ಸ್ವಿಫ್ಟ್ ಡಿಸೈರ್..
ಇದು ನನ್ನ ಜೀವನದಲ್ಲಿ ನಾನು ಮೊದಲ ಸೇವಿಂಗ್ಸ್ ದುಡ್ಡಲ್ಲಿ ತಗೊಂಡ ಫಸ್ಟ್ ಕಾರ್. ಆ ಕಾರ್ನಲ್ಲಿ ಶೂಟಿಂಗ್ಗೆ ಹೋಗೋದಂದ್ರೇನೇ ನನಗೆ ಅದೇನೋ ದೊಡ್ಡ ಖುಷಿ. ಆ ಕಾರ್ ಬಗ್ಗೆ ಅದೆಷ್ಟೋ ನೆನಪುಗಳಿವೆ. (ಒಳ್ಳೇದು, ಕೆಟ್ಟದ್ದು.. ಅವೆಲ್ಲ ಮುಂದೆ ಒಂದೊಂದಾಗಿ ನಿಮ್ಮತ್ರ ಹಂಚಿಕೊಳ್ತೇನೆ). ಕಾರ್ ಮಾತ್ರ ಅಲ್ಲ, ಅದರ ಡ್ರೈವರ್ಸ್ ಬಗ್ಗೇನೂ ಹೇಳ್ಕೊಳೋವಂಥ ವಿಷಯಗಳೂ ಬೇಕಾದಷ್ಟಿವೆ. (ಕಾರ್ ಇದ್ದವರಿಗೆಲ್ಲ ಡ್ರೈವರ್ ಸಮಸ್ಯೆಗಳೆಲ್ಲ ಗೊತ್ತೇ ಇರುತ್ತೆ ಬಿಡಿ..😉). ಅಂಥ ಒಬ್ಬ ಡ್ರೈವರ್ ಬಗ್ಗೆ ಈಗ ಹೇಳ್ತಿದೀನಿ. (ಸದ್ಯ ಅವನ ಹೆಸ್ರು ನೆನಪಾಗ್ತಿಲ್ಲ).
ಇದು ಸುಮಾರು ಹತ್ತು ವರ್ಷಗಳ ಹಿಂದಿನ ವಿಷ್ಯ. ಇದೊಂಥರ ‘ಬೀಸೋ ದೊಣ್ಣೆ ತಪ್ಪಿಸ್ಕೊಂಡ್ರೆ ನೂರು ವರ್ಷ ಆಯಸ್ಸು’ ಅಂತಾರಲ್ಲ, ಅಂಥ ಮ್ಯಾಟ್ರು. ಒಂದಿನ ಶೂಟಿಂಗ್ ಮುಗ್ಸಿ ಕಾರಲ್ಲಿ ಮನೆಗೆ ವಾಪಸ್ ಬಂದವಳೇ ಫ್ರೆಷಪ್ ಆಗಲು ಮನೆಯೊಳಗೆ ಹೋದೆ. ಡ್ರೈವರ್ ಕಾರ್ ಪಾರ್ಕ್ ಮಾಡೋಕ್ ಹೋದ. (ಆಗ ನಾವು ಇದ್ದ ಮನೇಲಿ ಪಾರ್ಕಿಂಗ್ ಗೇಟ್ ಎದ್ರು ಎಲೆಕ್ಟ್ರಿಕ್ ಪೋಲ್ ಮುಂದೆ ಇತ್ತು).
ಫ್ರೆಷಪ್ ಆಗಿ ಬರ್ತಿದ್ ಹಾಗೇ ಡ್ರೈವರ್ ಡೋರ್ ಹತ್ರ ಬಂದು ಕೀ ಕೊಟ್ಟ. ತಗೊಳ್ತಿದ್ದ ಹಾಗೆ, ‘ಮ್ಯಾಮ್.. ಕಾರ್ ಕವರ್ ಬೇಕಿತ್ತು’ ಎಂದ. ‘ಯಾಕೆ..? ದಿನಾ ಏನೂ ಹಾಕಲ್ವಲ್ಲ. ಬೆಳಗ್ಗೆ ಬೇಗ ಬೇರೆ ಶೂಟಿಂಗ್ಗೆ ಹೋಗ್ಬೇಕು, ಕವರ್ ಬೇಡ’ ಎಂದೆ. ‘ಇಲ್ಲ.. ಇವತ್ತಷ್ಟೇ ಕಾರ್ ನೀಟಾಗಿ ವಾಷ್ ಮಾಡಿದ್ದೆ, ಗಲೀಜಾಗುತ್ತೆ ಮ್ಯಾಮ್’ ಎಂದ. ‘ಸರಿ’ ಅಂತ ಹೇಳಿ ಕವರ್ ಕೊಟ್ಟೆ.
ಬೆಳಿಗ್ಗೆ ಶೂಟಿಂಗ್ಗೆ ರೆಡಿ ಆಗಿ ಡ್ರೈವರ್ಗೆ ವೇಟ್ ಮಾಡ್ತಿದ್ದೆ. ದಿನಾ ಡ್ರೈವರ್ ಬರೋ ಟೈಮ್ ಆದ್ರೂ ಬರ್ಲಿಲ್ಲ. ಕಾಲ್ ಮಾಡಿದ್ರೆ ಸ್ವಿಚ್ಡ್ ಆಫ್ ಬಂತು. ಜಾಸ್ತಿ ಕಾಯೋ ಹಾಗೂ ಇಲ್ಲ. ಏನೇ ಆದ್ರೂ ಶೂಟಿಂಗ್ಗೆ ಸಮಯಕ್ಕೆ ಸರಿಯಾಗಿ ಹೋಗ್ಲೇ ಬೇಕು. (ಗೊತ್ತಲ್ಲ.. ಶೂಟಿಂಗ್ನಲ್ಲಿ ಒಂದೊಂದು ನಿಮಿಷ ಕೂಡ ಪ್ರೊಡ್ಯೂಸರ್ಗೆ ದುಬಾರಿನೇ). ಅದ್ಕೆ ಇನ್ನೂ ಕಾದ್ರೆ ಪ್ರಯೋಜನ ಇಲ್ಲ ಅಂತ ಆವತ್ತು ನಾನೇ ಡ್ರೈವ್ ಮಾಡ್ಕೊಂಡ್ ಹೋಗೋಕ್ ಡಿಸೈಡ್ ಮಾಡ್ದೆ. ಕವರ್ ತೆಗ್ದು ಇನ್ನೇನ್ ಹತ್ಬೇಕು ಆವಾಗ ರಸ್ತೆ ಬದೀಲಿ ಲೈಟ್ ಪೀಸಸ್ ಕಾಣಿಸ್ತು. ಏನದು ಅಂತ ಸರಿಯಾಗಿ ನೋಡ್ದಾಗ ನಂಗೇ ಶಾಕ್. ಅದು ನಂದೇ ಕಾರ್ನ ಬ್ಯಾಕ್ ಲೈಟ್ ಪೀಸಸ್ ಆಗಿತ್ತು. ನಂತರ ಎಲೆಕ್ಟ್ರಿಕ್ ಪೋಲ್ ಸೂಕ್ಷ್ಮವಾಗಿ ಗಮನಿಸಿದ್ರೆ, ಅದ್ರ ಮೇಲೂ ಸ್ಕ್ರ್ಯಾಚಸ್ ಇತ್ತು. ಆಗ ಹಿಂದಿನ ದಿನ ಡ್ರೈವರ್ ಆಡಿದ್ ವರ್ತನೆ ಎಲ್ಲ ಫ್ಲ್ಯಾಷ್ಬ್ಯಾಕಲ್ಲಿ ನೆನೆಸ್ಕೊಂಡೆ.
ಆವತ್ತು ಆ ಡ್ರೈವರ್ ತಪ್ಪು ಮಾಡಿದ್ ನಿಜ. ಆದರೆ ಅವನು ಅದನ್ನು ಒಪ್ಕೋಬೇಕಿತ್ತು. ಬೇಕಂತ ಯಾರೂ ತಪ್ಪು ಮಾಡಲ್ಲ. ಹೀಗಾಯ್ತು ಅಂತ ಹೇಳಿದ್ರೆ ನಾನೂ ಅದ್ನ ಅರ್ಥ ಮಾಡ್ಕೊಳ್ತಿದ್ದೆ. ಆಗಿದ್ದ ಡ್ಯಾಮೇಜ್ಗೆ ಇನ್ಶೂರೆನ್ಸ್ ಕ್ಲೇಮ್ ಆಗ್ತಿತ್ತು, ಹಹಹ.. ಅದೇನೂ ಅಂಥ ದೊಡ್ದ ಸಂಗತಿ ಆಗಿರ್ಲಿಲ್ಲ. ಆದ್ರೂ ಅವನು ಅದ್ನ ಯಾಕಷ್ಟು ಮುಚ್ಚಿಟ್ಟ ಅಂತ ನಂಗೆ ಇವತ್ಗೂ ಅರ್ಥ ಆಗಿಲ್ಲ. ತಮಾಷೆ ಅಂದ್ರೆ, ಅವತ್ತೇ ಲಾಸ್ಟ್.. ಅದಾದ ಮೇಲೆ ಆ ಡ್ರೈವರ್ ಬರ್ಲೂ ಇಲ್ಲ, ಎಲ್ಲೂ ಸಿಗ್ಲೂ ಇಲ್ಲ.
– ಹರಿಪ್ರಿಯಾ
Mam nanu kuda katte kavana barithini
Thumba chanagide Mam..nimma kannada kuda sakathagide
Thank you 🙂
U r my favorite actor
U r my favorite actor dear haripriya
Thank you 🙂
ಅವನದು ಇ ತರ ಮನಸ್ಸಿದ್ದರೆ ಎಲ್ಲಿಯೂ ಸರಿಯಾಗಿ ಕೆಲಸ ಮಾಡೋಕೆ ಅಗಲ್ಲ… ತಪ್ಪುಗಳು ಎಲ್ಲಿಯೂ ಆಗತಾವು ಅದನ್ನ ಒಪ್ಕೊಂಡು ಅದಕ್ಕೆ ಕ್ಷೇಮೆ ಕೇಳಿ ಮತ್ತೊಮ್ಮೆ ಆಗದಿರೋ ಹಾಗೆ ಜಾಗೃತೆಯಿಂದ ಇರೋದನ್ನು ಕಲಿಬೇಕು ….
havdu 🙂
ನಮ್ಮ ತಂದೆಯ ಹೊಸಾ ಕಾರ್ ನ ನಾನು ಕೂಡ ಹಿಂಬದಿಯಿಂದ ಕರೆಂಟ್ ಕಂಬಕ್ಕೆ ಗುದ್ದಿಸಿದ್ದೆ ಮೇಡಮ್… ಅದೂ ಕೂಡ ಸಂಜೆ ಹೊತ್ತು… ಗುದ್ದಿದ ರಭಸಕ್ಕೆ ಅಕ್ಕಪಕ್ಕದ ಮನೆಯಲ್ಲಿ ಒಂದು ಕ್ಷಣ ವೋಲ್ಟೇಜ್ ಹೆಚ್ಚುಕಮ್ಮಿ ಆಗಿತ್ತು. ಕಾರ್ ಹಿಂದೆ ಅದರ ಗುರುತು ಈಗಲೂ ಇದೆ…😆Man
ha ha !!
Nivu replay ne madalla kanri
hii
Bere stories na share madi
Still more stories needed
hope you are reading my blogs 🙂
Aa haa ಎಂಥ ಸ್ಟೋರಿ ಇದನ ಒಂದು ಶಾರ್ಟ್ ಫಿಲ್ಮ್ ಮಾಡ್ಬೋದು ,, ಇನ್ನೂ ಬೇರೆ ಕಥೆ ಇದ್ರೆ ಹೇಳಿ
pls read all my blogs 🙂
ನೀವೂ ಯಾವ ಫಿಲಂ ಶೂಟಿಂಗ್ ನಡೀತಾ ಇದೆ ಅಂತ ಹೇಳಲೆ ಇಲ್ಲ ಯಾವಾ ಫಿಲಂ ಶೂಟಿಂಗ್ ಹೋಗ್ಬೇಕಿತು
You are good actar and Beautiful
Thank you 🙂
uppi sir jyothe movie start agbekithu 🙂
OMG mam engu erthare antha evathe gothagidu mam🙄🙄
🙂
‘ಒಂದು ಕಾರಿನ ಸುತ್ತ’ ಚೆನ್ನಾಗಿದೆ..
🙂
Super content mam 👌
Thank you 🙂
Nan jote tumba sala higagide
oh ok !
ಪಾಪ ಭಯ ಬಿದ್ದು ಬಿಟ್ಟಿದ್ದಾನೆ
ಅನುಸುತ್ತೆ
ಕೆಲವೊಂದು ಹಳೆ ನೆನಪುಗಳು ಯಾವಾಗಲೂ ಶಾಶ್ವತ
havdu 🙂
Baya Satya oppikolloke dyrya beku Queen
🙂
Good one!
🙂
Tell me one thing what is life…?
ನೆನಪುಗಳನ್ನ ಮತ್ತೊಬ್ಬರೊಡನೆ ಹಂಚಿಕೊಂಡಾಗ ಸಿಗುವ ಖುಷಿ ಮನಸಿಗೆ ತುಂಬಾನೆ ನೆಮ್ಮದಿ ಕೊಡುತ್ತದೆ ಅಲ್ವಾ ?
havdu 🙂
I think atanige niv car na atiyagi esta padod gottirbek , nimge help ast dairya elde hogirbek
🙂
Plot twist: That driver is reading this post
Evaga yav car use madta idira madam
XUV and jaguar 🙂
🤣🤣🤣🤣
Funny mam nanu driver nangu driver job edre kodi
Sorry mam
Nanu ಮೊದಲೇ ನೋಡ್ಕೊಬೇಕಿತ್ತು ನಿಮ್ಮನ ಕನ್ನಡದಲ್ಲಿ ಬರೆಯಿರಿ ಅಂತ ಹೇಳಿದೆ
thats ok 🙂
He afraid to talk about this matter with you …. That’s it
yes
A car en madudra
Yes..it is true he must agree what he done that wrong thing……..
🙂
Your so open minded girl…MJ
🙂
Nice ma’am..interesting story..nice blog😍
Thank you 🙂
Mam super I am thinking to make short film on it thank you.
🙂
Cover ಹಾಕ್ತಿದ್ರೂ ನೀವು ಬೆಳಿಗ್ಗೇನೇ ನೋಡ್ತಿದ್ರಿ. ಆದರೂ ನಿಮ್ಮನ್ನು ಯಾಮಾರಿಸಿದ ಡ್ರೈವರ್ next ದಿನದಿಂದ escape ಆಗಿದ್ದು ಕೇಳಿ ಪಾಪ ಅನಿಸ್ತಿದೆ.
😀