭಿಮಾನಿಗಳಿಗೋಸ್ಕರ ಮಾತ್ರ. ಕೆಲವು ವರ್ಷ ನಾನು ಅಂಬಿ ಇಬ್ರೂ ಒಟ್ಟಿಗೆ ಕೇಕ್ ಕಟ್ ಮಾಡಿ, ಬರ್ತ್ ಡೇ ಆಚರಿಸಿಕೊಳ್ತಿದ್ವಿ. ಅಂಬಿ ಬರ್ತ್ ಡೇ ಮೇ 29, ನಂದು 30. ಆದ್ರೆ ಲಾಸ್ಟ್ ಇಯರ್ ನನ್ ಮಗಳು ಗೀತಾಂಜಲಿ ಮದ್ವೆ ಮೇ 29 ಆಯ್ತು. ಅದ್ಕೆ ಈಗ ಅವಳ ಮ್ಯಾರೇಜ್ ಆ್ಯನಿವರ್ಸರಿ ಜೊತೆಗೇ ನನ್ ಬರ್ತ್ ಡೇ ಆಚರಿಸಿಕೊಳ್ತಿದೀವಿ’ ಅಂದ್ರು. ಆಚರಣೆಯ ಖುಷಿ ಅವ್ರ ಮಾತಲ್ಲಿ ಗೊತ್ತಾಗ್ತಿತ್ತು. ಬರ್ತ್ ಡೇ ದಿನ ಜಾಸ್ತಿ ಡಿಸ್ಟರ್ಬ್ ಮಾಡೋದ್ ಬೇಡ ಅಂತ, ‘ಯಾವಾಗ್ಲೂ ಹೀಗೆ ಖುಷಿಯಾಗಿರಿ ರವಿ ಸರ್..’ ಅಂತ ವಿಷ್ ಮಾಡಿ ಬೈ ಹೇಳ್ದೆ.
ರವೀ ಸರ್.. ಈಗ ನಿಮ್ ವಯಸ್ಸು ಎಷ್ಟೇ ಇರ್ಲಿ, ಸಿನಿಮಾ ಪ್ರೇಮಿಗಳ ಲೋಕದಲ್ಲಿ ನೀವೀಗ್ಲೂ ‘ರಣಧೀರ’, ಎಂದೆಂದಿಗೂ ‘ಅಂಜದ ಗಂಡು’. ಹ್ಯಾಪಿ ಬರ್ತ್ ಡೇ ಟು ಯೂ ‘ಒನ್ ಆ್ಯಂಡ್ ಓನ್ಲಿ’ ರವಿ ಸರ್.. ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ ಗೀತಾಂಜಲಿ..
-ಹರಿಪ್ರಿಯಾ
Ivella romanchana huttiso haccha hasirina nenupugalu, just like golden days.. Punaha Barada sandharbhagalu namma nenapnnu hasiragisuttave.. Dhanyavadagalu..
YOUR OBSENCE FOR LONG HOURS REALLY
TERRIBLE!
Dakshina Bhaarateeya.karnataka kanasugaara RAVI SIR GE JANMA DINADA SHUBHAASHAYAGALU
ಸೊಳ್ಳೆ ಮಾತುಕತೆ ತುಂಬಾನೇ ತಮಾಷೆಯಾಗಿತ್ತು.
ಸೊಗಸಾದ ಬರವಣಿಗೆ
Nam boss always super
Happy birthday boss
Happy birthday Crazy ⭐ Kanasugara.. and Dude.. superb explanation .. 😍😍😍😍
Super, Happy birthday Crazy star.
The briefing of an incident shows you can also write a script, try it once. All the best.
ಹುಟ್ಟು ಹಬ್ಬದ ಶುಭಾಶಯಗಳು ರವಿ ಸರ್… 👌 Written