‘ಏನ್ ಬುಲ್ಬುಲ್ ಮಾತಾಡಕಿಲ್ವಾ?’ ನಮ್ ಫ್ರೆಂಡ್ ಸರ್ಕಲ್ನಲ್ಲಿ ಹುಡುಗೀರ್ ಮಾತ್ರವಲ್ಲ, ಹುಡುಗ್ರಿಗೂ ಕೆಲವೊಮ್ಮೆ ಈ ಡೈಲಾಗ್ ಹೇಳ್ಕೊಂಡ್ ರೇಗ್ಸೋದೆಲ್ಲ ಮಾಡ್ತಿರ್ತೀವಿ. ನಾನಿವತ್ತು ಈ ಡೈಲಾಗ್ ಮೂಲಕನೇ ಮಾತು ಶುರು ಮಾಡಿದಿನಿ ಅಂದ್ರೆ ಯಾರ್ ಬಗ್ಗೆ ಮಾತಾಡ್ತಿದಿನಿ ಅಂತ ನೀವೆಲ್ಲ ಪಕ್ಕಾ ಗೆಸ್ ಮಾಡಿರ್ತೀರಿ. ಯೆಸ್.. ಹಂಡ್ರೆಡ್ ಪರ್ಸೆಂಟ್ ರೈಟ್.. ನಾನು ಮಾತಾಡೋಕ್ ಹೊರಟಿರೋದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಸರ್ ಬಗ್ಗೆ.
ನಾನು ಅವರನ್ನು ಫಸ್ಟ್ ಮೀಟ್ ಮಾಡಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿಯ ಅಮೃತ ಮಹೋತ್ಸವ ಸಮಾರಂಭದಲ್ಲಿ. ಅದ್ಕೆ ರಿಹರ್ಸಲ್ ನಡೀತಿದ್ ಸಂದರ್ಭದಲ್ಲಿ ಒಂದಿನ ನಾನು ಡಲ್ ಆಗಿದ್ದೆ. ಆಗ ಅಂಬಿ ಸರ್ ಯಾಕೆ, ಏನು ಅಂತೆಲ್ಲ ವಿಚಾರಿಸಿದ್ರು.
‘ಒಂದ್ ಟ್ಯಾಬ್ಲಾಯ್ಡ್ ಅವರು ನನ್ ಬಗ್ಗೆ ಸುಮ್ನೆ ಏನೇನೋ ಬರೆದಿದ್ದಾರೆ, ನಿಜಾನೇ ಇಲ್ಲ ಅದ್ರಲ್ಲಿ..’ ಅಂತ ಅಂಬಿ ಸರ್ ಗೆ ಹೇಳ್ಕೊಂಡೆ. ಅದ್ಕೆ ಅವ್ರು ‘ಖುಷಿ ಪಡು, ಅದ್ಕೆ ಡಲ್ ಇರೋದಾ? ನಗ್ ನಗ್ತ ಇರ್ಬೇಕು!’ ಅಂದ್ರು. ಇವರು ಯಾಕ್ ಹೀಗೆ ಹೇಳ್ತಿದಾರೆ ಅಂತ ನಂಗೆ ಸ್ವಲ್ಪ ಹೊತ್ ಅರ್ಥ ಆಗಿರ್ಲಿಲ್ಲ. ಆಮೇಲೆ ಅವ್ರು ಹೇಳಿದ್ರು, ‘ನೋಡು.. ನಿನ್ ಬಗ್ಗೆ ಅವ್ರೇನಾದರೂ ಬರೆದಿದ್ದಾರೆ ಅಂದ್ರೆ ನೀನು ಬೆಳೆದಿದ್ದಿ ಅಂತ ಅರ್ಥ. ನಿನ್ ಬಗ್ಗೆ ಬರೆದ್ರೆ ಜನ ಓದ್ತಾರೆ ಅಂತ ಅರ್ಥ. ಅವ್ರು ನಿನ್ ಬಗ್ಗೆ ಬರೆದ್ರೆ ಅವರ ಸರ್ಕ್ಯುಲೇಷನ್ ಜಾಸ್ತಿ ಆಗುತ್ತೆ, ಅದ್ರಿಂದ ಅವ್ರು ನಾಲ್ಕ್ ದಿನ ಅನ್ನ ತಿಂತಾರೆ ಅಂತ ಅರ್ಥ..’ ಅಂತೆಲ್ಲ ಸಮಾಧಾನ ಹೇಳಿದ್ರು.
ಅವ್ರು ಆ ದಿನ ನಂಗೆ, ಬೇಜಾರ್ ಮಾಡ್ಕೋಬೇಡ, ಎಲ್ಲ ಸರಿಹೋಗುತ್ತೆ ಅಂತ ಎಲ್ಲರ ಹಾಗೆ ಸಮಾಧಾನ ಮಾಡಿದ್ದಿದ್ರೆ ನಂಗೆ ಅಷ್ಟು ಕಂಫರ್ಟ್ ಸಿಗ್ತಿರ್ಲಿಲ್ಲ ಅನ್ಸುತ್ತೆ. ಆದ್ರೆ ಅವ್ರು ಅದ್ನ ಪಾಸಿಟಿವ್ ಆಗಿ ತಗೋ ಅಂತ ಅಂದ್ರಲ್ಲ, ಅದು ನನ್ ಮೈಂಡ್ಸೆಟ್ ಚೇಂಜ್ ಮಾಡ್ತು. ಆವತ್ತಿಂದ, ಯಾರಾದರೂ ನನ್ನ ಬಗ್ಗೆ ರೂಮರ್ಸ್ ಬರೆದ್ರೆ ಅದ್ನ ಹೇಗೆ ತಗೋಬೇಕು ಅನ್ನೋದ್ಕೆ ಅಂಬಿ ಸರ್ ಮಾತು ನಂಗೆ ಲೈಫ್ಟೈಮ್ ಪಾಠ ಆಯ್ತು. ಒಂದ್ ಒಳ್ಳೇ ವಿಷ್ಯ ಏನಂದ್ರೆ, ಆಮೇಲೆ ಯಾವ್ ರೂಮರೂ ಬರ್ಲೇ ಇಲ್ಲ.

ನಂತರ ‘ಅಂಬಿ ಸಂಭ್ರಮ’ ಅಂತ ಅವರ ಬಗ್ಗೆನೇ ಒಂದು ಕಾರ್ಯಕ್ರಮ ಆಯ್ತು. ಅವರ ಸಿನಿಮಾದ್ದೇ ಸಾಂಗ್ಸ್ಗೆ ಪರ್ಫಾರ್ಮ್ ಮಾಡಿದ್ದೆ, ಒಂದ್ರಲ್ಲಿ ನಾನು ಪುನೀತ್ ಸರ್ ಜೋಡಿಯಾಗಿ ಹಾಗೂ ಇನ್ನೊಂದ್ರಲ್ಲಿ ಅರ್ಜುನ್ ಸರ್ಜಾ ಸರ್ ಜೋಡಿ ಆಗಿ ಡಾನ್ಸ್ ಮಾಡಿದ್ದೆ. ಹೀಗೆ ತುಂಬ ಇವೆಂಟ್ಸ್ ಅಲ್ಲಿ ಭೇಟಿ ಮಾಡಿರೋ ಖುಷಿ ಇದೆ, ಆದ್ರೆ ಅವ್ರನ್ನ ಕೊನೇ ಸಲ ನೋಡಿದ್ದು ಒಂದು ಸಿನಿಮಾ ಪ್ರಿಮೀಯರ್ ಶೋನಲ್ಲಿ. ಅಲ್ಲಿ ನನ್ನನ್ನ ಮಾತಾಡ್ಸಿದ್ ಅವ್ರು, ‘ಏನಮ್ಮಾ.. ದಿನ ನಿನ್ ಮುಖ ನೋಡೋದೇ ಆಯ್ತು..’ ಅಂದ್ರು. ‘ಏನ್ ಇವ್ರು, ಬೈತಿದಾರಾ ಹೊಗಳ್ತಿದಾರಾ?’ ಅಂತ ಕನ್ಫ್ಯೂಸ್ ಆಯ್ತು. (ಹಹಹ.. ಅಂಬಿ ಸರ್ ಬೈದ್ರೇನೇ ಪ್ರೀತಿ, ಅದು ಅವ್ರ ಕ್ಲೋಸ್ ಇರೋರ್ಗೆಲ್ಲ ಗೊತ್ತಿರೋದೇ). ‘ಏನ್ ಸರ್..’ ಅಂತ ಹಾಗೇ ಅವ್ರ ಮುಖ ನೋಡ್ತಾ ಇದ್ದೆ. ಆಗ, ‘ಅಲ್ಲಮ್ಮ ಮೇಲಿಂದ ಮೇಲೆ ಸಿನ್ಮಾ ಮಾಡ್ತಿದ್ದಿ, ದಿನಾ ಬೆಳಗ್ಗೆ ಎದ್ದು ಟೀವಿ, ಪೇಪರ್ ನೋಡಿದ್ರೆ ನಿನ್ ಬಗ್ಗೆನೇ ಇರುತ್ತೆ’ ಅಂದ್ರು. ‘ಗುಡ್.., ಒಳ್ಳೇ ಸಿನಿಮಾಗಳು ಮಾಡ್ತಿದಿಯ, ಒಳ್ಳೇದಾಗ್ಲಿ..’ ಅಂತ ವಿಷ್ ಮಾಡಿದ್ರು.

ಅದಾದ್ಮೇಲೆ ಅವ್ರನ್ನ ಮತ್ತೆ ಭೇಟಿ ಮಾಡೋಕಾಗಿಲ್ಲ. ಆದ್ರೂ ನನ್ನಲ್ಲಿ ಧೈರ್ಯ ತುಂಬಿದ್ ಅವ್ರ ಆ ಮಾತುಗಳು ಯಾವತ್ತೂ ನೆನಪಲ್ಲಿರುತ್ತೆ. ಚಿತ್ರರಂಗಕ್ ಸಂಬಂಧಿಸಿದ ವಿಷ್ಯ ಬಂದಾಗೆಲ್ಲ ದೊಡ್ಡಣ್ಣ ಥರ ಇದ್ದ ಅಂಬಿ ಸರ್ನ ಎಲ್ರೂ ನೆನಪಿಸಿಕೊಳ್ತೀವಿ. ನಾನು ಕೂಡ ಅವ್ರನ್ನ ಆಗಾಗ ನೆನಪಿಸ್ಕೋತಾ ಇರ್ತೀನಿ. ಆದ್ರೆ ಈಗ ಅವ್ರನ್ನ ನೆನಪಿಸ್ಕೊಂಡಿದ್ಕೆ ಒಂದ್ ವಿಶೇಷ ಇದೆ. ಅದೇ.. ಮೇ 29 ಅವ್ರ ಹುಟ್ಟಿದ್ ದಿನ. ಹ್ಯಾಪಿ ಬರ್ತ್ ಡೇ ಅಂಬಿ ಸರ್.
-ಹರಿಪ್ರಿಯಾ
Innond vishya enandare nanage haasya pravritti ide nimma hecchu barahagalalliyoo haasya mishranaviruvudanna gamanisuvudarinda neevu haasya chitragalanna nirdhesisalu prayatnisidare chitrarangadalli mattobba mahilaa nirdhesakiya udayavaagi nelenintare mattashtu mandige kelasada daari torida bhaagya nimmadaaguvudaralli eradu maatillavenisuttade. Nimma jote nanna abhipraaya hanchikondenemba khushi horatu nimma blogalli prakatisabekendenilla
I too have a plan of writing blog but waiting for surprisingly good & right time with the inspire of u & ur blog, haha you know why?
Truly my mother is my only best friend for me till today after my father passed away.
During this lockdown period ‘babeknows’ is the secand friend, with whom i am sharing something daily.
Idu Olle vichara siktu, life na yedurisodralli Dodda guna alvadiskobeku.. Aaga yella sulabhda, 👍
en ivru baitiddaara hogaltiddaara? hahahaha ….nagu bantu haage avara
janma dinadandu nimma aatmeeya
vishesha barahakke
namana
Ambi ninendu amara ❤️