ಸುಮ್ನೆ ಇರುವಾಗಲೇ ಬೇಡದ ಯೋಚನೆಗಳೆಲ್ಲ ಬರುತ್ತೆ (Empty mind is devil’s workshop) ಅಂತ ಹೇಳೋದನ್ನು ನೀವೆಲ್ಲ ಕೇಳಿರ್ತೀರಿ, ನಾನಂತೂ ಕೇಳಿದೀನಿ. ಆದರೆ ನಾನು ಆ ಮಾತನ್ನ ಪೂರ್ತಿ ಒಪ್ಪಲ್ಲ. ಯಾಕಂದ್ರೆ ಸುಮ್ನಿರುವಾಗ ಒಳ್ಳೆಯ ಯೋಚನೆಗಳೂ ಬರ್ತವೆ. ಮಜಾ ಅಂದ್ರೆ, ಯಾವತ್ತಿಗೂ ಯೋಚನೆ ಮಾಡದೆ ಇರೋವಂಥ ಕೆಲವೊಂದ್ ವಿಷಯಗಳು ಹೆಚ್ಚಾಗಿ ಗೊತ್ತಾಗೋದ್ ನಾವ್ ಹೀಗೆ ಸುಮ್ನೆ ಇದ್ದಾಗಲೇ.
ನ್ಯೂಟನ್ ಬಗ್ಗೆ ಗೊತ್ತಲ್ವ? ಅವರು ಒಂದಿನ ಹಾಗೆ ಸುಮ್ನೆ ಮರದ ಬುಡದಲ್ಲಿ ಕೂತ್ಕೊಂಡಿದ್ದಾಗ ತಲೆ ಮೇಲೆ ಆ್ಯಪಲ್ ಬಿದ್ದಿದ್ದಂತೆ. ‘ಯಾಕೆ ಇದು ಕೆಳಗೇ ಬಿತ್ತು?’ ಅಂತ ಯೋಚನೆ ಅವರಿಗೆ ಹೊಳೆದಿದ್ದು ಆಗಲೇ ಅಂತೆ. ಹಾಗೆ ಸುಮ್ನೆ ಅದರ ಬಗ್ಗೆ ಜಾಸ್ತಿ ಯೋಚನೆ ಮಾಡಿದ ಅವರು ಮುಂದೆ ಗ್ರಾವಿಟಿ ಬಗ್ಗೆ ತಿಳಿಸಿಕೊಟ್ಟಿದ್ದು ಎಲ್ರಿಗೂ ಗೊತ್ತಿರೋ ವಿಷ್ಯ. ಈ ಲಾಕ್ಡೌನ್ ಟೈಮಲ್ಲಿ ಮನೆ ಬಾಲ್ಕನಿಲಿ ಸುಮ್ನೆ ಕುಳಿತು ಕಾರ್ಪೋರೇಷನ್ ಗಾಡಿಗೆ ಕಸ ಬೀಳ್ತಿದ್ದನ್ನು ನೋಡ್ತಿದ್ದ ನನಗೂ ಅಂಥದ್ದೇ ಯೋಚನೆ ಬಂತು. (ಹ್ಹಹ್ಹ.. ನಾನೇನೂ ನ್ಯೂಟನ್ಗೆ ನನ್ನನ್ನು ಕಂಪೇರ್ ಮಾಡ್ಕೊಳ್ತಿಲ್ಲ).
ಮೊನ್ನೆಮೊನ್ನೆವರೆಗೂ ನಮ್ಮನೇಲಿ ಕೆಲಸದವರೇ ಕಸ ತಗೊಂಡು ಹೋಗಿ ಕಾರ್ಪೋರೇಷನ್ ಗಾಡಿಗೆ ಹಾಕ್ತಿದ್ರು. ಆದರೆ ಲಾಕ್ಡೌನ್ ಆದಾಗಿಂದ ಅಮ್ಮ ಅಥವಾ ಅಣ್ಣ ಕಸ ತಗೊಂಡೋಗಿ ಹಾಕ್ತಿದಾರೆ. ಆಗ ಅದ್ನ ನೋಡ್ತಿದ್ ನನಗೆ, ‘ಯಾಕೆ ನಮ್ಮನೇಲಿ ಇಷ್ಟು ಕಸ?’ ಅನಿಸ್ತು. ಅದನ್ನೇ ಯೋಚನೆ ಮಾಡ್ತಿದ್ದೆ.. ಹೇಗೂ ಮನೇಲಿ ಸುಮ್ನೆ ಕೂತಿದಿನಲ. ತಮಾಷೆ ಅಂದ್ರೆ, ಈ ಕ್ವಾರಂಟೈನ್ ನನ್ನನ್ನು ಕಸದ ಬಗ್ಗೆ ಕೂಡ ಯೋಚನೆ ಮಾಡೋ ಥರ ಮಾಡಿದೆ, ಹಹಹ.
ನಮ್ಮನೇಲಿ ಎರಡು ನಾಯಿ ಮರಿಗಳಿವೆ. ಅವೂ ಒಂಥರ ಎರಡು ಮಕ್ಕಳಿದ್ದಂಗೆ. ಅವುಗಳಿಗೆ ತರೋ ಫುಡ್-ಸ್ನ್ಯಾಕ್ಸ್ಗಳ ರಾಪರ್ಸ್ ಏನೂ ಕಮ್ಮಿ ಅಲ್ಲ. ಇನ್ನೂ ಯೋಚನೆ ಮಾಡ್ತಿದ್ದಾಗ, ನಾವು ಏನೇನು ಎಲ್ಲಿಂದ ತರ್ತೀವಿ ಅನ್ನೋದೂ ಮುಖ್ಯ ಆಗುತ್ತೆ ಅಂತ ಅರ್ಥ ಆಯ್ತು. ಅದರಲ್ಲೂ ದಿನನಿತ್ಯ ಯೂಸ್ ಮಾಡೋ ದಿನಸಿ ಪದಾರ್ಥಗಳನ್ನು ಕ್ವಾಲಿಟಿಯದ್ದೇ ತರೋದ್ರಿಂದ ಅವುಗಳಿಗೆ ಜಾಸ್ತಿ ರಾಪರ್ಸ್ ಮತ್ತು ಪ್ಯಾಕಿಂಗ್ ಇರುತ್ತೆ. ಅದಕ್ಕೆ ನಮ್ಮನೇಲಿ ಕಸ ಜಾಸ್ತಿ ಅಂತ ಗೊತ್ತಾಯ್ತು. ನೋಡಿ.. ಎಲ್ರಿಗೂ ಲಾಕ್ಡೌನ್ನಿಂದ ಮನೇನೇ ಕಸ್ಟಡಿ ಥರ ಆಗಿದ್ರೆ, ನಾನ್ ನೋಡಿ ಮನೇಲೇ ಕಸದ್ ಸ್ಟಡಿ ಮಾಡ್ತಿದೀನಿ..ಹಹ್ಹಹ.
ಒಂದಂತೂ ಸತ್ಯ. ಕಸ ಎಷ್ಟೇ ಇರ್ಲಿ, ನಮ್ ಕಾರ್ಪೋರೇಷನ್ ಸ್ಟಾಫ್ ಅದ್ನ ತಗೊಂಡೋಗಿ ವಿಲೇವಾರಿ ಮಾಡ್ತಾರಲ್ಲ, ಹ್ಯಾಟ್ಸಾಫ್ ಟು ದೆಮ್. ಇದೇ ಲಾಕ್ಡೌನ್ ಟೈಮಲ್ಲೇ ಒಂದು ಫಾರ್ವರ್ಡ್ ಮೆಸೇಜ್ ಬಂದಿತ್ತು.
ಹುಡುಗ – ಅಮ್ಮ ಕಸದವರು ಬಂದ್ರು.
ಅಮ್ಮ – ಕಸದವರು ನಾವು ಮಗು, ಅವರು ಸ್ವಚ್ಛಗೊಳಿಸೋರು ಅಂತಾಳೆ.
ನಿಜ.. ನಾವು ಸೇಫ್ಟಿಗಾಗಿ ಮನೇಲಿರುವಾಗ ರಿಸ್ಕ್ ತಗೊಂಡು ಹೊರಗೆ ಬಂದು ಕಸ ತಗೊಂಡ್ ಹೋಗ್ತಾರಲ್ಲ, ದೇವರಾಣೆ ಅವರು ಗ್ರೇಟ್..🙏

ಹರಿಪ್ರಿಯಾ
ನಿಮ್ ಬರೆವಣಿಗೆ ಹಲವರಲ್ಲಿ ಅರಿವು ಮೂಡಿಸುವುದರಲ್ಲಿ ಮಾದರಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಹೀಗೆ ಅನುಭದ ಜೊತೆ ಒಳ್ಳೊಳ್ಳೆ ಕನ್ಟೆನ್ಟ್ ಬರಿತಿರಿ ಮೇಡಮ್..
Kanditha 🙂 Thank you 🙂
HP📝👌🏽
🙂
Love you mam ❤️ ❤️❤️😍🙏🥰🙏🙏🙏🙏🙏
🙂
They are great, you’re so sweet
ಶ್ರೀಮಂತರು ಹೊಟ್ಟೆ ತುಂಬಿ ಕಸ ಸಂಗ್ರಹ ಮಾಡುತ್ತಾರೆ, ಅವರು ಹೊಟ್ಟೆ ತುಂಬಿಸಿಕೊಳ್ಳಲು ಕಸ ಸಂಗ್ರಹ ಮಾಡ್ತಾರೆ, ಒಟ್ಟಾರೆ ಹೇಳಬೇಕು ಅಂದರೆ ಎಲ್ಲರೂ ಮಾಡುವುದು ಹೊಟ್ಟೆಗಾಗಿಯೇ.
❤️❤️❤️
Really Ur writing story super niv yk film story brdu director agbud so nc
kaayakave kailaasa endu nambiddirabahudu.
Great thought great thinking
Super.. Mam…iam ur big fan.. Lov u mam…. Niv bardirodanna full odidini.. Tumba satya adagide.. Nice mam…. Love u forever.. My fevrt heroin….😘😘😍😍😍😍😍
Good Thought
ಸತ್ಯ ಇವಾಗಲಾದರೂ ಗೊತ್ತಾಯ್ತ ಒಂಟಿ ಯಾಗಿದ್ದರೆ ಇಗೆಲ್ಲ ಅನಿಸುತ್ತೆ ಬೇಗ ನನ್ನಂತ ಹೊಳ್ಳೆ ಹುಡುಗನನ್ನ ನೋಡಿ ಮದುವೆ ಆಗಿ ಇನ್ನೊಂದು ದೋಡ್ಡ ಸತ್ಯ ಗೊತ್ತಾಗುತೆ
ತುಂಬಾ ಚೆನ್ನಾಗಿ ಯೋಚ್ನೆ ಮಾಡಿದಿರಾ ಅವ್ರು ತುಂಬಾ ಗ್ರೇಟ್..👏👏👏👏👏
ತಾಯಿ ಹ್ರುದಯ ಅದೆ ತಾಯಿ ಮನೆಯೆ ಮೊದಲ ಪಾಠ ಶಾಲೆ.
Yes They are all great…. To keep city cleaning
A Love letter to Hariprriya
ಓ ಒಲವೆ ನಿನಗಾಗಿ ಬರೆಯುವೆ ಒಲವಿನ ಪ್ರೇಮ “ಪತ್ರ”
ನೀ ಕಣ್ಣಿಗೆ ಕಾಣುವ ಎಟುಕದ “ನಕ್ಷತ್ರ”
ನಾ ಆಗಲೂ ಬಂದ್ರೇ ನಿನ್ನ “ಮಿತ್ರ”
ನೀ ಹೇಳುವೆ Distance maintain ಮಾಡು “ನನ್ನತ್ರ”
ಮಿತಿ ಮೀರಿ ಬಂದ್ರೇ ನಾ “ನಿನ್ನತ್ರ”
ನೀ ಕಂಪ್ಲೆಂಟ್ ಮಾಡುವೆ ನಿನ ಡ್ಯಾಡಿ “ಹತ್ರ”
ಭೂಮಿಯಲ್ಲಿ ಪ್ರೀತಿಯೆಂಬುದು “ವಿಚಿತ್ರ”
ಅರ್ಥವಾಗುತ್ತಿಲ್ಲ ನನ್ನಿ “ಪಾತ್ರ”
ಇದನ್ನು ನಾ ಹೇಳುವುದು ನಿನಗೆ “ಮಾತ್ರ”
ನಾನೆಂದರೆ ಯಾರೆಂದು ಗೊತ್ತ “ಚಿತ್ರ”
ಪ್ರೀತಿಯಿಂದ ,ಪ್ರೀತಿಗಾಗಿ ಹುಟ್ಟಿರುವ “ಕರ್ನಾಟಕ ಸುಪುತ್ರ”
ಲವ್ ಯೂ ಹರಿಪ್ರಿಯಾ
ಇಂತಿ ನಿನ್ನ ಮಗಧೀರ
ನ💘ನ್…..!!!!
Yes..they are the great one….who work in the lock down time….they sacrifice their time and they work for the society………..
ನಿಜವಾಗಿಯೂ ಪೌರ ಕಾರ್ಮಿಕರಿಗೆ ಎಷ್ಟು ದನ್ಯವಾದಗಳನ್ನು ಅರ್ಪಿಸಿದರೂ ಸಾಲದು, ಇವರಿಗೆ ನಮ್ಮೆಲ್ಲರ ಹ್ರುದಯ ಪೂರ್ವಕ ನಮನಗಳು…. ನಿಮ್ಮ ಆಲೋಚನೆ ಅರ್ಥಪೂರ್ಣವಾದದ್ದು..
Great lines mam… you are osm mam..❤️😉👌
You are the best actor mam😇
Love you always…❤️❤️❤️
100% True in nice explanation….