ಜೈ ಆಂಜನೇಯ..🙏 ನಂಗೆ ಯಾವಾಗ ಆಂಜನೇಯ ಸ್ವಾಮಿ ಫೋಟೋ ಕಾಣಿಸಿದ್ರೂ ಅಥವಾ ನಂಬರ್ 6 ಕಾಣಿಸಿದ್ರೂ ಧ್ರುವ ಸರ್ಜಾ ನೆನಪಾಗ್ತಾರೆ. ಆ ನಂಬರ್ಗೋಸ್ಕರ ನಾವು ಕಿತ್ತಾಡಿದ್ದೂ ಇದೆ. ಯಾಕಂದ್ರೆ 6 ನಂಬರ್ ನನಗೂ ತುಂಬಾ ಇಷ್ಟ. ಗೊತ್ತಲ್ವಾ.. ನಾವು “ಭರ್ಜರಿ” ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ಆ್ಯಕ್ಟ್ ಮಾಡಿದ್ವಿ..😍

ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಕೆಲವು ಗುಡ್ ಮಾರ್ನಿಂಗ್ ಮೆಸೇಜಸ್ ಬಂದಿರುತ್ತೆ ಅಲ್ವಾ, ಅದರಲ್ಲಿ ಯಾರೋ ಆಂಜನೇಯನ ಒಂದು ಸೂಪರ್ ಫೋಟೋ ಕಳಿಸಿದ್ರು, ಸೋ ನಾನು ಯಾವಾಗ್ಲೂ ಮಾಡೋ ಹಾಗೆ ತಕ್ಷಣ ಧ್ರುವಂಗೆ ಫಾರ್ವರ್ಡ್ ಮಾಡ್ದೆ. ಥ್ಯಾಂಕ್ಸ್ರೀ ಅಂತ ರಿಪ್ಲೈ ಬಂತು. ‘ರೀ’ ಯಾಕಂದ್ರು ಅಂತ ತಲೆಕೆಡಿಸ್ಕೋಬೇಡಿ. ಅದರ ಹಿಂದೆ ಒಂದು ಚಿಕ್ಕ ಫನ್ನಿ ಕಥೆ ಇದೆ..🤦🏻♀️

ನಾವು ಸ್ಲೊವೇನಿಯಾದಲ್ಲಿ “ಅಜ್ಜಿ ಹೇಳಿದ” ಸಾಂಗ್ ಶೂಟ್ ಮಾಡ್ತಿದ್ವಿ. ಶಾಟ್ ಗ್ಯಾಪ್ನಲ್ಲಿ ಫೋನ್ ನೋಡ್ಕೊಂಡು ಡೀಪ್ ಆಗಿ ಏನೋ ಯೋಚನೆ ಮಾಡ್ತಿದ್ದೆ. ಆಗ ನಮ್ಮ ಫೋಟೋಗ್ರಾಫರ್ ಬಂದು ಮೇಡಮ್ ಅಲ್ಲಿ ಫೋಟೋಸ್ ತೆಗೀಬಹುದು, ಪ್ಲೀಸ್ ಬನ್ನಿ.. ನಾನ್ ಹೋಗಿರ್ತೀನಿ, ಧ್ರುವ ಸರ್ ಬಂದ್ಮೇಲೆ ಅವರನ್ನೂ ಕರ್ಕೊಂಡು ಬನ್ನಿ ಅಂತ ಹೇಳಿ ಹೋದ್ರು. ನಾನು ಧ್ರುವಗೆ, ನನ್ ಫೋನ್ ನೋಡ್ಕೊಂಡೇ, “ಫೋಟೋಶೂಟ್ಗೆ ಹೋಗ್ಬೇಕಂತೆ ಬನ್ನಿ” ಅನ್ನೋ ಬದ್ಲು ಬೈ ಮಿಸ್ಟೇಕ್, ‘ಬನ್ರೀ’ ಅಂದ್ಬಿಟ್ಟೆ🤦♂ ಆವತ್ನಿಂದ ನನ್ನ ರೀ ಅಂತ ರೇಗಿಸ್ತಾರೆ, ನಾನೂ ವಾಪಸ್ ರೇಗಿಸ್ತೀನಿ..😂

ಸೋ ಆಗ್ಲೇ ಹೇಳ್ತಿದ್ದೆ ಅಲ್ವಾ, ಮೆಸೇಜ್ ಮಾಡ್ತಿದ್ವಿ ಅಂತ.. ನಮ್ಮ ಮನೆಯ ಎಲ್ಲರ ಕ್ಷೇಮ ಸಮಾಚಾರ ತಿಳ್ಕೋತಿದ್ವಿ, ನಮ್ಮ ಪೆಟ್ಸ್ದು ಕೂಡ..☺ ಮಾತಾಡಿ ತುಂಬಾ ದಿನ ಆಯ್ತು ಅಂತ ಕಾಲ್ ಮಾಡ್ದೆ. ಆಗ ನೋಟಿಸ್ ಮಾಡಿದ್ದು ಡೇಟ್ 15 ಅಂತ.. ಹಹಹ. ತಕ್ಷಣ ಧ್ರುವ ಇವತ್ತು ಡೇಟ್ 15(1+5=6) ಗೊತ್ತಾ ಅಂದೆ, ಫುಲ್ ಖುಷಿ ಆದ್ರು. ನೋಡಿ ನಾವು ಇಷ್ಟು ದಿನದಲ್ಲೂ ಇವತ್ತೇ ಮಾತಾಡೋ ಹಾಗಾಯ್ತು ಅಂತ ನಗ್ತಿದ್ವಿ.
‘ಬ್ಲಾಗ್ ನೋಡ್ತಿದಿನಿ ರೀ, ಚೆನ್ನಾಗಿದೆ..’ ಅಂದ್ರು. ‘ನೀವ್ ಏನ್ ಮಾಡ್ತಿದಿರಾ..’ ಅಂದೆ. ‘ನಾನು ಫುಲ್ ವರ್ಕೌಟ್ ಮಾಡ್ತಿದೀನಿ, ಮೂವೀಸ್ ನೋಡ್ತಿದಿನಿ’ ಅಂದ್ರು. ‘ಮದ್ವೆ ಆದ್ಮೇಲೆ ಫ್ಯಾಮಿಲಿ ಜೊತೆ ಇರೋಕೆ ಟೈಮ್ ಸಿಕ್ತು ಅಲ್ವಾ?’ ಅಂದೆ. ‘ಪ್ರೇರಣ ವರ್ಕ್ ಫ್ರಮ್ ಹೋಮ್ರೀ’ ಅಂದ್ರು. ‘ಓಹ್.. ಹನಿಮೂನ್ಗೂ ಹೋಗಿಲ್ಲ ಅಲ್ವಾ?’ ಅಂದೆ. ‘ಇನ್ನೇನು ಕೆಲ್ಸ, ಮುಗಿಸ್ಬಿಟ್ಟು ಹೋಗ್ಬೇಕು ಅನ್ನೋವಷ್ಟರಲ್ಲಿ ಈ ಲಾಕ್ಡೌನ್ ಶುರುವಾಯ್ತು’ ಅಂದ್ರು.

ಆಗ ಅವರ ಬಾಕ್ಸಿಂಗ್ ವೀಡಿಯೊ ನೋಡಿದ್ ನೆನಪಾಯ್ತು. (ಮುಂಚೆ ಧ್ರುವ ಸೂಪರ್ ಬಾಕ್ಸರ್ ಅಲ್ವಾ), ವೀಡಿಯೊ ನೋಡಿ ವಾವ್ ಅನಿಸ್ತು. ‘ಅಷ್ಟು ಬಾಡಿ ಬಿಲ್ಡ್ ಮಾಡಿದಿರಾ, ಮೂವೀಗಾ? ಇನ್ನೂ ಶೂಟ್ ಮುಗಿದಿಲ್ವಾ?’ ಅಂದೆ. ‘ಓನ್ಲಿ ಸಾಂಗ್ ಪೆಂಡಿಂಗ್’ ಇದೆ ಅಂದ್ರು. ‘ಹಾಗೇ ಸ್ವಲ್ಪ ದಿನ ಮುಂಚೆ ನಮ್ ಸಿನಿಮಾ “ಭರ್ಜರಿ” ಟಿವಿನಲ್ಲಿ ಬರ್ತಿತ್ತು ನೋಡಿದ್ರಾ?’ ಕೇಳ್ದೆ. ‘ಹಾ ನೋಡ್ದೆ’ ಅಂದ್ರು. ಆಗ ನೆನಪಾಯ್ತು ಅವರ ಶಿವರಿಂಗ್ ಸ್ಟೋರಿ..😂

ಒಂದ್ ಸೀಕ್ರೆಟ್ ಹೇಳ್ಲಾ? ನನಗೆ ಹೇಗೆ ಜಿರಳೆ ಅಂದ್ರೆ ಭಯ ಹಾಗೆ..ಧ್ರುವದಿಂಗೆ ಹೈಟ್ಸ್ ಅಂದ್ರೆ ಭಯ.! ಸ್ಲೊವೇನಿಯಾದಲ್ಲಿ ನಮ್ಮ ಹರ್ಷ ಮಾಸ್ಟರ್ ನಮ್ಮನ್ನ ಫೋರ್ಟ್ ಮೇಲೆ ಅಥವಾ ಎಡ್ಜ್ನಲ್ಲೇ ನಿಲ್ಸಿ ಶೂಟ್ ಮಾಡ್ತಿದ್ರು(ಶಾಟ್ ಬ್ಯೂಟಿಗೆ), ನಾನು ಓಕೆ, ಆದರೆ ನಮ್ ಹೀರೋ ನಾಟ್ ಓಕೆ. ನಾನ್ ತುಂಬಾ ನಗ್ತಿದ್ದೆ, ಐ ಫೆಲ್ಟ್ ವೆರಿ ಕ್ಯೂಟ್. ಇದನ್ನೆಲ್ಲ ನೆನಪಿಸ್ಕೊಂಡು ರೇಗಿಸ್ತಿದ್ದೆ. ರೀ ‘ನಾನು ಬಾಡಿ ಬಿಲ್ಡ್ ಮಾಡಿದಿನಿ ಈಗ, ಧೈರ್ಯ ಬಂದಿರ್ಬೋದು’ ಅಂದ್ರು. ‘ಓಹ್ ಹೌದಾ..! ಹಾಗಾದ್ರೆ ಚೆಕ್ ಮಾಡೋಣ್ವಾ, ಹೇಗಿದ್ರೂ ಪ್ರೇರಣ ಅವರು ವೀಕೆಂಡ್ ಫ್ರೀ ಇರ್ತಾರೆ, ನಂದಿ ಹಿಲ್ಸ್ಗೆ ಹೋಗೋಣ್ವಾ?’ ಅಂದೆ. ‘ಬೇಡ ಬೇಡ’ ಅಂದ್ರು. ಹೀಗೆ ನಗ್ತಾ ನಗ್ತಾ ತುಂಬ ಮಾತಾಡ್ತಿದ್ವಿ. ಸರಿ ರೀ ಹಾಗಿದ್ರೆ ಹುಷಾರು’ ವೆರಿ ಸೂನ್ ಸಿಗೋಣ’ ಅಂತ ವಿಷ್ ಮಾಡ್ಕೊಂಡು ಕಾಲ್ ಕಟ್ ಮಾಡಿದ್ವಿ.


ಧ್ರುವ ತುಂಬ ಸಿಂಪಲ್ ಹುಡ್ಗ, ತುಂಬ ದಿನ ಆದ್ಮೇಲೆ ಮಾತಾಡಿ ಖುಷಿ ಆಯಿತು. ಧ್ರುವ ಈಸ್ ಬಂಡಲ್ ಆಫ್ ಟ್ಯಾಲೆಂಟ್ ಆ್ಯಂಡ್ ಎನರ್ಜಿ. ಮತ್ತೆ ಅವರ ಡೈಲಾಗ್ ಮೆಮೊರಿ ಪವರ್ಗೊಂದು ಹ್ಯಾಟ್ಸಾಫ್. ರೀ ನಿಮ್ಮ ಪರ್ಸನಲ್ ಆ್ಯಂಡ್ ಪ್ರೊಫೆಷನಲ್ ಲೈಫ್ಗೆ ನನ್ನ ಬೆಸ್ಟ್ ವಿಷಸ್..☺ ಜೈ ಆಂಜನೇಯ..🙏
-ಹರಿಪ್ರಿಯಾ
Superb Anna 🙏 jai anjaneya
ನಿಮ್ಮ ನೆನಪುಗಳ ಸಂಭಾಷಣೆಯ ಈ ಬರಹ ಓದ್ತಾ ಇದ್ರೆ ಒಂದು ಸುಂದರವಾದ ಸಿನಿಮಾ ಕಣ್ಣಮುಂದೆ ಹಾದು ಹೋದಂತಾಯ್ತು.. 👌👌ನಿಮ್ಮ ಸ್ನೇಹ ಸದಾಕಾಲ ಹೀಗೆ ಇರಲಿ.. ❤❤
ಜೈ ಶ್ರೀರಾಮ್..ಜೈ ಆಂಜನೇಯ.. 🙏🙏
👌👌
ಸೂಪರ್ ಜೈ ಆಂಜನೇಯ
ajji helida song is very melodious & dancing with best lyrics.
I’m a biggg faaann of dhruva Anna.. mam nivibru thumba chennagi acting madidri bharjari li.. Nam dhruva Anna iga dappa agirodu, body build madirodu nangantu istane illa.. Nam Anna yavaglu bharjari movie li iro hage idrene chenda..
Really odi tumba kushi aytu.. obba actor innod actor na estu respect madtare andre nodoke adeno kushi..
Adrallu nam Dhruva sarja 🥰 avra sweetness nodi avr mele eddid respect double aytu ❣❣
Niv antu on screen cutest couple… off screen conversation adakkinta cute ede 🤗😊😘🥰❣
😊😘🤗
Rii aadru sakkath riii
Super d boss Jai anjneya 🙏🚩
🌹💖…jai anjaneya🚩
Boss andre summne na Dhruva anna always lv ಜೈ ಹನುಮಾನ್ 😊👍🏻
I’m a cockroach…..I always wanna be a cockroach
Cute one,👌