ಮೊನ್ನೆ ಫ್ರೆಂಡ್ ಕಾಲ್ ಮಾಡಿದ್ಲು. ‘ಏನು.. ವರ್ಕ್ ಫ್ರಮ್ ಹೋಮಾ?’ ಅಂತ ಕೇಳ್ದೆ. ‘ಇಲ್ಲ.. ವರ್ಕ್ ಎಟ್ ಆಫೀಸೇ’ ಅಂದ್ಲು. ‘ಲಾಕ್ಡೌನ್ ಸಡಿಲ ಮಾಡಿದ್ರಲ್ವಾ, ಸೋ ಆಫೀಸಿಗೆ ಬರೋಕ್ ಹೇಳಿದ್ರು..’ ಅಂತಂದ್ಲು. ಹಾಗೆ ಎಲ್ಲ ಮಾತಾಡ್ತಾ, ‘ಅಬ್ಬಾ.. ಏನ್ ಸೆಕೆ..’ ಅಂದ್ಲು. ‘ಎಸಿ ಇಲ್ವಾ?’ ಕೇಳಿದ್ಕೆ, ‘ಕೊರೊನಾ ಇರೋದ್ರಿಂದ ಎಸಿ ಡಿಸ್ಕನೆಕ್ಟ್ ಮಾಡಿದಾರೆ. ಅಟ್ಲೀಸ್ಟ್ ಫ್ಯಾನ್ಸ್ ಇದ್ದಿದ್ರೆ ಚೆನ್ನಾಗಿರ್ತಿತ್ತು..’ ಅಂತಿದ್ದವಳು, ತಕ್ಷಣ ‘ಮೀಟಿಂಗ್ ಶುರುವಾಯಿತು’ ಅಂತ ಕಾಲ್ ಕಟ್ ಮಾಡಿದ್ಲು.
ಅವಳು ಮಾತು ಮುಗಿಸ್ತಿದ್ದಂಗೆ ನಂಗೂ ಹಾಗೇ ಅನಿಸೋಕೆ ಶುರುವಾಯ್ತು. ಅದೇ.. ‘ಫ್ಯಾನ್ಸ್ ಇದ್ದಿದ್ರೆ..’ ಅಂತ. ಹಹಹ.. ಇಲ್ಲೇನೂ ಸೆಕೆ ಇಲ್ಲ, ಎಸಿ ಇದೆ. ನಾನು ಹೇಳ್ತಿರೋದು ಆ ಫ್ಯಾನ್ ಅಲ್ಲ, ನನ್ನ ಫ್ಯಾನ್ಸ್ ಬಗ್ಗೆ.. ಐ ಮೀನ್ ನಿಮ್ ಬಗ್ಗೆ. ಯಾಕಂದ್ರೆ, ಈ ಲಾಕ್ಡೌನ್ ಟೈಮಲ್ಲಿ ನಾನು ಜಾಸ್ತಿ ಮಿಸ್ ಮಾಡ್ಕೊಳ್ತಿರೋದು ನನ್ನ ಅಭಿಮಾನಿಗಳನ್ನು.
ಕೊರೊನಾ, ಕ್ವಾರಂಟೈನ್, ಲಾಕ್ಡೌನ್ ಅಂತೆಲ್ಲ ಇರದಿದ್ರೆ ಈ ಟ್ವೆಂಟಿಟ್ವೆಂಟಿಯಲ್ಲಿ ಈಗಾಗಲೇ ನಾನು ನಿಮ್ಮನ್ನೆಲ್ಲ ಅದೆಷ್ಟು ಸಲ ಮೀಟ್ ಮಾಡಿರ್ತಿದ್ದೆ ಅಲ್ವಾ? ಅಂದ್ರೆ.. ನೀವೆಲ್ಲ ಅದೆಷ್ಟು ಸಲ ನನಗೆ ಸಿಕ್ಕಿರುತಿದ್ರಿ? ಆದ್ರೆ ಈಗ ಅದೆಲ್ಲ ಮಿಸ್ಸಿಂಗ್.

ಕಳೆದ ವರ್ಷದ ಹಾಗೆ ಈ ವರ್ಷವೂ ನನ್ನ ಅಕೌಂಟಲ್ಲಿ ಏಳೆಂಟು ಸಿನಿಮಾ ಇವೆ. ಸಿನಿಮಾ ಮುಹೂರ್ತ, ಸಾಂಗ್ ರಿಲೀಸ್, ಟೀಸರ್-ಟ್ರೇಲರ್ ಲಾಂಚ್, ಸಿನಿಮಾ ರಿಲೀಸ್ ಅಂತ ಏನಂದ್ರೂ ತಿಂಗಳಲ್ಲಿ 2-3 ಇವೆಂಟ್ಸ್, ಜೊತೆಗೆ ಪ್ರೆಸ್ಮೀಟ್ ಇರುತ್ತಿದ್ವು. ಇದರ ನಡುವೆ ಶೂಟಿಂಗ್. ಈ ಎಲ್ಲದ್ರಲ್ಲೂ ಒಂದಲ್ಲ ಒಂದು ಕಡೆ ನೀವೊಂದಷ್ಟು ಫ್ಯಾನ್ಸ್ ನನ್ನನ್ನು ನೋಡೋಕೆ, ಮಾತಾಡ್ಸೋಕೆ ಅಂತ ಬರ್ತಿದ್ರಿ. ಪ್ರತಿ ವೀಕೆಂಡ್ ಮನೆ ಹತ್ರ ನನ್ನ ನೋಡೋಕೆ ಬರ್ತಿದ್ರಿ. ಇನ್ನು ಸಿನಿಮಾ ರಿಲೀಸ್ ಆದಾಗ ಥಿಯೇಟರ್ ವಿಸಿಟ್ ಅಂತ ನಾನೇ ನೀವಿದ್ದಲ್ಲಿಗೆ ಬರ್ತಿದ್ದೆ. ಒಟ್ನಲ್ಲಿ ನಂಗೆ ಫ್ಯಾನ್ಸ್ ಜೊತೆ ಮೀಟ್ ಆಗೋಕೆ ತುಂಬಾ ಅವಕಾಶಗಳು ಸಿಗ್ತಿದ್ವು. ನಿಮ್ ಜೊತೆ ಮಾತು, ಸೆಲ್ಫಿ, ಸಿನಿಮಾ ಬಗ್ಗೆ ನಿಮ್ ಅಭಿಪ್ರಾಯ ಎಲ್ಲ ಇರ್ತಿದ್ವು.
ಆದ್ರೆ ಕೊರೊನಾದಿಂದ ಲಾಕ್ಡೌನ್ ಆಗಿರೋದ್ಕೆ ಶೂಟಿಂಗ್ ಇಲ್ಲ, ಸಿನಿಮಾ ರಿಲೀಸ್ ಇಲ್ಲ, ಯಾವ ಇವೆಂಟ್ಸೂ ಇಲ್ಲ. ಅದ್ಕೆ ನನ್ನ ನಿಮ್ಮ ಭೇಟಿನೇ ಆಗ್ತಿಲ್ಲ. ಅಫ್ಕೋರ್ಸ್ ಸೋಷಿಯಲ್ ಮೀಡಿಯಾದಲ್ಲಿ ನೀವೆಲ್ಲ ಟಚ್ನಲ್ಲಿದೀರಿ. ಆದ್ರೆ ಹತ್ತಿರದಿಂದ ಭೇಟಿ ಮಾಡ್ತಿದ್ದ ಆ ಕ್ಷಣಗಳ ಖುಷಿ ಖಂಡಿತ ಮಿಸ್ ಮಾಡ್ಕೋತಿದೀನಿ. ನನ್ನ ಫ್ರೆಂಡ್ ಹೇಳ್ದಂಗೆ ‘ಫ್ಯಾನ್ಸ್ ಇದ್ದಿದ್ರೆ..’ ಅಂತ ನಂಗೂ ಅನಿಸ್ತಿದೆ.
ಮೇ 17ಕ್ಕೆ ಲಾಕ್ಡೌನ್ 3 ಮುಗಿಯುತ್ತೆ. ಆದ್ರೆ ಲಾಕ್ಡೌನ್ ಮತ್ತೆ ಎಕ್ಸ್ಟೆಂಡ್ ಆಗುತ್ತಾ ಇಲ್ವೋ ಅನ್ನೋದು ಇನ್ನೂ ಕ್ಲಿಯರ್ ಇಲ್ಲ. 17ಕ್ಕೇ ಮುಗಿದ್ರೂನು ಸಿನಿಮಾ ರಿಲೀಸ್, ಶೂಟಿಂಗ್ ಎಲ್ಲ ಸದ್ಯಕ್ಕಂತೂ ಡೌಟು. ಆದ್ರೆ ಒಂದಂತೂ ಕ್ಲಿಯರ್.. ಅಲ್ಲೀವರ್ಗೂ ನಾನು ಫ್ಯಾನ್ಸ್ನ ಖಂಡಿತ ಮಿಸ್ ಮಾಡ್ಕೋತಿರ್ತೀನಿ.
-ಹರಿಪ್ರಿಯಾ
Bhavanegalige prathikriye doretagale artha mooduvudu… Nimma anisikegalli agaadha aatmiyate ide… Adakke abhimanigalu sagaradalegalante Ododi bandu tamma abhipraaya vyakthapadisuttare…
I love you darling I miss you so much
Super nivu channagi kanutira mate nivu live bani navu mataduteva
ಫೈನ್, career, ಅಕ್ತಿಂಗ, home maintain ಮಾಡಿ ದೀ ರ ಹಾಗೇ production home ಮಾಡಿ, Good Luck
nanna prakaara onlinena moolaka sneha sambhandagalu, sambhandita kalpanegala parichayakke maatra seemita haagu manushyara bhaavanegala sparhate, nija sneha sambhandagala vriddhige manushyarolagondante sakala jeevigalu indigoo, mundeyoo ‘offline’nanne avalambisabekaagiruvudu belakinashte satyavembudu ee bagge nanna abhipraayavashte.
ನಾನು ನಿನ್ನನ್ನು ಕಳೆದುಕೊಂಡಿದ್ದೇನೆ. ನಾನು ಯಾವಾಗಲೂ ನಿಮ್ಮ ಬಗ್ಗೆ ಕನಸು ಕಾಣುತ್ತೇನೆ
Jaguar XE
Co incidentally watching ಎಲ್ಲಿದ್ದೆ ಇಲ್ಲಿ ತನಕ now. 😊😊
I like your articles. ತುಂಬಾ ಚೆನ್ನಾಗಿ ಬರೀತಿರ. You are an inspiration to me to write more. 👌
Thank you 🙂