…
..
.
..
…
“ಇದೇನಿದು? ಇವತ್ತು ಹರಿಪ್ರಿಯಾ ಬರೆಯೋ ಬದಲು ಬರೀ ಚುಕ್ಕಿ ಇಡ್ತಿದಾರೆ?” ಅಂತ ಅಂದ್ಕೊಂಡ್ರಾ?. ಇವತ್ತು ಚುಕ್ಕಿ ಇಟ್ಟಿರೋದಕ್ಕೂ ಒಂದು ಕಾರಣ ಇದೆ, ಯಾಕಂದ್ರೆ ಇವತ್ತಿನ ವಿಷಯಾನ ಚುಕ್ಕಿಯಿಂದಲೇ ಶುರು ಮಾಡ್ಬೇಕು. ಗೊತ್ತಾಯ್ತಾ.. ವಿಷ್ಯ ಏನಂತ? ಇಲ್ವಾ? ಪರವಾಗಿಲ್ಲ ನಾನೇ ಹೇಳ್ತೀನಿ.
ನಾನು ಇವತ್ತು ರಂಗೋಲಿ ಬಗ್ಗೆ ಮಾತಾಡ್ಬೇಕು ಅಂದ್ಕೊಂಡಿದೀನಿ. ನನ್ನ ಹಾಬೀಸ್ ಬಗ್ಗೆ ನಿಮ್ಗೆಲ್ಲ ಗೊತ್ತು, ಕೆಲವು ಹವ್ಯಾಸಗಳ ಬಗ್ಗೆ ಇಲ್ಲೇ ‘ಬೇಬ್ ನೋಸ್’ನಲ್ಲೇ ಬರೆದಿದ್ದೆ. ನಾನು ಚಿಕ್ಕೋಳಿದ್ದಾಗ್ಲೇ ಬಹಳಷ್ಟು ವಿಷ್ಯಗಳ ಬಗ್ಗೆ ಇಂಟ್ರೆಸ್ಟ್ ಬೆಳೆಸ್ಕೊಂಡಿದ್ದೆ. ತುಂಬಾ ಇಂಟ್ರೆಸ್ಟ್ ಇರೋದ್ನ ಕ್ಲಾಸ್ಗೆ ಸೇರಿ ಕಲ್ತಿದ್ದೆ. ಆದ್ರೆ ರಂಗೋಲಿಗೆ ನಾನು ಯಾವ್ದೇ ಕ್ಲಾಸ್ಗೂ ಹೋಗಿಲ್ಲ. ಮತ್ತೆ ಇದ್ಕೆ ಗುರು ಯಾರು ಅಂತ ಕೇಳಿದ್ರೆ, ನನ್ನ ಅಮ್ಮನೇ.
ಎಲ್ಲ ಕಾಂಪಿಟಿಷನ್ನಲ್ಲೂ ಭಾಗಿ ಆಗ್ತಿದ್ದೆ. ರಂಗೋಲಿ ಸ್ಪರ್ಧೆ ಯಾಕ್ ಬಿಡೋದು, ಪಾಪ ಬೇಜಾರ್ ಮಾಡ್ಕೊಳುತ್ತೆ ಅಂತ ಅದ್ನೂ ಕಲಿತೆ. ಕಾಂಪಿಟಿಷನ್ಗೆ ಅಂತ ಅಮ್ಮ ಕಲಿಸಿಕೊಟ್ಟ ಎರಡು ರಂಗೋಲಿ ಈಗ್ಲೂ ನೆನಪಿದೆ. ಅದ್ರಲ್ಲಿ ಒಂದಕ್ಕೆ ಹನ್ನೊಂದು ಚುಕ್ಕಿ, ಇನ್ನೊಂದಕ್ಕೆ ಹನ್ನೆರಡು ಚುಕ್ಕಿ. ಹನ್ನೊಂದು ಚುಕ್ಕಿ ಇಟ್ಟು ರಂಗೋಲಿಯಲ್ಲೇ ರೋಸ್ ಬಿಡಿಸೋದು, ಹನ್ನೆರಡು ಚುಕ್ಕಿ ಇಟ್ಟು ಇನ್ನೊಂದು ಹೂ ಬಿಡಿಸೋದು ಅಮ್ಮ ಹೇಳ್ಕೊಟ್ಟಿದ್ರು. ಸ್ಕೂಲ್ನಲ್ಲಿ ಅದ್ಕೆ ಪ್ರೈಸ್ ಕೂಡ ಬರ್ತಿತ್ತು.

ಒಂದಿನ ನನ್ ಫ್ರೆಂಡ್ ಹಳ್ಳಿಯಲ್ಲಿ ಜಾತ್ರೆ ಇತ್ತು. ಅಲ್ಲಿಗೆ ನಾನೂ ಹೋಗಿದ್ದೆ. ಜಾತ್ರೆಗೆ ಎಲ್ರೂ ಮನೆ ಮುಂದೆ ತಯಾರಿ ಮಾಡ್ತಿದ್ರು. ಆಗ ನಾನೇ ಅವ್ರ ಮನೆಮುಂದೆ ರಂಗೋಲಿ ಬಿಡಿಸಿದ್ದೆ. ‘ಹರಿಪ್ರಿಯಾ ರಂಗೋಲಿ ಬಿಡಿಸ್ತಾರಾ?!’ ಅಂತ ಅಲ್ಲಿದ್ದ ಕೆಲವ್ರು ಮೊದ್ಲು ಸರ್ಪ್ರೈಸ್ ಆಗಿದ್ರು. ಬಿಡಿಸಿದ್ ಮೇಲೆ ನೋಡಿ ಸಖತ್ ಖುಷಿ ಆಗಿದ್ರು. ನಾನು ಚಿಕ್ಕಬಳ್ಳಾಪುರದಲ್ಲೇ ಬೆಳೆದಿದ್ರಿಂದ ನಂಗೆ ಹಳ್ಳಿ ಜೀವನ, ಸಿಟಿ ಲೈಫ್ ಎರಡೂ ಗೊತ್ತು. ನಾನು ಯಾವುದಕ್ಕೆ ಬೇಕಾದ್ರೂ ಒಗ್ತೀನಿ. ಇನ್ನೊಂದ್ ವಿಷ್ಯ, ನಂಗೆ ಹೂ ಕಟ್ಟೋಕೂ ಬರುತ್ತೆ ಗೊತ್ತಾ 😀
ಎಲ್ಲ ಫೋಟೋಸ್ ಒಂದೇ ಅಂದ್ಕೋಬೇಡಿ, ಬೇರೆಬೇರೆ ದಿನ ಅಥವಾ ಬೇರೆಬೇರೆ ವರ್ಷದಲ್ಲಿ ತೆಗೆದಿದ್ದು. ಸೇಮ್ ಚುಕ್ಕಿ, ಸೇಮ್ ರಂಗೋಲಿ ಅಲ್ವಾ, ಅದ್ಕೆ ಹಾಗನ್ಸುತ್ತೆ.

ಈಗ ಇಲ್ಲಿ ಬೆಂಗಳೂರಲ್ಲಿ ಮನೇಲಿ ಯಾವುದೇ ಫಂಕ್ಷನ್, ಹಬ್ಬ ಏನೇ ಇದ್ರೂ ರಂಗೋಲಿ ನಾನೇ ಹಾಕ್ತೀನಿ ಅಂತ ಗಲಾಟೆ ಮಾಡ್ತೀನಿ. ಮಜಾ ಗೊತ್ತಾ? ನಾನು ಈಗ್ಲೂ ಬಿಡ್ಸೋದ್ ಅದೆರಡೇ ರಂಗೋಲಿ.. ಅದೇ ಹನ್ನೊಂದ್ ಚುಕ್ಕಿ, ಹನ್ನೆರಡು ಚುಕ್ಕಿದ್ದು. ನಾನು ರಂಗೋಲಿ ಬಿಡಿಸ್ದಾಗೆಲ್ಲ ಅಮ್ಮ ಏನಂತಾರೆ ಗೊತ್ತಾ?
“ನೀನ್ ಬಿಡಿಸೋ ರಂಗೋಲಿ ನೋಡಿ ಆ ದೇವ್ರಿಗೇ ಬೋರ್ ಆಗ್ಬಿಟ್ಟಿರುತ್ತೇನೋ..?” ಅಂತ, ಹಹಹ. ಅದ್ಕೆ ಈ ಸಲ ವರಮಹಾಲಕ್ಷ್ಮೀ ವ್ರತಕ್ಕೆ ಹೊಸ ರಂಗೋಲಿ ಕಲ್ತು ಹಾಕೋಣಾಂತ ಅಂದ್ಕೊಂಡಿದೀನಿ. ಏನಂತೀರಾ? 😉
-ಹರಿಪ್ರಿಯಾ
ನೀವ್ ಬಿಡಿ ಮೇಡಂ ಸೂಪರ್
I love you 💕
Rangoli is good hobby. Normally we find more in villages. It is good to know that you know and lived village life. I am from north Karnataka where we have more villages then cities. I have lived both city and village life.
Thanks for posting.
Cute 😊😍 . Have a wonderful day.
ನಿಮ್ಮಲ್ಲಿ ಬಹುಮುಖ ಪ್ರತಿಭೆ ಇದೆ ಹರಿಪ್ರಿಯಾ. ಹಾಗೆ ಎಲ್ಲದನ್ನೂ ಕಲಿಯಬೇಕು ಎನ್ನುವ ಹುರುಪು ಇದೆ. ಇದನ್ನೇ ಜೀವನೋತ್ಸಾಹ ಎನ್ನುವುದು. ಇಂಥವರಿಗೆ life ಬೋರ್ ಅನಿಸುವುದೇ ಇಲ್ಲ. ಒಂಟಿತನವನ್ನೂ ಖುಷಿಯಾಗಿ ಕಳೆಯಬಲ್ಲರು.
Ok
Tumba chanda haakidira mam eradu rangoligalu ,hanondara rangoli yavaglu maride irokagalla😊 nimma Ella barahagalannu odiddene nijavagalu tumba adbuthavada baravanige 👏👏
This is Indian Culture
Woww new rangoli akbedi. Adee 11chukki 12chukki de akki. Bcz Old is gold hahaha….